Hair Care Tips: ಕೆರಾಟಿನ್ ನಮ್ಮ ಕೂದಲು, ಚರ್ಮ ಮತ್ತು ಉಗುರುಗಳಲ್ಲಿ ಕಂಡುಬರುವ ಒಂದು ರಚನಾತ್ಮಕ ಪ್ರೋಟೀನ್ ಆಗಿದೆ. ಅದರ ಸಹಾಯದಿಂದ ನಮ್ಮ ಕೂದಲು ಉದ್ದ, ಕಪ್ಪು ಮತ್ತು ದಟ್ಟವಾಗುತ್ತವೆ (Lifestyle News In Kannada).
Hair Care Tips: ಕೆರಾಟಿನ್ ನಮ್ಮ ಕೂದಲು, ಚರ್ಮ ಮತ್ತು ಉಗುರುಗಳಲ್ಲಿ ಕಂಡುಬರುವ ಒಂದು ರಚನಾತ್ಮಕ ಪ್ರೋಟೀನ್ ಆಗಿದೆ. ಅದರ ಸಹಾಯದಿಂದ ನಮ್ಮ ಕೂದಲು ಉದ್ದ, ಕಪ್ಪು ಮತ್ತು ದಟ್ಟವಾಗುತ್ತವೆ. ದೇಹದಲ್ಲಿ ಇದರ ಕೊರತೆಯಿದ್ದರೆ, ಅದು ನೇರವಾಗಿ ನಿಮ್ಮ ಕೂದಲಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಆದರೆ, ಈ ಕೆಳಗೆ ಸೂಚಿಸಲಾಗಿರುವ ಐದು ಆಹಾರಗಳನ್ನು ನಿಯಮಿತವಾಗಿ ಸೇವಿಸಿದರೆ, ದೇಹದಲ್ಲಿ ಕೆರಾಟಿನ್ ಉತ್ಪತ್ತಿ ಹೆಚ್ಚಾಗುತ್ತದೆ ಮತ್ತು ಇದು ಒಟ್ಟಾರೆಯಾಗಿ ನಿಮ್ಮ ಸೌಂದರ್ಯವನ್ನು ಸುಧಾರಿಸುತ್ತದೆ (Lifestyle News In Kannada).
ಇದನ್ನೂ ಓದಿ-ಚಳಿಗಾಲ ಸಮೀಪಿಸುತ್ತಿದೆ, ಕೂದಲು ಉದುರುವಿಕೆ ಸಮಸ್ಯೆಯಿಂದ ಪಾರಾಗಲು ಇಂದಿನಿಂದಲೇ ಈ ಜ್ಯೂಸ್ ಸೇವನೆ ಆರಂಭಿಸಿ!
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್.
ಮೊಟ್ಟೆ ಒಂದು ಸೂಪರ್ ಫುಡ್ ಆಗಿದ್ದು ಇದನ್ನು ಬೆಳಗಿನ ಉಪಾಹಾರದಿಂದ ರಾತ್ರಿಯವರೆಗೂ ಸೇವಿಸಬಹುದು. ಇದು ಕೆರಾಟಿನ್ ಉತ್ಪಾದನೆಗೆ ಸಹಾಯ ಮಾಡುವ ಪ್ರೋಟೀನ್ ಅನ್ನು ಹೊಂದಿರುತ್ತದೆ, ಇದು ನಿಮ್ಮ ಕೂದಲನ್ನು ಆರೋಗ್ಯಕರವಾಗಿಸುತ್ತದೆ.
ಈರುಳ್ಳಿ ಎಂತಹ ಒಂದು ತರಕಾರಿ ಎಂದರೆ ಅದು ದುಬಾರಿಯಾದರೆ ವ್ಯಕ್ತಿಯ ಬಾಯಿಯ ರುಚಿ ಕೆಡುತ್ತದೆ. ಇದನ್ನು ಎಲ್ಲಾ ರೀತಿಯ ಪಾಕವಿಧಾನಗಳಲ್ಲಿ ಬಳಸಲಾಗುತ್ತದೆ. ನಿತ್ಯವೂ ಹಸಿ ಈರುಳ್ಳಿ ತಿಂದರೆ ಕೆರಾಟಿನ್ ಉತ್ಪಾದನೆ ಹೆಚ್ಚುತ್ತದೆ.
ಸಾಲ್ಮನ್ ಸಾಕಷ್ಟು ಕೊಬ್ಬಿನಾಂಶಗಳನ್ನು ಹೊಂದಿರುವ ಒಂದು ಮೀನಾಗಿದೆ, ಇದು ಯಾವಾಗಲೂ ಆರೋಗ್ಯಕ್ಕೆ ಅತ್ಯುತ್ತಮವೆಂದು ಪರಿಗಣಿಸಲ್ಪಟ್ಟಿದೆ.ಇದು ಬಯೋಟಿನ್ ಅನ್ನು ಹೊಂದಿರುತ್ತದೆ, ಇದು ಕೆರಾಟಿನ್ ಉತ್ಪಾದನೆಯನ್ನು ಉತ್ತೇಜಿಸುತ್ತದೆ ಮತ್ತು ಕೂದಲಿನ ಬೆಳವಣಿಗೆಗೆ ಸಾಕಷ್ಟು ಸಹಾಯ ಮಾಡುತ್ತದೆ.
ನೆಲದಡಿಯಲ್ಲಿ ಬೆಳೆಯುವ ಗೆಣಸು ಕೂಡ ಒಂದು ಅತ್ಯುತ್ತಮವಾದ ಆಹಾರವಾಗಿದ್ದು, ಇದರಲ್ಲಿ ಪೋಷಕಾಂಶಗಳ ಕೊರತೆ ಇಲ್ಲ ಎಂದರೆ ತಪ್ಪಾಗಲಾರದು, ಇದು ಕೆರಾಟಿನ್ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಇದನ್ನು ನೀವುಕುದಿಸಿ ತಿನ್ನಬಹುದು, ಕೆಲವರು ಇದನ್ನು ಹಾಲಿನೊಂದಿಗೆ ಬೆರೆಸಿ ತಿನ್ನಲು ಇಷ್ಟಪಡುತ್ತಾರೆ.
ಈರುಳ್ಳಿಯಂತೆಯೇ, ಬೆಳ್ಳುಳ್ಳಿಯನ್ನು ಅನೇಕ ಪಾಕವಿಧಾನಗಳಲ್ಲಿ ಬೆರೆಸಲಾಗುತ್ತದೆ, ಇದು ಎಲ್-ಸಿಸ್ಟೈನ್ ಆಗಿ ಪರಿವರ್ತನೆಗೊಳ್ಳುವ ಎನ್-ಅಸಿಟೈಲ್ಸಿಸ್ಟೈನ್ ಅನ್ನು ಸಮೃದ್ಧ ಪ್ರಮಾಣದಲ್ಲಿ ಹೊಂದಿರುತ್ತದೆ, ಇದು ಕೆರಾಟಿನ್ನಲ್ಲಿ ಕಂಡುಬರುವ ಒಂದು ರೀತಿಯ ಅಮೈನೋ ಆಮ್ಲವಾಗಿದೆ. ಇದರಿಂದಾಗಿ ಬೆಳ್ಳುಳ್ಳಿ ನಮ್ಮ ಕೂದಲಿಗೆ ಉತ್ತಮ ಆಹಾರವಾಗಿದೆ. (ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)