ಒಳಾಂಗಣ ಅಥವಾ ಹೊರಾಂಗಣ… ಈ ಒಂದು ಗಿಡ ನೆಟ್ಟರೆ ಸಾಕು ಸುಡು ಬೇಸಿಗೆಯಲ್ಲಿ ತಂಪು ತಂಪಾಗಿರುತ್ತೆ ಸಂಪೂರ್ಣ ಮನೆ! ಸ್ವಲ್ಪವೂ ಇರಲ್ಲ ಸೆಖೆ

Best Summer Plants for Indoor and Outdoor: ಬಿಸಿಲಿನ ಬೇಗೆ ಮುಂದುವರಿದಿದ್ದು, ಮುಂದಿನ ಒಂದೂವರೆ ತಿಂಗಳ ಕಾಲ ಬಿಸಿಲಿನ ತಾಪ ಬಿಡುವಂತೆ ಕಾಣುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಎಲ್ಲಾ ಸಮಯದಲ್ಲೂ ಎಸಿ-ಕೂಲರ್‌ ಬಳಕೆ ಮಾಡುವುದು ಕಷ್ಟ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /8

ಮನೆಯನ್ನು ನೈಸರ್ಗಿಕವಾಗಿ ತಂಪಾಗಿರಿಸುವ, ಎಸಿ ಮತ್ತು ಕೂಲರ್‌’ಗಳಿಗಿಂತ ಯಾವುದಾದರೂ ಅಗ್ಗದ ಆಯ್ಕೆಗಳ ಬಗ್ಗೆ ನಿಮಗೆ ತಿಳಿದಿದೆಯೇ. ಈ ಗಿಡಗಳನ್ನು ಮನೆಯಲ್ಲಿ ನೆಟ್ಟರೆ ಸಾಕು ಇಡೀ ಮನೆಯಲ್ಲಿ ಶುದ್ಧ ಗಾಳಿ ಸಂಚರಿಸುವುದಲ್ಲದೆ, ಮನೆ ಪೂರ್ತಿ ತಂಪು ತಂಪಾಗಿರುತ್ತದೆ.

2 /8

ಮನೆಯಲ್ಲಿ ಸೌಂದರ್ಯಕ್ಕಾಗಿ ಒಂದೋ ಎರಡೋ ಗಿಡಗಳನ್ನು ನೆಡಬಹುದು. ಆದರೆ ಬೇಸಿಗೆಯನ್ನು ಗಮನದಲ್ಲಿಟ್ಟುಕೊಂಡು ನಿಮ್ಮ ಮನೆಯಲ್ಲಿಟ್ಟರೆ ಕೆಲವೊಂದು ಅಂದವನ್ನು ಹೆಚ್ಚಿಸುವ, ಜೊತೆಗೆ ಗಾಳಿಯೂ ಲಭಿಸುವ ಆ ಗಿಡಗಳನ್ನು ಬೆಳೆದರೆ ಹೇಗೆ ಎಂಬ ಆಲೋಚನೆ ಬಂದಿದೆಯೇ? ನಾವಿಂದು ಕೆಲ ಗಿಡಗಳ ಬಗ್ಗೆ ನಿಮಗೆ ಮಾಹಿತಿ ನೀಡಲಿದ್ದೇವೆ.

3 /8

ಅಲೋವೆರಾ: ಅಲೋವೆರಾ ಬೇಸಿಗೆಯಲ್ಲಿ ಚರ್ಮವನ್ನು ತಂಪಾಗಿರಿಸಲು ಮತ್ತು ಯಾವುದೇ ರೀತಿಯ ಟ್ಯಾನಿಂಗ್‌ನಿಂದ ರಕ್ಷಿಸಲು ಸಹಾಯ ಮಾಡುತ್ತದೆ, ಅಲೋವೆರಾ ಗಿಡವನ್ನು ಮನೆಯೊಳಗೆ ಅಥವಾ ಹೊರಗೆ ನೆಟ್ಟರೆ, ಅದು ಮನೆಯೊಳಗಿನ ಗಾಳಿಯ ಉಷ್ಣತೆಯನ್ನು ಕಡಿಮೆ ಮಾಡುತ್ತದೆ. ಜೊತೆಗೆ ತಂಪು ಗಾಳಿಯನ್ನು ನೀಡುತ್ತದೆ.

4 /8

ಅರೆಕಾ ಪಾಮ್ ಟ್ರೀ: ಇದು ಅತ್ಯಂತ ಪ್ರಸಿದ್ಧವಾದ ಲಿವಿಂಗ್ ರೂಮ್ ಸಸ್ಯ. ಅಲಂಕಾರಿಕ ಒಳಾಂಗಣ ಸಸ್ಯವಾಗಿದ್ದು, ನೈಸರ್ಗಿಕ ಆರ್ದ್ರಕವಾಗಿ ಕಾರ್ಯನಿರ್ವಹಿಸುತ್ತದೆ, ಅಂದರೆ ಒಳಾಂಗಣ ಗಾಳಿಯನ್ನು ನೈಸರ್ಗಿಕವಾಗಿ ತೇವವಾಗಿಡಲು ಇದು ಬೆಸ್ಟ್.

5 /8

ಬೇಬಿ ರಬ್ಬರ್ ಪ್ಲಾಂಟ್: ಇದು ವಾತಾವರಣದಲ್ಲಿರುವ ಇಂಗಾಲದ ಡೈಆಕ್ಸೈಡ್ ಅನ್ನು ಸುಲಭವಾಗಿ ಹೀರಿಕೊಳ್ಳುತ್ತದೆ ಮತ್ತು ಆಮ್ಲಜನಕದ ಪ್ರಮಾಣವನ್ನು ಹೆಚ್ಚಿಸುತ್ತದೆ. ಇದರಿಂದಾಗಿ ಶಾಖದ ಮಟ್ಟವು ಸ್ವಯಂಚಾಲಿತವಾಗಿ ಕಡಿಮೆಯಾಗಲು ಪ್ರಾರಂಭಿಸುತ್ತದೆ.

6 /8

ಗೋಲ್ಡನ್ ಪೊಥೋಸ್: ಗೋಲ್ಡನ್ ಪೊಥೋಸ್ ಗಾಳಿಯನ್ನು ತಂಪಾಗಿಸುವಲ್ಲಿ ಅತ್ಯಂತ ಪರಿಣಾಮಕಾರಿ ಸಸ್ಯವಾಗಿದೆ. ಇದು ಒಂದು ರೀತಿಯ ಮನಿ ಪ್ಲಾಂಟ್. ಇದು ಗಾಳಿಯಿಂದ ಧೂಳು ಮತ್ತು ಇಂಗಾಲವನ್ನು ತ್ವರಿತವಾಗಿ ಫಿಲ್ಟರ್ ಮಾಡಲು ಕೆಲಸ ಮಾಡುತ್ತದೆ.

7 /8

ಸ್ನೇಕ್ ಪ್ಲಾಂಟ್: ಈ ಗಿಡವನ್ನು ಸಾಮಾನ್ಯವಾಗಿ ಅನೇಕ ಮನೆಗಳಲ್ಲಿ ಬೆಳೆಸಲಾಗುತ್ತದೆ. ಇದು ಗಾಳಿಯನ್ನು ತಾಜಾಗೊಳಿಸುವುದರ ಜೊತೆಗೆ ಆಮ್ಲಜನಕದ ಪ್ರಮಾಣವನ್ನು ಹೆಚ್ಚಿಸುತ್ತದೆ.

8 /8

(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇವುಗಳನ್ನು ಅನುಸರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. Zee News Kannada ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ.)