Bollywood ಎಂಟ್ರಿಗೂ ಮೊದಲು ನೌಕರಿ ಮಾಡಿದ ನಟಿ-ಮಣಿಯರು

ಬಿ-ಟೌನ್ ಗೆ ಎಂಟ್ರಿ ನೀಡುವ ಮೊದಲು ಹಲವು ನಟಿಯರು ಭಾರಿ ಸ್ಟ್ರಗಲ್ ಮಾಡಿದ್ದಾರೆ. ಅವರು ಚಿತ್ರೋದ್ಯಮಕ್ಕೆ ಕಾಲಿಡುವುದಕ್ಕೂ ಮೊದಲು ಬಿಡಿಕಾಸಿಗಾಗಿ ನೌಕರಿ ಕೂಡ ಮಾಡಿದ್ದಾರೆ.

  • Apr 20, 2020, 18:23 PM IST

ನವದೆಹಲಿ: ಬಾಲಿವುಡ್ ನಲ್ಲಿ ಹಲವಾರು ನಟಿ-ಮಣಿಯರು ಬಿ-ಟೌನ್ ನಲ್ಲಿ ತಮ್ಮ ಲಕ್ ಕಂಡುಕೊಳ್ಳುವ ಮೊದಲು ಇತರೆ ಕಡೆಗಳಲ್ಲಿಯೂ ಕೂಡ ನೌಕರಿಯನ್ನು ಮಾಡಿದ್ದಾರೆ. ಕೆಲವರು ಅವಶ್ಯಕತೆಗಾಗಿ ನೌಕರಿ ಮಾಡಿದ್ದರೆ ಕೆಲವರು ತಮ್ಮ ಹವ್ಯಾಸಕ್ಕಾಗಿ ನೌಕರಿ ಮಾಡಿದ್ದರೆ. ಆದರೆ, ಬಿಟೌನ್ ಎಂಟ್ರಿ ನೀಡುವ ಮೊದಲು ಹಲವು ನಟಿಯರು ತಮ್ಮ ಟ್ಯಾಲೆಂಟ್ ಮೇಲೆ ಹಣ ಗಳಿಸಿದ್ದಂತೂ ನಿಜ.  ಹಾಗಾದರೆ ಬನ್ನಿ ಈ ನಟಿ-ಮಣಿಯರು ಯಾರು ಮತ್ತು ಅವರು ನಿರ್ವಹಿಸಿದ ನೌಕರಿ ಯಾವುದು ನೋಡೋಣ.

1 /6

ಖ್ಯಾತ ಬಾಲಿವುಡ್ ಬೆಡಗಿ ಸೋನಾಕ್ಷಿ ಸಿನ್ಹಾ ಓರ್ವ ಫ್ಯಾಷನ್ ಡಿಸೈನರ್ ಆಗಿ ತನ್ನ ಕರಿಯರ್ ಅನ್ನು ಆರಂಭಿಸಿದ್ದರು. 2005ರಲ್ಲಿ ಬಿಡುಗಡೆಯಾಗಿದ್ದ ಚಿತ್ರ 'ಮೇರಾ ದಿಲ್ ಲೇ ಕೆ ದೇಖೋ' ಚಿತ್ರಕ್ಕಾಗಿ ವಸ್ತ್ರವಿನ್ಯಾಸ ಸಿದ್ಧಪಡಿಸಿದ್ದರು.  

2 /6

ಖ್ಯಾತ ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಯುನೈಟೆಡ್ ಕಿಂಗ್ಡಮ್ ನ ಮ್ಯಾಂಚೆಸ್ಟರ್ ಬಿಸಿನೆಸ್ ಸ್ಕೂಲ್ ಮೂಲಕ ಬಿಸಿನೆಸ್, ಫೈನಾನ್ಸ್ ಹಾಗೂ ಎಕನಾಮಿಕ್ಸ್ ನಲ್ಲಿ ಟ್ರಿಪಲ್ ಆನರ್ಸ್ ಡಿಗ್ರಿ ಪಡೆದಿದ್ದಾರೆ. ವಿದ್ಯಾಭ್ಯಾಸ ಮಾಡುವಾಗ ಪರಿಣಿತಿ ಯುನೈಟೆಡ್ ಫುಟ್ ಬಾಲ್ ಕ್ಲಬ್ ನ ಆಹಾರ ತಯಾರಿಕಾ ವಿಭಾಗದಲ್ಲಿ ಓರ್ವ ಟೀಂ ಲೀಡರ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಬಳಿಕ ಪರಿಣಿತಿ ಯಶ್ ರಾಜ್ ಸ್ಟುಡಿಯೊಸ್ ನಲ್ಲಿ ಮಾರ್ಕೆಟಿಂಗ್ ವಿಭಾಗದಲ್ಲಿ ಸಲಹೆಗಾರ್ತಿಯಾಗಿ ಕಾರ್ಯನಿರ್ವಹಿಸಿದ್ದಾಳೆ.

