Instagram Followers: ಇನ್’ಸ್ಟಾಗ್ರಾಂನಲ್ಲಿ ಅತೀ ಹೆಚ್ಚು ಫಾಲೋವರ್ಸ್ ಹೊಂದಿರುವ ಟಾಪ್ 5 ಸೆಲೆಬ್ರಿಟಿಗಳು: ಭಾರತೀಯರೂ ಇದ್ದಾರೆ!

Celebrities with Most Followers on Instagram: ಐಕಾನಿಕ್ ಫುಟ್‌ಬಾಲ್ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೊರಿಂದ ಹಿಡಿದು ಸೆಲೆನಾ ಗೊಮೆಜ್’ವರೆಗೆ ಇನ್’ಸ್ಟಾಗ್ರಾಂನಲ್ಲಿ ಅತೀ ಹೆಚ್ಚು ಫಾಲೋವರ್ಸ್’ಗಳನ್ನು ಹೊಂದಿರುವ ಟಾಪ್ 5 ಸೆಲೆಬ್ರಿಟಿಗಳ ಬಗ್ಗೆ ಇಂದು ನಿಮಗೆ ಮಾಹಿತಿ ನೀಡಲಿದ್ದೇವೆ.

1 /9

ಇನ್’ಸ್ಟಾಗ್ರಾಂ ಮೊದಲು ಆರಂಭಿಸಿದ್ದು ಕೇವಲ ಫೋಟೋಗಳನ್ನು ಹಂಚಿಕೊಳ್ಳಲು. ಇದನ್ನು ಚಾಲ್ತಿಗೆ ತಂದಿದ್ದು 2010ರಲ್ಲಿ. ಈ ಅಪ್ಲಿಕೇಶನ್ ತ್ವರಿತವಾಗಿ ಜನಪ್ರಿಯತೆಯನ್ನು ಗಳಿಸಿತು. ಅದೇ ವರ್ಷದ ಡಿಸೆಂಬರ್‌ನಲ್ಲಿ, ಒಂದು ಮಿಲಿಯನ್‌ಗಿಂತಲೂ ಹೆಚ್ಚು ನೋಂದಾಯಿತ ಬಳಕೆದಾರರನ್ನು ಹೊಂದಿತ್ತು.

2 /9

2012 ರಲ್ಲಿ, Instagram ಅನ್ನು $1 ಬಿಲಿಯನ್‌’ಗೆ ಫೇಸ್‌ಬುಕ್ ಸ್ವಾಧೀನಪಡಿಸಿಕೊಂಡಿತು. ಇದು ಈಗ ಪ್ರಪಂಚದಾದ್ಯಂತದ ವಿವಿಧ ವ್ಯಕ್ತಿಗಳು ಬಳಸುವ ಅತ್ಯಂತ ಜನಪ್ರಿಯ ಸಾಮಾಜಿಕ ಮಾಧ್ಯಮ ಸೈಟ್‌’ಗಳಲ್ಲಿ ಒಂದಾಗಿದೆ. ಇನ್‌’ಸ್ಟಾಗ್ರಾಮ್‌’ನಲ್ಲಿ ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವ ಟಾಪ್ ಐದು ಸೆಲೆಬ್ರಿಟಿಗಳ ಪಟ್ಟಿ ಇಲ್ಲಿದೆ.

3 /9

ಕ್ರಿಸ್ಟಿಯಾನೋ ರೊನಾಲ್ಡೊ: 567 ಮಿಲಿಯನ್ ಫಾಲೋವರ್ಸ್‌’ನೊಂದಿಗೆ ಇನ್‌ಸ್ಟಾಗ್ರಾಮ್‌ನಲ್ಲಿ ಹೆಚ್ಚು ಫಾಲೋವರ್ಸ್ ಹೊಂದಿರುವ ವ್ಯಕ್ತಿ ಕ್ರಿಸ್ಟಿಯಾನೋ ರೊನಾಲ್ಡೊ.

