Tender Coconut for weight loss: ಎಳನೀರು ಆರೋಗ್ಯಕ್ಕೆ ಭಾರೀ ಪ್ರಯೋಜನಕಾರಿ. ಇದು ತುಂಬಾ ಕಡಿಮೆ ಕ್ಯಾಲೋರಿಗಳನ್ನು ಹೊಂದಿದ್ದು, ದೀರ್ಘಕಾಲದವರೆಗೆ ಹೊಟ್ಟೆ ತುಂಬಿರುವಂತೆ ಮಾಡುತ್ತದೆ. ಜೊತೆಗೆ ಇದು ಚಯಾಪಚಯವನ್ನು ಹೆಚ್ಚಿಸುತ್ತದೆ
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
ಎಳನೀರು ಆರೋಗ್ಯಕ್ಕೆ ಭಾರೀ ಪ್ರಯೋಜನಕಾರಿ. ಇದು ತುಂಬಾ ಕಡಿಮೆ ಕ್ಯಾಲೋರಿಗಳನ್ನು ಹೊಂದಿದ್ದು,ದೀರ್ಘಕಾಲದವರೆಗೆ ಹೊಟ್ಟೆ ತುಂಬಿರುವಂತೆ ಮಾಡುತ್ತದೆ. ಜೊತೆಗೆ ಇದು ಚಯಾಪಚಯವನ್ನು ಹೆಚ್ಚಿಸುತ್ತದೆ
ಇನ್ನು ತೂಕ ಇಳಿಕೆಗೆ ಕೂಡ ಎಳನೀರು ಬಹಳ ಪ್ರಯೋಜಕ. ಏಕೆಂದರೆ ಎಳನೀರು ಎಲೆಕ್ಟ್ರೋಲೈಟ್ʼಗಳಲ್ಲಿ ಸಮೃದ್ಧವಾಗಿದೆ, ಇದರಿಂದಾಗಿ ದೇಹದಲ್ಲಿ ನೀರಿನ ಕೊರತೆಯಾಗುವುದಿಲ್ಲ. ಈ ನೀರನ್ನು ಕುಡಿಯುವುದರಿಂದ ತೂಕ ಕಡಿಮೆಯಾಗುವುದಲ್ಲದೆ, ದೇಹದಿಂದ ಹಲವಾರು ಸಮಸ್ಯೆಗಳನ್ನು ದೂರವಿಡಲು ಸಹಾಯ ಮಾಡುತ್ತದೆ.
ಎಳನೀರಲ್ಲಿ ಬಹಳ ಕಡಿಮೆ ಕ್ಯಾಲೋರಿಗಳಿರುತ್ತವೆ. ಇದನ್ನು ಕುಡಿಯುವುದರಿಂದ ದೇಹಕ್ಕೆ ಅದ್ಭುತವಾದ ಶಕ್ತಿ ದೊರೆಯುತ್ತದೆ. ಅದಕ್ಕಾಗಿಯೇ ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಇದು ಉತ್ತಮ ಆಯ್ಕೆಯಾಗಿದೆ.
ಎಳನೀರನ್ನು ಸೇವಿಸುವುದರಿಂದ ದೇಹವು ತೇವಾಂಶದಿಂದ ಕೂಡಿರುತ್ತದೆ. ಇದರಲ್ಲಿ ಎಲೆಕ್ಟ್ರೋಲೈಟ್ʼಗಳು ಕಂಡುಬರುವ ಹಿನ್ನೆಲೆಯಲ್ಲಿ ತೂಕ ನಿಯಂತ್ರಿಸಲು ಸಹಾಯ ಮಾಡುತ್ತದೆ. ಇನ್ನು ಆರೋಗ್ಯ ತಜ್ಞರ ಪ್ರಕಾರ, ವ್ಯಾಯಾಮದ ಮೊದಲು ಅಥವಾ ನಂತರ ಎಳನೀರನ್ನು ಕುಡಿದರೆ ಶೀಘ್ರ ಸಮಯದಲ್ಲಿ ತೂಕ ಇಳಿಸಬಹುದು.
