Upcoming Electric Scooters: ಗಗನಮುಖಿಯಾದ ಪೆಟ್ರೋಲ್ ದರ, ಚಿಂತೆ ಬಿಟ್ಟು ಈ ವರದಿ ಓದಿ

Upcoming Electric Scooters: ಭಾರತೀಯ ಮಾರುಕಟ್ಟೆಯಲ್ಲಿ, ಅದರಲ್ಲೂ ವಿಶೇಷವಾಗಿ ದ್ವಿಚಕ್ರ ವಾಹನ ವಿಭಾಗದಲ್ಲಿ ಎಲೆಕ್ಟ್ರಿಕ್ ವಾಹನಗಳ ಬೇಡಿಕೆ ವೇಗವಾಗಿ ಹೆಚ್ಚುತ್ತಿದೆ.

Upcoming Electric Scooters: ಭಾರತೀಯ ಮಾರುಕಟ್ಟೆಯಲ್ಲಿ, ಅದರಲ್ಲೂ ವಿಶೇಷವಾಗಿ ದ್ವಿಚಕ್ರ ವಾಹನ ವಿಭಾಗದಲ್ಲಿ ಎಲೆಕ್ಟ್ರಿಕ್ ವಾಹನಗಳ ಬೇಡಿಕೆ ವೇಗವಾಗಿ ಹೆಚ್ಚುತ್ತಿದೆ. ಗ್ರಾಹಕರ ಈ ಆಸಕ್ತಿಯಯನ್ನುಗಮನದಲ್ಲಿಟ್ಟುಕೊಂಡು ವಾಹನ ತಯಾರಕರು ಈ ವಿಭಾಗದಲ್ಲಿ ಒಂದಕ್ಕಿಂತ ಒಂದು ಹೊಸ ಮಾದರಿಗಳನ್ನು ಪರಿಚಯಿಸಲು ಪ್ರಾರಂಭಿಸುತ್ತಿದ್ದಾರೆ. ಈ ವರ್ಷ, ಅನೇಕ ಹೊಸ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಮಾರುಕಟ್ಟೆಯಲ್ಲಿ ಲಗ್ಗೆ ಇದುತ್ತಿದ್ದು, ಇವು ಕಡಕ್ ಡ್ರೈವಿಂಗ್ ರೇಂಜ್ ಜೊತೆಗೆ ಉತ್ತಮ ಕಾರ್ಯಕ್ಷಮತೆಯನ್ನು ಹೊಂದಿವೆ ಎನ್ನಲಾಗುತ್ತಿದೆ. ಹಾಗಾದರೆ ಬನ್ನಿ ಭವಿಷ್ಯದಲ್ಲಿ ಬಿಡುಗಡೆಯಾಗುತ್ತಿರುವ ಈ ಇ-ಸ್ಕೂಟರ್ (Electric Scooter) ಗಳ ಹೆಚ್ಚಿನ ಮಾಹಿತಿ ತಿಳಿದುಕೊಳ್ಳೋಣ.

 