4 /9

ಲಿಯೋನೆಲ್ ಮೆಸ್ಸಿ: ಅತ್ಯಂತ ಪ್ರಸಿದ್ಧ ಫುಟ್‌ಬಾಲ್ ಆಟಗಾರರಲ್ಲಿ ಒಬ್ಬರಾದ ಲಿಯೋನೆಲ್ ಮೆಸ್ಸಿ ಪ್ರಸ್ತುತ 447 ಮಿಲಿಯನ್ ಫಾಲೋವರ್ಸ್’ನೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ.

5 /9

ಸೆಲೆನಾ ಗೊಮೆಜ್: ಈ ಪ್ರಸಿದ್ಧ ಪಾಪ್ ಸಿಂಗರ್ Instagram ನಲ್ಲಿ 405 ಮಿಲಿಯನ್ ಫಾಲೋವರ್ಸ್’ನ್ನು ಹೊಂದಿದ್ದಾರೆ. ಈ ಮೂಲಕ 400ರ ಗಡಿ ದಾಟಿದ ಮೊದಲ ಮಹಿಳೆಯಾಗಿದ್ದಾರೆ. ಮಾನಸಿಕ ಆರೋಗ್ಯದ ಪ್ರಾಮುಖ್ಯತೆಯ ಕುರಿತು ವಿಡಿಯೋಗಳನ್ನು ಈಕೆ ಆಗಾಗ್ಗೆ ಶೇರ್ ಮಾಡುತ್ತಿರುತ್ತಾರೆ.

6 /9

ಕೈಲಿ ಜೆನ್ನರ್: ಪ್ರಸಿದ್ಧ ಅಮೇರಿಕನ್ ಮಾಡೆಲ್, ಸಮಾಜವಾದಿ ಮತ್ತು ಉದ್ಯಮಿ ಕೈಲಿ ಜೆನ್ನರ್ Instagram ನಲ್ಲಿ 384 ಮಿಲಿಯನ್ ಫಾಲೋವರ್ಸ್’ಗಳನ್ನು ಹೊಂದಿದ್ದಾರೆ.

7 /9

ಡ್ವೇನ್ "ದಿ ರಾಕ್" ಜಾನ್ಸನ್: ಮಾಜಿ WWE ಚಾಂಪಿಯನ್ ಮತ್ತು ಹಾಲಿವುಡ್ ಚಲನಚಿತ್ರ ತಾರೆ ಡ್ವೇನ್ ಜಾನ್ಸನ್ ಅವರು 371 ಮಿಲಿಯನ್ ಫಾಲೋವರ್ಸ್’ಗಳನ್ನು Instagram ನಲ್ಲಿ ಹೊಂದಿದ್ದಾರೆ. ಅಗ್ರ ಐದು ಪ್ರಸಿದ್ಧ ವ್ಯಕ್ತಿಗಳಲ್ಲಿ ಐದನೇ ಸ್ಥಾನದಲ್ಲಿದ್ದಾರೆ.

8 /9

ಇನ್ನು ಭಾರತದಲ್ಲಿ ಕ್ರಿಕೆಟಿಗ ವಿರಾಟ್ ಕೊಹ್ಲಿ ಬಹಳ ಹಿಂದಿನಿಂದಲೂ ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವ ಸೆಲೆಬ್ರಿಟಿಯಾಗಿದ್ದಾರೆ. 242 ಫಾಲೋರ್ವಸ್ ಹೊಂದಿರುವ ಇವರು ಮೊದಲ ಸ್ಥಾನದಲ್ಲಿದ್ದಾರೆ.

9 /9

ಗ್ಲೋಬಲ್ ಐಕಾನ್ ಪ್ರಿಯಾಂಕಾ ಚೋಪ್ರಾ ಹಾಲಿವುಡ್ ಮತ್ತು ಬಾಲಿವುಡ್ ಎರಡರಲ್ಲೂ ಬಹಳ ಸಮಯದಿಂದ ಪ್ರಾಬಲ್ಯ ಸಾಧಿಸುತ್ತಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ 85.9 ಮಿಲಿಯನ್ ಫಾಲೋವರ್ಸ್ ಹೊಂದಿರುವ ಇವರು 2ನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ.