Celeb's Dog Breeds: ಈ ಸಿನಿತಾರೆಯರ ಬಳಿಯಿವೆ ದುಬಾರಿ ಬೆಲೆಯ ನಾಯಿ! ಲಕ್ಷಲಕ್ಷ ಕೊಟ್ಟು ಶ್ವಾನ ಖರೀದಿಸಿದ್ದಾರೆ ಈ ಸೌತ್‌ ಸ್ಟಾರ್‌

Tollywood stars dog breeds: ಟಾಲಿವುಡ್ ಸೆಲೆಬ್ರಿಟಿಗಳ ಕೆಲವು ನಾಯಿಮರಿಗಳು ಯಾವ ತಳಿಗೆ ಸೇರಿವೆ ಎಂಬುದನ್ನು ನಾವು ನಿಮಗೆ ತಿಳಿಸಲು ಪ್ರಯತ್ನಿಸುತ್ತಿದ್ದೇವೆ.
 

Tollywood stars dog breeds: ಇತ್ತೀಚೆಗೆ ಟಾಲಿವುಡ್ ಸೆಲೆಬ್ರಿಟಿಗಳು ಮಾತ್ರವಲ್ಲದೆ ಚಿತ್ರರಂಗದ ಬಹುತೇಕ ಎಲ್ಲಾ ಸೆಲೆಬ್ರಿಟಿಗಳು ನಾಯಿಗಳನ್ನು ಸಾಕಲು ಆಸಕ್ತಿ ತೋರಿಸುತ್ತಿದ್ದಾರೆ. ಸೆಲೆಬ್ರಿಟಿಗಳು ಸಾಕುತ್ತಿರುವ ನಾಯಿಮರಿಗಳ ತಳಿಯನ್ನು ತಿಳಿದುಕೊಳ್ಳಲು ಅನೇಕರು ಆಸಕ್ತಿ ಹೊಂದಿದ್ದಾರೆ. ಈ ಸಿನಿತಾರೆಯರು ಲಕ್ಷಗಟ್ಟಲೇ ಬೆಲೆಯ ನಾಯಿಯನ್ನು ಸಾಕಿಕೊಂಡಿದ್ದಾರೆ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ವಿಜಯ್ ದೇವರಕೊಂಡ ತಮ್ಮ ಮನೆಯಲ್ಲಿ ಸೈಬೀರಿಯನ್ ಹಸ್ಕಿ ನಾಯಿಮರಿಯನ್ನು ಸಾಕುತ್ತಿದ್ದಾರೆ. ಈ ಸೈಬೀರಿಯನ್ ನಾಯಿಯ ಬೆಲೆ ಸುಮಾರು 50 ಸಾವಿರ ರೂಪಾಯಿ. ವಿಜಯ್ ದೇವರಕೊಂಡ ಮನೆಯಲ್ಲಿ ಹೆಚ್ಚು ಸಮಯ ಕಳೆಯಲು ಇಷ್ಟಪಡುತ್ತಾರೆ.  

2 /5

ಸಮಂತಾಗೆ ನಾಯಿ ಎಂದರೆ ಎಲ್ಲಿಲ್ಲದ ಪ್ರೀತಿ. ನಾಗ ಚೈತನ್ಯ ಜೊತೆಗಿರುವಾಗ ಫ್ರೆಂಚ್ ಬುಲ್‌ಡಾಗ್ ಒಂದನ್ನು ಖರೀದಿಸಿ ಅದಕ್ಕೆ ಹ್ಯಾಶ್ ಎಂದು ಹೆಸರಿಟ್ಟಿದ್ದರು. ನಾಗ ಚೈತನ್ಯ ಜೊತೆ ಬ್ರೇಕ್ ಅಪ್ ಆದ ನಂತರ ಮೂಲ ಬುಲ್ ಡಾಗ್ ಖರೀದಿಸಿದ್ದು, ಅದಕ್ಕೆ ಸಾಶಾ ಎಂದು ಹೆಸರಿಟ್ಟಿದ್ದಾರೆ. ಈ ನಾಯಿಗಳ ಬೆಲೆ ಸುಮಾರು 9,000 ರಿಂದ 90,000. ರೂಪಾಯಿ.   

3 /5

ರಶ್ಮಿಕಾ ಕಾಕರ್ ಸ್ಪೈನಿಯಲ್ ಎಂಬ ತಳಿಯ ಶ್ವಾನ ಸಾಕಿದ್ದಾರೆ. ಶೂಟಿಂಗ್ ಗ್ಯಾಪ್‌ನಲ್ಲಿ ಅವರು ತಮ್ಮ ಪೆಟ್‌ ಜೊತೆ ಸಮಯ ಕಳೆಯಲು ಇಷ್ಟಪಡುತ್ತಾರೆ. ಇದರ ಬೆಲೆ ಸುಮಾರು 30,000 ರೂಪಾಯಿ.   

4 /5

ರಾಮ್ ಚರಣ್ ಇತ್ತೀಚೆಗೆ ಫ್ರೆಂಚ್ ಬಾರ್ಬೆಟ್ ನಾಯಿಮರಿಯನ್ನು ಖರೀದಿಸಿದ್ದಾರೆ. ಅದಕ್ಕೆ ಪ್ರಾಸ ಎಂಬ ಹೆಸರನ್ನೂ ಇಟ್ಟಿದ್ದಾರೆ. ಎಲ್ಲಿಗೆ ಹೋದರೂ ಪ್ರಾಸ ಅವರ ಜೊತೆಗಿರುತ್ತಾನೆ. ಈ ತಳಿಯ ಒಂದು ನಾಯಿಮರಿಯ ಬೆಲೆ ಒಂದು ಲಕ್ಷದಿಂದ ಎರಡೂವರೆ ಲಕ್ಷ.  

5 /5

ಕೀರ್ತಿ ಸುರೇಶ್ ಶಿಟ್ಝೂ ನಾಯಿಮರಿ ಹೊಂದಿದ್ದಾರೆ. ಇದಕ್ಕೆ ನೈಕ್ ಎಂದು ಹೆಸರಿಸರಿಟ್ಟಿದ್ದಾರೆ. ಇದರ ಹೆಸರಲ್ಲೇ ಸಾಮಾಜಿಕ ಮಾಧ್ಯಮ ಖಾತೆಯನ್ನೂ ರಚಿಸಲಾಗಿದೆ. ಮಾರುಕಟ್ಟೆಯಲ್ಲಿ ಈ ನಾಯಿ ಮರಿಯ ಬೆಲೆ ಸುಮಾರು 30 ರಿಂದ 50 ಸಾವಿರ ರೂಪಾಯಿ.