ಟೆಸ್ಟ್ ಪಂದ್ಯದ ಮಧ್ಯೆ ಪತ್ನಿ ಜೊತೆ ಭರ್ಜರಿಯಾಗಿ ಹೋಳಿ ಆಡಿದ ಟೀಂ ಇಂಡಿಯಾದ ಈ ಸ್ಟಾರ್ ಬೌಲರ್: ಫೋಟೋ ನೋಡಿ

Ravindra Jadeja Riva Solanki Holi Celebration: ದೇಶಾದ್ಯಂತ ಹೋಳಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗಿದೆ. ಇದೇ ವೇಳೆ ನಾಲ್ಕನೇ ಟೆಸ್ಟ್ ಪಂದ್ಯಕ್ಕಾಗಿ ಟೀಂ ಇಂಡಿಯಾ ಅಹಮದಾಬಾದ್ ತಲುಪಿದೆ. ಇದೆಲ್ಲದರ ನಡುವೆ ಟೀಂ ಇಂಡಿಯಾದ ಆಟಗಾರನೊಬ್ಬ ತನ್ನ ಪತ್ನಿಯೊಂದಿಗೆ ಹೋಳಿ ಆಚರಿಸುತ್ತಿರುವುದು ಕಂಡು ಬಂದಿದೆ. ಈ ಆಟಗಾರ ಸ್ವತಃ ತನ್ನ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ತನ್ನ ಹೆಂಡತಿಯೊಂದಿಗೆ ಭರ್ಜರಿಯಾಗಿ ಹೋಳಿ ಆಡುತ್ತಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

1 /6

ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಟೆಸ್ಟ್ ಸರಣಿಯಲ್ಲಿ ಸ್ಟಾರ್ ಆಲ್ ರೌಂಡರ್ ರವೀಂದ್ರ ಜಡೇಜಾ ಟೀಂ ಇಂಡಿಯಾದ ದೊಡ್ಡ ಹೀರೋ ಎನಿಸಿಕೊಂಡಿದ್ದಾರೆ. ಇವೆಲ್ಲದರ ನಡುವೆ ತಮ್ಮ ಪತ್ನಿ ರಿವಾ ಸೋಲಂಕಿ ಅವರೊಂದಿಗೆ ಹೋಳಿ ಆಚರಿಸುತ್ತಿರುವುದು ಕಂಡುಬಂದಿದೆ.

2 /6

ಆಲ್ ರೌಂಡರ್ ರವೀಂದ್ರ ಜಡೇಜಾ ರಿವಾ ಸೋಲಂಕಿ ಜೊತೆಗಿನ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಗಳಲ್ಲಿ, ಇಬ್ಬರೂ ಹೋಳಿ ಬಣ್ಣದಲ್ಲಿ ಮುಳುಗಿದ್ದಾರೆ.

3 /6

ಆಲ್ ರೌಂಡರ್ ರವೀಂದ್ರ ಜಡೇಜಾ ರಿವಾ ಸೋಲಂಕಿ ಜೊತೆಗಿನ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಗಳಲ್ಲಿ, ಇಬ್ಬರೂ ಹೋಳಿ ಬಣ್ಣದಲ್ಲಿ ಮುಳುಗಿದ್ದಾರೆ.

4 /6

ಫೋಟೋವನ್ನು ಹಂಚಿಕೊಂಡಿರುವ ರವೀಂದ್ರ ಜಡೇಜಾ, 'ನೆನಪುಗಳನ್ನು ಕಲೆಹಾಕುವುದು ಮತ್ತು ಸಂತೋಷವನ್ನು ಹರಡುವುದು. ಎಲ್ಲರಿಗೂ ಹೋಳಿ ಹಬ್ಬದ ಶುಭಾಶಯಗಳು!' ಎಂದು ಬರೆದುಕೊಂಡಿದ್ದಾರೆ.

5 /6

ದೀರ್ಘಕಾಲದವರೆಗೆ ಪರಸ್ಪರ ಡೇಟಿಂಗ್ ಮಾಡಿದ ನಂತರ ರವೀಂದ್ರ ಜಡೇಜಾ ಮತ್ತು ರಿವಾ 5 ಫೆಬ್ರವರಿ 2016 ರಂದು ನಿಶ್ಚಿತಾರ್ಥ ಮಾಡಿಕೊಂಡರು . ಬಳಿಕ ಅದೇ ವರ್ಷ ಏಪ್ರಿಲ್ 17 ರಂದು ವಿವಾಹವಾದರು.

6 /6

ಈ ಜೋಡಿಗೆ ಮುದ್ದಾದ ಮಗಳಿದ್ದಾಳೆ. ಅವಳ ಹೆಸರು ನಿಧಯಾ. ರಿವಾ ಆಗಾಗ್ಗೆ ಮೈದಾನದಲ್ಲಿ ಜಡೇಜಾ ಅವರನ್ನು ಹುರಿದುಂಬಿಸುವುದನ್ನು ಕಾಣಬಹುದು. ರವೀಂದ್ರ ಜಡೇಜಾ ಅವರ ಪತ್ನಿ ರಿವಾ ರಾಜಕೀಯದಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ್ದಾರೆ.