ಇದನ್ನೂ ಓದಿ-ಎಲೆಕ್ಟ್ರಿಕ್ ಸ್ಕೂಟರ್ ತಯಾರಿಕೆಗೆ ಮುಂದಾದ OLA

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

1. Ola Electric Scooter: ದೇಶದ ಮುಂಚೂಣಿಯಲ್ಲಿರುವ ಕ್ಯಾಬ್ ಸೇವೆ ಒದಗಿಸುವ Ola ಶೀಘ್ರದಲ್ಲಿಯೇ ದೇಶೀಯ ಮಾರುಕಟ್ಟೆಯಲ್ಲಿ ತನ್ನ ಮೊದಲ ಇ-ಸ್ಕೂಟರ್ ಬಿಡುಗಡೆ ಮಾಡಲಿದೆ.ಇತ್ತೀಚೆಗಷ್ಟೇ, ಈ ಸ್ಕೂಟರ್ ಅನ್ನು ಪರೀಕ್ಷೆಯ ವೇಳೆ ಗುರುತಿಸಲಾಗಿದೆ. ಓಲಾ ಕಳೆದ ವರ್ಷ ನೆದರ್ಲೆಂಡ್ಸ್‌ನ ಎಲೆಕ್ಟ್ರಿಕ್ ಸ್ಕೂಟರ್ ಬ್ರಾಂಡ್ ಎಟರ್ಗೋವನ್ನು ಸ್ವಾಧೀನಪಡಿಸಿಕೊಂಡಿದೆ. ಅಟಾರ್ಗೊದ ತಂತ್ರಜ್ಞಾನ ಮತ್ತು ವೈಶಿಷ್ಟ್ಯಗಳನ್ನು ಕಂಪನಿಯು ತನ್ನ ಮುಂಬರುವ ಸ್ಕೂಟರ್‌ನಲ್ಲಿ ಬಳಸಲಿದೆ. ಮಾಧ್ಯಮ ವರದಿಗಳ ಪ್ರಕಾರ, ಕಂಪನಿಯು ಭಾರತೀಯ ಆವೃತ್ತಿಯಲ್ಲಿ 1.16 ಕಿಲೋವ್ಯಾಟ್ ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಅನ್ನು ಬಳಸಬಹುದು. ಒಂದೇ ಚಾರ್ಜ್‌ನಲ್ಲಿ, ಈ ಸ್ಕೂಟರ್ 80 ಕಿಲೋಮೀಟರ್ ವರೆಗೆ ಡ್ರೈವಿಂಗ್ ರೇಂಜ್ ನೀಡುತ್ತದೆ. ಇದರಲ್ಲಿ ಬಳಸಲಾಗಿರುವ ವಿದ್ಯುತ್ ಮೋಟರ್ 6 ಕಿ.ವ್ಯಾಟ್ ಮತ್ತು 50 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಸ್ಕೂಟರ್ 7 ಇಂಚಿನ ಫುಲ್ ಕಲರ್ ಇನ್ಸ್ಟ್ರುಮೆಂಟ್ ಜೊತೆಗೆ  ಸ್ಮಾರ್ಟ್ಫೋನ್ ಸಂಪರ್ಕ ವ್ಯವಸ್ಥೆಯನ್ನು ಸಹ ಹೊಂದಿರುತ್ತದೆ.

2 /5

2. Okinawa Cruiser: ಇತ್ತೀಚೆಗಷ್ಟೇ ಮುಕ್ತಾಯಗೊಂಡ ಆಟೋ ಎಕ್ಸ್‌ಪೋದಲ್ಲಿ ಒಕಿನಾವಾ ತನ್ನ ಕ್ರೂಸರ್ ಮ್ಯಾಕ್ಸಿ ಸ್ಕೂಟರ್ ಅನ್ನು ಪರಿಚಯಿಸಿತ್ತು. ವರದಿಗಳ ಪ್ರಕಾರ, ಕಂಪನಿಯು ಈ ಸ್ಕೂಟರ್‌ನಲ್ಲಿ 4 ಕಿಲೋವ್ಯಾಟ್ ಸಾಮರ್ಥ್ಯದ ಡಿಟ್ಯಾಚೇಬಲ್ ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್ ಅನ್ನು ಬಳಸಿದೆ. ಈ ಸ್ಕೂಟರ್ ಒಂದೇ ಚಾರ್ಜ್‌ನಲ್ಲಿ 120 ಕಿ.ಮೀ ವರೆಗೆ ಡ್ರೈವಿಂಗ್ ರೇಂಜ್ ನೀಡುತ್ತದೆ. ಇದು ಗಂಟೆಗೆ 100 ಕಿ.ಮೀ ವೇಗವನ್ನು ಹೊಂದಿರುತ್ತದೆ ಮತ್ತು ಕೀ-ಲೆಸ್ ಎಂಟ್ರಿ, ಆಂಟಿ ಥೆಫ್ಟ್ ಅಲಾರ್ಮ್, ಅಲ್ಯೂಮಿನಿಯಂ ಅಲಾಯ್ ವೀಲ್ಸ್ ಮತ್ತು ಯುಎಸ್ಬಿ ಚಾರ್ಜಿಂಗ್ ಪೋರ್ಟ್ ಮುಂತಾದ ವೈಶಿಷ್ಟ್ಯಗಳನ್ನು ಹೊಂದಿರಲಿದೆ.