ಅತಿಯಾಗಿ ತಿನ್ನುವುದರಿಂದ ತೂಕವು ವೇಗವಾಗಿ ಹೆಚ್ಚಾಗುತ್ತದೆ. ಹೀಗಿರುವಾಗ, ಎಳನೀರು ಸೂಕ್ತ. ಇದಕ್ಕೆ ಒಂದು ಚಮಚ ಜೀರಿಗೆ ಅಥವಾ ಒಂದೆರಡು ಚಮಚ ನಿಂಬೆ ರಸ ಬೆರೆಸಿ ಕುಡಿಯಬೇಕು. ಈ ಸಲಹೆ ನಿಮ್ಮ ತೂಕವನ್ನು ಶೀಘ್ರದಲ್ಲೇ ಇಳಿಕೆಯಾಗುವಂತೆ ಮಾಡುತ್ತದೆ.
ತೂಕ ಇಳಿಸಿಕೊಳ್ಳಲು ಬಯಸಿದರೆ, ಕೊಬ್ಬಿನ ಚಯಾಪಚಯವು ಉತ್ತಮವಾಗಿರಬೇಕು. ಎಳನೀರಿನಲ್ಲಿ ಇರುವ ಸಂಯುಕ್ತಗಳು ಚಯಾಪಚಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದಕ್ಕೆ ಕಾಮಕಸ್ತೂರಿ ಬೀಜವನ್ನು ಬೆರೆಸಿ ಕುಡಿದರೆ ದೇಹದಲ್ಲಿರುವ ಹೆಚ್ಚಿನ ಕ್ಯಾಲೊರಿಗಳನ್ನು ಸುಡುತ್ತದೆ ಮತ್ತು ತೂಕವನ್ನು ವೇಗವಾಗಿ ಕಡಿಮೆ ಮಾಡುತ್ತದೆ.
ಎಳನೀರು ಕುಡಿಯುವುದರಿಂದ ಜೀರ್ಣಾಂಗ ವ್ಯವಸ್ಥೆ ಬಲಗೊಳ್ಳುತ್ತದೆ. ಇದರೊಂದಿಗೆ, ಆಹಾರವು ಉತ್ತಮವಾಗಿರುತ್ತದೆ. ದೇಹವು ಎಲ್ಲಾ ಅಗತ್ಯ ಅಂಶಗಳನ್ನು ಪಡೆಯುತ್ತದೆ. ಇನ್ನು ಹೆಚ್ಚುವರಿ ಕೊಬ್ಬನ್ನು ಸಂಗ್ರಹಿಸಲು ಇದು ಬಿಡುವುದಿಲ್ಲ.
ಎಳನೀರು ಪೋಷಕಾಂಶಗಳ ಖಜಾನೆ. ಮೆಗ್ನೀಸಿಯಮ್, ಕ್ಯಾಲ್ಸಿಯಂ, ಪೊಟ್ಯಾಸಿಯಮ್ ಮತ್ತು ವಿಟಮಿನ್ ಸಿ ನಂತಹ ಅಗತ್ಯ ಪೋಷಕಾಂಶಗಳನ್ನು ಒಳಗೊಂಡಿದೆ. ಇವೆಲ್ಲವೂ ಆರೋಗ್ಯಕ್ಕೆ ಅತ್ಯಂತ ಪ್ರಯೋಜನಕಾರಿ. ಇದು ಚಯಾಪಚಯವನ್ನು ಸುಧಾರಿಸುವುದಲ್ಲದೆ, ಕೊಬ್ಬನ್ನು ಸುಲಭವಾಗಿ ತೆಗೆದುಹಾಕುತ್ತದೆ.
ಸೂಚನೆ: ಸುದ್ದಿಯಲ್ಲಿ ನೀಡಲಾದ ಕೆಲವು ಮಾಹಿತಿಯು ಮಾಧ್ಯಮ ವರದಿಗಳನ್ನು ಆಧರಿಸಿದೆ. ಯಾವುದೇ ಸಲಹೆಯನ್ನು ಕಾರ್ಯಗತಗೊಳಿಸುವ ಮೊದಲು, ನೀವು ಸಂಬಂಧಪಟ್ಟ ತಜ್ಞರನ್ನು ಸಂಪರ್ಕಿಸಬೇಕು. ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ.