OTT Platform: ವಾರಾಂತ್ಯದಲ್ಲಿ ಟೈಮ್ ಪಾಸ್‌ಗಾಗಿ ಅನೇಕ ಜನರ ಉತ್ತಮ ಆಯ್ಕೆ ವೆಬ್ ಸಿರೀಸ್‌ಗಳಾಗಿವೆ. ಇತ್ತೀಚೆಗೆ ಒಟಿಟಿ ಪ್ಲ್ಯಾಟ್ ಫಾರ್ಮ್‌ಗಳಲ್ಲಿ ವೆಬ್ ಸಿರೀಸ್‌ಗಳನ್ನು ವೀಕ್ಷಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ.
OTT Platform: ವಾರಾಂತ್ಯದಲ್ಲಿ ಟೈಮ್ ಪಾಸ್‌ಗಾಗಿ ಅನೇಕ ಜನರ ಉತ್ತಮ ಆಯ್ಕೆ ವೆಬ್ ಸಿರೀಸ್‌ಗಳಾಗಿವೆ. ಇತ್ತೀಚೆಗೆ ಒಟಿಟಿ ಪ್ಲ್ಯಾಟ್ ಫಾರ್ಮ್‌ಗಳಲ್ಲಿ ವೆಬ್ ಸಿರೀಸ್‌ಗಳನ್ನು ವೀಕ್ಷಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ಎಲ್ಲಾ OTT ಪ್ಲಾಟ್‌ಫಾರ್ಮ್‌ಗಳಲ್ಲಿ ಹೊಸ ಹೊಸ ವೆಬ್ ಸರಣಿಗಳನ್ನು ಬಿಡುಗಡೆ ಮಾಡಲಾಗಿದೆ. ಅದನ್ನು ನೀವು ವೀಕ್ಷಿಸಬಹುದು. ಅವುಗಳಲ್ಲಿ ಈ ಐದು ಸಿರೀಸ್‌ಗಳು ಟಾಪ್ 5 ಸ್ಥಾನದಲ್ಲಿವೆ.
Udan patolas: Amazon ನ ಉಚಿತ OTT ಪ್ಲಾಟ್‌ಫಾರ್ಮ್, Amazon Mini TV ಮತ್ತು Amazon Prime ವಿಡಿಯೋ ಎರಡರಲ್ಲೂ ಬಿಡುಗಡೆಯಾಗಿದೆ. ಈ ವೆಬ್ ಸಿರೀಸ್ ಪಂಜಾಬ್‌ನಿಂದ ಮುಂಬೈಗೆ ಬಂದು ದೊಡ್ಡ ನಗರದಲ್ಲಿ ತಮ್ಮ ಕನಸುಗಳನ್ನು ನನಸಾಗಿಸಲು ಬಯಸುವ ನಾಲ್ವರು ಹುಡುಗಿಯರ ಕುರಿತಾಗಿದೆ.
Intimacy: ನೆಟ್‌ಫ್ಲಿಕ್ಸ್‌ನಲ್ಲಿ ಈ ವೆಬ್‌ಸಿರೀಸ್ ಅನ್ನು ಬಿಡುಗಡೆ ಮಾಡಲಾಗಿದೆ. ಇದರಲ್ಲಿ ರಾಜಕಾರಣಿಯೊಬ್ಬರ ಖಾಸಗಿ ಟೇಪ್ ಸೋರಿಕೆಯಾಗಿದ್ದು ಅದು ಅವರ ರಾಜಕೀಯ ಜೀವನವನ್ನು ಅಪಾಯಕ್ಕೆ ಸಿಲುಕಿಸುತ್ತದೆ.
Cyber War: ಮೋಹಿತ್ ಮಲಿಕ್ ಮತ್ತು ಸನಯಾ ಇರಾನಿಯವರ ಈ ಹೊಸ ಶೋ ಸೈಬರ್ ಅಪರಾಧದ ಬಗ್ಗೆ ಹೇಳುತ್ತದೆ. ಅಲ್ಲದೇ, ಸೈಬರ್ ಕ್ರೈಂನಿಂದ ಜನರ ಮೇಲಾಗುವ ಪ್ರಭಾವದ ಬಗ್ಗೆ ಮಾತನಾಡುತ್ತದೆ. ಇದನ್ನು Voot ನಲ್ಲಿ ನೋಡಬಹುದು.
Code M season 2: ಜೆನ್ನಿಫರ್ ವಿಂಗೆಟ್ ಅವರ ಈ ವೆಬ್ ಸಿರೀಸ್‌ನಲ್ಲಿ, ಸೇನಾ ನೆಲೆಯ ಶಿಬಿರದಲ್ಲಿ ರಾಜ್ಯದ ಮುಖ್ಯಮಂತ್ರಿಯನ್ನು ಕೊಲ್ಲುವ ಪ್ರಯತ್ನದ ಬಗ್ಗೆ ತಿಳಿಸಲಾಗಿದೆ. ಈ ವೆಬ್ ಸಿರೀಸ್ ಅನ್ನು Voot ನಲ್ಲಿ ಸ್ಟ್ರೀಮ್ ಮಾಡಲಾಗುತ್ತಿದೆ.
The Broken News: ಸೋನಾಲಿ ಬೇಂದ್ರೆ ಮತ್ತು ಜೈದೀಪ್ ಅಹ್ಲಾವತ್ ಅವರ ಈ ಹೊಸ ವೆಬ್ ಸಿರೀಸ್ ಎರಡು ಭಾರತೀಯ ಸುದ್ದಿ ವಾಹಿನಿಗಳ ಕುರಿತಾದ ಕತೆಯಾಗಿದೆ. ಈ ಪ್ರದರ್ಶನದಲ್ಲಿ ಮಾಧ್ಯಮ ಉದ್ಯಮದ ಸವಾಲುಗಳು ಮತ್ತು ತೊಂದರೆಗಳನ್ನು ತೋರಿಸಲಾಗಿದೆ. ನೀವು Zee5 ನಲ್ಲಿ ಈ ಸರಣಿಯನ್ನು ವೀಕ್ಷಿಸಬಹುದು.