Team Indiaದ ಈ ಸ್ಟಾರ್ ಆಲ್’ರೌಂಡರ್ ಪತ್ನಿ MLA: ರಾಜಕೀಯದಲ್ಲಿ ಗಟ್ಟಿಗಿತ್ತಿ ಎನಿಸಿಕೊಂಡ ಈಕೆ ಎಂಥಾ ಸುಂದ್ರಿ ಗೊತ್ತಾ?

Team India: ಟೀಂ ಇಂಡಿಯಾದ ಅನೇಕ ಆಟಗಾರರ ಪ್ರೇಮಕಥೆಗಳ ಬಗ್ಗೆ ನೀವೆಲ್ಲ ಕೇಳಿರುತ್ತೀರಿ. ಅದರಲ್ಲ್ಲೂ ಭಾರತದ ಸ್ಟಾರ್ ಆಲ್ ರೌಂಡರ್ ರವೀಂದ್ರ ಜಡೇಜಾ ಅವರ ಪ್ರೇಮ ಜೀವನ ಕೊಂಚ ವಿಶೇಷ ಎಂದರೆ ತಪ್ಪಾಗಲ್ಲ. ರವೀಂದ್ರ ಜಡೇಜಾ ರಜಪೂತಾನ ಕುಟುಂಬಕ್ಕೆ ಸೇರಿದವರು.  

1 /6

ಟೀಂ ಇಂಡಿಯಾದ ಅನೇಕ ಆಟಗಾರರ ಪ್ರೇಮಕಥೆಗಳ ಬಗ್ಗೆ ನೀವೆಲ್ಲ ಕೇಳಿರುತ್ತೀರಿ. ಅದರಲ್ಲ್ಲೂ ಭಾರತದ ಸ್ಟಾರ್ ಆಲ್ ರೌಂಡರ್ ರವೀಂದ್ರ ಜಡೇಜಾ ಅವರ ಪ್ರೇಮ ಜೀವನ ಕೊಂಚ ವಿಶೇಷ ಎಂದರೆ ತಪ್ಪಾಗಲ್ಲ. ರವೀಂದ್ರ ಜಡೇಜಾ ರಜಪೂತಾನ ಕುಟುಂಬಕ್ಕೆ ಸೇರಿದವರು.  

2 /6

ರಜಪೂತಾನ ಕುಟುಂಬಕ್ಕೆ ಸೇರಿದ ರವೀಂದ್ರ ಜಡೇಜಾ ಅವರು ಆಗಿದ್ದು ಲವ್ ಕಂ ಅರೇಂಜ್ಡ್ ಮ್ಯಾರೇಜ್. 17 ಏಪ್ರಿಲ್ 2016 ರಂದು ರಿವಾಬ ಸೋಲಂಕಿ ಎಂಬಾಕೆಯ ಜೊತೆ ದಾಂಪತ್ಯಕ್ಕೆ ಕಾಲಿಟ್ಟರು ಜಡೇಜಾ. ಇಂದಿಗೆ ಇವರಿಬ್ಬರ ದಾಂಪತ್ಯ ಜೀವನಕ್ಕೆ 7 ವರ್ಷ ಪೂರೈಸಿದೆ.

3 /6

ಜಡೇಜಾ ಅವರ ಪತ್ನಿ ರಿವಾಬ ಸೋಲಂಕಿ, ಅವರ ಸಹೋದರಿಯ ಸ್ನೇಹಿತೆ. ಇಬ್ಬರೂ ಪಾರ್ಟಿಯ ಸಂದರ್ಭದಲ್ಲಿ ಒಬ್ಬರಿಗೊಬ್ಬರರು ಭೇಟಿಯಾದರು. ಜಡೇಜಾ ಅವರ ಸಹೋದರಿ ಇಬ್ಬರನ್ನೂ ಸ್ನೇಹಿತರಾಗಿ ಮಾಡಿದರು. ಅಲ್ಲಿಂದ ಶುರುವಾಯಿತು ಲವ್ ಸ್ಟೋರಿ.

4 /6

ರವೀಂದ್ರ ಜಡೇಜಾ ಅವರ ಪತ್ನಿ ರಿವಾಬ, ಸ್ವಲ್ಪ ಸಮಯದ ಹಿಂದೆ ರಾಜಕೀಯಕ್ಕೆ ಅಧಿಕೃತವಾಗಿ ಎಂಟ್ರಿ ಕೊಟ್ಟರು. 2019 ರ ಲೋಕಸಭೆ ಚುನಾವಣೆಗೆ ಮುನ್ನ ರಿವಾ ಬಿಜೆಪಿ ಸೇರುವ ಮೂಲಕ ರಾಜಕೀಯದಲ್ಲಿ ಸಕ್ರಿಯರಾದರು. ಮೂರು ವರ್ಷಗಳ ನಂತರ ಬಿಜೆಪಿ ಜಾಮ್‌’ನಗರ ಉತ್ತರ ಕ್ಷೇತ್ರದಿಂದ ಅವರನ್ನು ನಾಮನಿರ್ದೇಶನ ಮಾಡಿತು. ಅಲ್ಲಿಂದ ಅವರು ಗೆಲುವು ಸಾಧಿಸಿದರು.

5 /6

ರವೀಂದ್ರ ಜಡೇಜಾ ಐಪಿಎಲ್ ಅವಧಿಯಲ್ಲಿಯೇ ಮದುವೆಯಾಗಿದ್ದರು. ಆಗ ರವೀಂದ್ರ ಜಡೇಜಾ ಗುಜರಾತ್ ಲಯನ್ಸ್ ತಂಡದ ಭಾಗವಾಗಿದ್ದರು.

6 /6

ರಿವಾಬ ಸೋಲಂಕಿ ಮೆಕ್ಯಾನಿಕಲ್ ಇಂಜಿನಿಯರ್ ಓದಿದ್ದಾರೆ. ರವೀಂದ್ರ ಜಡೇಜಾ ಮತ್ತು ರಿವಾಬ ಅವರಿಗೆ ನಿಧಯಾನಾ ಎಂಬ ಮುದ್ದಾದ ಮಗಳಿದ್ದಾಳೆ.