ಮಗುವನ್ನು ಕಳೆದುಕೊಂಡ 5 ಬಾಲಿವುಡ್ ಸುಂದರಿಯರು ಇವರು

ಅನೇಕ ಬಾಲಿವುಡ್ ನಟಿಯರು ಮಗುವನ್ನು ಕಳೆದುಕೊಂಡ ದುಃಖ ಅನುಭವಿಸಿದ್ದಾರೆ. ಆ ನೋವು ಹೃದಯದಲ್ಲಿ ಇನ್ನೂ ಜೀವಂತವಾಗಿದೆ. ಮಗುವನ್ನು ಕಳೆದುಕೊಂಡ ದುಃಖವು ಜೀವನದ ಅತ್ಯಂತ ಕೆಟ್ಟ ಸ್ಥಿತಿಯಾಗಿರುತ್ತದೆ. ಅದನ್ನು ತಾಯಿ ಬಯಸಿದರೂ ಮರೆಯಲು ಅಸಾಧ್ಯ. 

Bollywood Actress: ಅನೇಕ ಬಾಲಿವುಡ್ ನಟಿಯರು ಮಗುವನ್ನು ಕಳೆದುಕೊಂಡ ದುಃಖ ಅನುಭವಿಸಿದ್ದಾರೆ. ಆ ನೋವು ಹೃದಯದಲ್ಲಿ ಇನ್ನೂ ಜೀವಂತವಾಗಿದೆ. ಮಗುವನ್ನು ಕಳೆದುಕೊಂಡ ದುಃಖವು ಜೀವನದ ಅತ್ಯಂತ ಕೆಟ್ಟ ಸ್ಥಿತಿಯಾಗಿರುತ್ತದೆ. ಅದನ್ನು ತಾಯಿ ಬಯಸಿದರೂ ಮರೆಯಲು ಅಸಾಧ್ಯ. 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ಕಿಂಗ್ ಖಾನ್ ಪತ್ನಿ ಗೌರಿ ಖಾನ್ ಹಲವಾರು ಬಾರಿ ತನ್ನ ಮಗುವನ್ನು ಕಳೆದುಕೊಂಡಿದ್ದಾರೆ. ತನ್ನ ಹಿರಿಯ ಮಗ ಆರ್ಯನ್ ಖಾನ್ ಹುಟ್ಟುವ ಮೊದಲು ಅವರು ಅನೇಕ ಗರ್ಭಪಾತಗಳನ್ನು ಅನುಭವಿಸಿದರು. ತುಂಬಾ ಕಷ್ಟಪಟ್ಟು ಗೌರಿ ಖಾನ್ ಮೊದಲ ಮಗುವಿಗೆ ಜನ್ಮ ನೀಡಿದ್ದರು. ಆ ನಂತರ ಗೌರಿ ಸುಹಾನಾ ಖಾನ್ ಗೆ ಜನ್ಮ ನೀಡಿದರು. ಆ ನಂತರ ಶಾರುಖ್ ಮತ್ತು ಗೌರಿ ಬಾಡಿಗೆ ತಾಯ್ತನದ ಮೂಲಕ ಅಬ್ರಾಮ್ ಅವರನ್ನು ಸ್ವಾಗತಿಸಿದರು.

2 /5

ಶಿಲ್ಪಾ ಶೆಟ್ಟಿ ಕುಂದ್ರಾ 2010 ರಲ್ಲಿ ಮೊದಲ ಬಾರಿಗೆ ತನ್ನ ಮಗುವನ್ನು ಕಳೆದುಕೊಂಡರು. ಇದೇ ದುಃಖದಲ್ಲಿ ಇನ್ನು ಮುಂದೆ ಗರ್ಭಿಣಿಯಾಗುವುದಿಲ್ಲ ಎಂದುಕೊಂಡರು. ಆದರೆ ಇಂದು ನಟಿಗೆ ಇಬ್ಬರು ಮಕ್ಕಳಿದ್ದಾರೆ. 

3 /5

ಕಾಜೋಲ್ ಮತ್ತು ಅಜಯ್ ಮಗುವನ್ನು ಹೊಂದಲು ಯೋಜಿಸಿದಾಗ ಎರಡು ಬಾರಿ ಗರ್ಭಪಾತಕ್ಕೆ ಒಳಗಾದರು. ಕಭಿ ಖುಷಿ ಕಭಿ ಗಮ್ ಚಿತ್ರದ ಶೂಟಿಂಗ್ ವೇಳೆ ಆಕೆ ಗರ್ಭಿಣಿಯಾಗಿದ್ದರು. ಸ್ವಲ್ಪ ಸಮಯದ ನಂತರ ಆಕೆಗೆ ಗರ್ಭಪಾತವಾಗಿದೆ ಎಂದು ಹೇಳಲಾಯಿತು. ಆ ಬಳಿಕ ಮತ್ತೆ ಎರಡನೇ ಗರ್ಭಪಾತವು ಕಾಜೋಲ್‌ ಅವರನ್ನು ದುಃಖಕ್ಕೆ ತಳ್ಳಿತು. ಕಾಜೋಲ್ ಮತ್ತು ಅಜಯ್ ಬಹಳ ಪ್ರಯತ್ನದ ನಂತರ ಇಬ್ಬರು ಮಕ್ಕಳನ್ನು ಪಡೆದರು.

4 /5

ದೀಪಿಕಾ ಕಕ್ಕರ್ ಮತ್ತು ಶೋಯೆಬ್ ಇಬ್ರಾಹಿಂ ತಮ್ಮ ಮೊದಲ ಮಗುವಿನ ಜನನವನ್ನು ಜನವರಿ 22 ರಂದು ಘೋಷಿಸಿದರು. ಆದರೆ ಈ ಮಗುವಿಗೆ ಮೊದಲು, ದೀಪಿಕಾ ಗರ್ಭಪಾತಕ್ಕೆ ಒಳಗಾಗಿದ್ದಾರೆ. ಈ ಕಾರಣದಿಂದಾಗಿ ನಟಿ ತನ್ನ ಗರ್ಭಧಾರಣೆಯ ಸುದ್ದಿಯನ್ನು ಜನರೊಂದಿಗೆ ಹಂಚಿಕೊಳ್ಳಲು ಹಿಂಜರಿಯುತ್ತಿದ್ದರು. 

5 /5

ಗರ್ಭಪಾತದಿಂದಾಗಿ ಕಿರಣ್ ರಾವ್ ಮತ್ತು ಅಮೀರ್ ಖಾನ್‌ ತಮ್ಮ ಮೊದಲ ಮಗುವನ್ನು ಕಳೆದುಕೊಂಡರು. ಆದರೆ ನಂತರ ಅವರು ಬಾಡಿಗೆ ತಾಯ್ತನದ ಮೂಲಕ ಮಗನಿಗೆ ಜನ್ಮ ನೀಡಿದರು.