ಮಧುಮೇಹ ಮತ್ತು ಕೊಲೆಸ್ಟ್ರಾಲ್‌ನಿಂದ ಮುಕ್ತಿ ಪಡೆಯಲು ಸಹಕಾರಿ ಈ 4 ಎಲೆಗಳು

ಆರೋಗ್ಯಕರ ಜೀವನಕ್ಕೆ ಹಸಿರು ಎಳೆಗಳು ತುಂಬಾ ಪ್ರಯೋಜನಕಾರಿ ಎಂದು ನಿಮಗೆ ತಿಳಿದೇ ಇದೆ. ಈ ಎಲೆಗಳನ್ನು ಮಧುಮೇಹ & ಕೊಲೆಸ್ಟ್ರಾಲ್‌ ಕಂಟ್ರೋಲ್‌ಗೆ ರಾಮಬಾಣ ಎಂದು ಹೇಳಲಾಗುತ್ತದೆ. 

ನಿತ್ಯ ನಮ್ಮ ಡಯಟ್ನಲ್ಲಿ ಕೆಲವು ಸೊಪ್ಪುಗಳನ್ನು ಬಳಸುವುದರಿಂದ ಮಧುಮೇಹ & ಕೊಲೆಸ್ಟ್ರಾಲ್‌ ಅನ್ನು ಸುಲಭವಾಗಿ ನಿಯಂತ್ರಿಸಬಹುದು. ಈ ಎಲೆಗಳನ್ನು ಮಧುಮೇಹ & ಕೊಲೆಸ್ಟ್ರಾಲ್‌ ಕಂಟ್ರೋಲ್‌ಗೆ ರಾಮಬಾಣ ಎಂದು ಹೇಳಲಾಗುತ್ತದೆ. ಆ ಎಲೆಗಳು ಯಾವುವು ಎಂದು ತಿಳಿಯೋಣ... 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ಹಸಿರು ಎಲೆಗಳಲ್ಲಿ ಜೀವಸತ್ವಗಳು, ಖನಿಜಗಳು, ಕ್ಯಾಲ್ಸಿಯಂ, ಫೈಬರ್ ಮತ್ತು ಪ್ರೋಟೀನ್‌ನಂತಹ ಪ್ರಮುಖ ಪೋಷಕಾಂಶಗಳು ಕಂಡುಬರುತ್ತವೆ. ಇವುಗಳನ್ನು  ನಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ. ಅದರಲ್ಲೂ, ಕೆಲವು ಸೊಪ್ಪುಗಳು ಮಧುಮೇಹ ಮತ್ತು ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸಲು ತುಂಬಾ ಪ್ರಯೋಜನಕಾರಿ ಎಂದು ನಂಬಲಾಗಿದೆ. ಈ ಎಲೆಗಳನ್ನು ಜಗಿದು ತಿನ್ನುವುದರಿಂದ ಮಧುಮೇಹ & ಕೊಲೆಸ್ಟ್ರಾಲ್‌ ಕಂಟ್ರೋಲ್ ಮಾಡಬಹುದು ಎನ್ನಲಾಗಿದೆ.

2 /5

ಪುದೀನಾ ಎಲೆಗಳನ್ನು ಉತ್ತಮ ಮೌತ್ ಫ್ರೆಶ್ನರ್ ಎಂದು ಹೇಳಲಾಗುತ್ತದೆ. ಇದು ದೇಹಕ್ಕೆ ತಂಪು ನೀಡುವುದರಿಂದ ಬೇಸಿಗೆಯಲ್ಲಿ ಪುದೀನ ಎಲೆಗಳನ್ನು ಹೆಚ್ಚಾಗಿ ಬಳಸಲಾಗುತ್ತದೆ. ಪುದೀನ ಎಲೆಗಳನ್ನು ಜಗಿದು ತಿನ್ನುವುದರಿಂದ ಇದು ದೇಹವನ್ನು ನಿರ್ವಿಷಗೊಳಿಸುವ ಮೂಲಕ ದೇಹಕ್ಕೆ ಪ್ರಯೋಜನವನ್ನು ನೀಡುತ್ತದೆ. ಮಾತ್ರವಲ್ಲ, ಇದು ಡಯಾಬಿಟಿಸ್, ಕೊಲೆಸ್ಟ್ರಾಲ್ ನಿಯಂತ್ರಿಸುವಲ್ಲಿಯೂ ಪರಿಣಾಮಕಾರಿ ಆಗಿದೆ.

3 /5

ಬೇವು ರುಚಿಯಲ್ಲಿ ಕಹಿಯಾದರೂ ಕೂಡ ಇದು ಔಷಧೀಯ ಗುಣಗಳಿಂದ ಸಮೃದ್ಧವಾಗಿದೆ. ಬೇವಿನ ಮರದ ಪ್ರತಿ ಭಾಗವೂ ಕೂಡ ಹಲವು ರೋಗಗಳನ್ನು ನಿವಾರಿಸುವಲ್ಲಿ ಪರಿನಾಮಕಾರಿ ಆಗಿದೆ. ಈ ಎಲೆಗಳು ಉರಿಯೂತದ, ಆಂಟಿಫಂಗಲ್ ಮತ್ತು ಆಂಟಿ-ಆಕ್ಸಿಡೆಂಟ್ ಗುಣಲಕ್ಷಣಗಳಿಂದ ತುಂಬಿವೆ, ಇದು ಎಲ್ಡಿಎಲ್ ಮತ್ತು ಅಧಿಕ ರಕ್ತದ ಸಕ್ಕರೆಯನ್ನು ನಿಯಂತ್ರಿಸುತ್ತದೆ. ಮಧುಮೇಹ & ಕೊಲೆಸ್ಟ್ರಾಲ್‌ ಕಂಟ್ರೋಲ್‌ಗೆ ಸಹ ಇದು ರಾಮಬಾಣವಿದ್ದಂತೆ.

4 /5

ಆಹಾರದ ರುಚಿಯನ್ನು ಹೆಚ್ಚಿಸಬಲ್ಲ ಕರಿಬೇವಿನಲ್ಲಿ ಬ್ಯಾಕ್ಟೀರಿಯಾ ಮತ್ತು ಆಂಟಿಮೈಕ್ರೊಬಿಯಲ್ ಗುಣಗಳಿವೆ. ಇದು ಮಧುಮೇಹ & ಕೊಲೆಸ್ಟ್ರಾಲ್‌ ಕಂಟ್ರೋಲ್‌ಗೆ ತುಂಬಾ ಪ್ರಯೋಜನಕಾರಿ ಆಗಿದೆ.

5 /5

ಭಾರತದಲ್ಲಿ ಪೂಜನೀಯ ಸ್ಥಾನಮಾನವನ್ನು ಹೊಂದಿರುವ ತುಳಸಿ ಸಸ್ಯ ಆರೋಗ್ಯಕ್ಕೂ ಕೂಡ ತುಂಬಾ ಪ್ರಯೋಜನಕಾರಿ. ನಿತ್ಯ ಮೂರ್ನಾಲ್ಕು ತುಳಸಿ ಎಲೆಗಳನ್ನು ಅಗಿದು ಸೇವಿಸುವುದರಿಂದ  ಮಧುಮೇಹ & ಕೊಲೆಸ್ಟ್ರಾಲ್‌ ಅನ್ನು ನಿಯಂತ್ರಿಸಬಹುದು ಎಂದು ಹೇಳಲಾಗುತ್ತದೆ.  ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದನ್ನು Zee ಮೀಡಿಯಾ ಖಚಿತಪಡಿಸುವುದಿಲ್ಲ.