3 /5

3. Hero Electric AE-29: ದೇಶದ ಪ್ರಮುಖ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಹೀರೋ ಎಲೆಕ್ಟ್ರಿಕ್ ಕೂಡ ಶೀಘ್ರದಲ್ಲೇ ತನ್ನ ಹೊಸ ಸ್ಕೂಟರ್ ಎಇ -29 ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ. ಹಿಂದಿನ ಆಟೋ ಎಕ್ಸ್‌ಪೋದಲ್ಲಿ ಕಂಪನಿಯು ಈ ಸ್ಕೂಟರ್ ಅನ್ನು ಪರಿಚಯಿಸಿತ್ತು. ಇದು 1 ಕಿ.ವ್ಯಾ ಎಲೆಕ್ಟ್ರಿಕ್ ಮೋಟರ್ ಮತ್ತು 3.5 ಕಿ.ವ್ಯಾ ಸಾಮರ್ಥ್ಯದ ಲಿಥಿಯಂ ಬ್ಯಾಟರಿಯನ್ನು ಬಳಸುವ ಹೈಸ್ಪೀಡ್ ಸ್ಕೂಟರ್ ಆಗಿರುತ್ತದೆ. ಸ್ಕೂಟರ್ ಗಂಟೆಗೆ ಗರಿಷ್ಠ 55 ಕಿ.ಮೀ ವೇಗದಲ್ಲಿ ಚಲಿಸುತ್ತದೆ. ಆದೆ, ಇದರ ಡ್ರೈವಿಂಗ್ ರೇಂಜ್ ಬಗ್ಗೆ ಇದುವರೆಗೆ ಯಾವುದೇ ಮಾಹಿತಿ ಪ್ರಕಟವಾಗಿಲ್ಲ.

4 /5

4. Hero eMaestro: ವಿಶ್ವದ ಅತಿದೊಡ್ಡ ದ್ವಿಚಕ್ರ ವಾಹನ ತಯಾರಕ ಹೀರೋ ಮೊಟೊಕಾರ್ಪ್ ಕೂಡ ತನ್ನ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ದೇಶೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಿದೆ. ಕಂಪನಿಯ ಅಧ್ಯಕ್ಷ ಪವನ್ ಮುಂಜಾಲ್ ಅವರೇ ಖುದ್ದು ಇ-ಮೆಸ್ಟ್ರೋ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು ಎಂದು ದೃಢಪಡಿಸಿದ್ದಾರೆ. ವರದಿಗಳ ಪ್ರಕಾರ, ಈ ಸ್ಕೂಟರ್ ಒಂದೇ ಚಾರ್ಜ್‌ನಲ್ಲಿ 80 ಕಿ.ಮೀ ವರೆಗೆ ಡ್ರೈವಿಂಗ್ ರೇಂಜ್ ನೀಡುತ್ತದೆ ಮತ್ತು ಇದರ ಬೆಲೆ 1.25 ಲಕ್ಷ ರೂ. ಆದರೆ, ಈ ಸ್ಕೂಟರ್ ನ ಇತರ ವೈಶಿಷ್ಟ್ಯಗಳಿಗಾಗಿ ಇದರ ಬಿಡುಗಡೆಗಾಗಿ ಕಾಯಬೇಕು.

5 /5

5. Suzuki Burgman Electric: ಜಪಾನಿನ ವಾಹನ ತಯಾರಕ ಕಂಪನಿ ಸುಜುಕಿ  ಕೂಡ ತನ್ನ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲು ಸಿದ್ಧತೆ ನಡೆಸುತ್ತಿದೆ, ಕಂಪನಿಯು ತನ್ನ ಪ್ರಸಿದ್ಧ ಸ್ಕೂಟರ್ ಬರ್ಗ್‌ಮನ್ ಅನ್ನು ಎಲೆಕ್ಟ್ರಿಕ್ ಆವೃತ್ತಿಯಲ್ಲಿ  ಪರಿಚಯಿಸಲು ತಯಾರಿ ನಡೆಸುತ್ತಿದೆ ಎಂದು ತಿಳಿದುಬಂದಿದೆ ಬಿಳಿ-ನೀಲಿ ಬಣ್ಣದಲ್ಲಿರುವ ಈ ಸ್ಕೂಟರ್ ಅನ್ನು ಅದರ ಪರೀಕ್ಷೆಯ ವೇಳೆ ನೋಡಲಾಗಿದೆ. ಕಂಪನಿಯು 3 ರಿಂದ 4 ಕಿ.ವ್ಯಾ ಸಾಮರ್ಥ್ಯದ ಲಿಥಿಯಂ ಬ್ಯಾಟರಿಯನ್ನು ಬಳಸಬಹುದು. ವರದಿಗಳ ಪ್ರಕಾರ, ಈ ಸ್ಕೂಟರ್ ಒಂದೇ ಚಾರ್ಜ್‌ನಲ್ಲಿ 80 ಕಿಲೋಮೀಟರ್ ವರೆಗೆ ಡ್ರೈವಿಂಗ್ ರೇಂಜ್ ನೀಡುತ್ತಿದೆ ಎನ್ನಲಾಗುತ್ತಿದೆ. ಇದರ ಬೆಲೆ ಸುಮಾರು 1.2 ಲಕ್ಷ ರೂ. ಆಗಿರುವ ಸಾಧ್ಯತೆಯನ್ನು ವರ್ತಿಸಲಾಗುತ್ತಿದೆ.