3 /6

2008 ರಲ್ಲಿ ಮೂಡಿ ಬಂದ 'ಫ್ಯಾಷನ್ ಚಿತ್ರದ ಮೂಲಕ ಬಿಟೌನ್ ಗೆ ಎಂಟ್ರಿ ನೀಡಿರುವ ಮುಘ್ಧಾ ಗೋಡ್ಸೆ, ಚಿತ್ರರಂಗಕ್ಕೆ ಕಾಲಿಡುವುದಕ್ಕೂ ಮೊದಲು ಅವರು ಪೆಟ್ರೋಲ್ ಪಂಪ್ ನಲ್ಲಿ ಕೆಲಸ ಮಾಡಿದ್ದಾರಂತೆ.

4 /6

ಬಾಲಿವುಡ್ ನಲ್ಲಿ ಶ್ರೀಲಂಕಾ ಬ್ಯೂಟಿ ಎಂದೇ ಖ್ಯಾತ ಜಕ್ವೆಲಿನ್ ಫರ್ನಾಂಡಿಸ್ ಬಾಲಿವುಡ್  ನಲ್ಲಿ ತನ್ನ ಕರಿಯರ್ ಆರಂಭಕ್ಕೂ ಮೊದಲು ಶ್ರೀಲಂಕಾದಲ್ಲಿ ಓರ್ವ ಟಿವಿ ರಿಪೋರ್ಟರ್ ಆಗಿ ಕಾರ್ಯನಿರ್ವಹಿಸಿದ್ದಾಳೆ. ಅಷ್ಟೇ ಅಲ್ಲ ಈ ಕಾಲದಲ್ಲಿ ಅವರು ಅಲ್ಲಿ ನಡೆಯುತ್ತಿದ್ದ ಸಾಮಾಜಿಕ ತಿಕ್ಕಾಟದ ಕುರಿತು ಕೂಡ ರಿಪೋರ್ಟಿಂಗ್ ಮಾಡಿದ್ದಾರೆ.

5 /6

ಚಲನ ಚಿತ್ರರಂಗದಲ್ಲಿ ಪದಾರ್ಪಣೆ ಮಾಡುವ ಮೊದಲು ಖ್ಯಾತ ನಟಿ ದಿಯಾ ಮಿರ್ಜಾ ನಿರಜ್ ಮಲ್ಟಿಮೀಡಿಯಾ ಸ್ಟುಡಿಯೊಸ್ ಹೆಸರಿನ ಮೀಡಿಯಾ ಕಂಪನಿಯಲ್ಲಿ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಆಗಿ ಸೇವೆ ಸಲ್ಲಿಸಿದ್ದಾರೆ. ಆಗ ದಿಯಾ ಮಿರ್ಜಾ ಅವರಿಗೆ ತಿಂಗಳಿಗೆ ರೂ.5000 ಸಂಬಳ ಸಿಗುತ್ತಿತ್ತು .

6 /6

ಬಿಟೌನ್ ನಟಿ ದೀಪಿಕಾ ಕಕ್ಕಡ ಚಲನ ಚಿತ್ರರಂಗಕ್ಕೂ ಕಾಲಿಡುವ ಮುನ್ನ ಏರ್ ಹೋಸ್ಟೆಸ್ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಆದರೆ, ಕೆಲ ವೈದ್ಯಕೀಯ ಕಾರಣಗಳ ಹಿನ್ನೆಲೆ ಅವರು ತಮ್ಮ ನೌಕರಿಯನ್ನು ತ್ಯಜಿಸಬೇಕಾಗಿ ಬಂತು. ಆದರೆ, ಬೇರೆ ಜಾಬ್ ಸಿಗದ ಕಾರಣ ನಾನು ತುಂಬಾ ಸಂಕಷ್ಟ ಅನುಭವಿಸುತ್ತಿದ್ದೆ. ಈ ವೇಳೆ ನನ್ನ ಹತ್ತಿರದ ಗೆಳತಿ ಸೊನಾಲಿ ಕುಲಕರ್ಣಿ ನನಗೆ ಟಿವಿ ಪರದೆಯ ಮೇಲೆ ಕೆಲಸ ಮಾಡಲು ಸಲಹೆ ನೀಡಿದಳು. ಇದರಿಂದ ನನ್ನ ತಾಯಿಯೂ ಕೂಡ ತುಂಬಾ ಉತ್ಸಾಹಿತರಾಗಿದ್ದರು ಎಂದು ಹೇಳಿದ್ದಾರೆ.