Hardik Pandya Sister In law: ಭಾರತ ತಂಡದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ 11, 1993 ರಂದು ಭಾರತದ ಗುಜರಾತ್ನ ಸೂರತ್ನ ಚೋರಿಯಾಸಿಯಲ್ಲಿ ಸಾಧಾರಣ ಹಿನ್ನೆಲೆಯನ್ನು ಹೊಂದಿರುವ ಕುಟುಂಬದಲ್ಲಿ ಜನಿಸಿದರು.. ಇವರ ಸಹೋದರ ಕೃನಾಲ್ ಪಾಂಡ್ಯ ಕೂಡ ಅಂತಾರಾಷ್ಟ್ರೀಯ ಕ್ರಿಕೆಟಿಗ.. ಇದೀಗ ಪಾಂಡ್ಯ ಅವರ ಅತ್ತಿಗೆಯ ಕುರಿತಾದ ಇಂಟ್ರೆಸ್ಟಿಂಗ್ ಮಾಹಿತಿಗಳನ್ನು ತಿಳಿದುಕೊಳ್ಳೋಣ..
ಹಾರ್ದಿಕ್ ಪಾಂಡ್ಯಗೆ ಸಹೋದರಿ ಇಲ್ಲ. ಅವರಿಗಿರುವುದು ಒಬ್ಬ ಹಿರಿಯ ಸಹೋದರ ಮಾತ್ರ.. ಅವರೂ ವೃತ್ತಿಪರ ಕ್ರಿಕೆಟರ್.. ಪಾಂಡ್ಯ ಸಹೋದರರಿಬ್ಬರೂ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಟೀಂ ಇಂಡಿಯಾ ಹಾಗೂ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಪ್ರತಿನಿಧಿಸುತ್ತಾರೆ..
ಇನ್ನು ಹಾರ್ದಿಕ್ ಪಾಂಡ್ಯ ಅವರ ಅತ್ತಿಗೆ ಪಂಖೂರಿ ಶರ್ಮಾ.. ಇವರು 27 ಡಿಸೆಂಬರ್ 2017 ರಂದು ಕೃನಾಲ್ ಪಾಂಡ್ಯ ಅವರನ್ನು ಮದುವೆಯಾಗಿ ಪಾಂಡ್ಯ ಕುಟುಂಬಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡರು.
ಮದುವೆಗೂ ಮುನ್ನ ಪಂಖೂರಿ ಶರ್ಮಾ ಮಾಡೆಲ್ ಆಗಿದ್ದರು.. ಕೆಲವು ವರದಿಗಳ ಪ್ರಕಾರ 2016 ರಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಸಮಯದಲ್ಲಿ ಕೃನಾಲ್ ಪಾಂಡ್ಯ ಪಂಖುರಿ ಶರ್ಮಾ ಅವರನ್ನು ಭೇಟಿಯಾದರು. ಅಲ್ಲಿ ಚಿಗುರಿದ ಸ್ನೇಹ ಪ್ರೀತಿಯಾಗಿ ಪರಿವರ್ತನೆ ಹೊಂದಿ ಇಬ್ಬರೂ ಮದುವೆಯಾದರು..
ಕೃನಾಲ್ ಪಾಂಡ್ಯ ಡಿಸೆಂಬರ್ 27, 2017 ರಂದು ಮುಂಬೈನ JW ಮ್ಯಾರಿಯಟ್, ಜುಹುದಲ್ಲಿ ಪಂಖೂರಿ ಶರ್ಮಾ ಅವರನ್ನು ವಿವಾಹವಾದರು. ಅಂಬಾನಿ, ಅಮಿತಾಭ್ ಬಚ್ಚನ್, ಇರ್ಫಾನ್ ಪಠಾಣ್ , ರೋಹಿತ್ ಶರ್ಮಾ ಮತ್ತು ಸಚಿನ್ ತೆಂಡೂಲ್ಕರ್ ಸೇರಿದಂತೆ ಹಲವಾರು ಸೆಲೆಬ್ರಿಟಿಗಳು ಈ ವಿವಾಹದ ಜೊತೆಗೆ ಆರತಕ್ಷತೆಯಲ್ಲಿಯೂ ಭಾಗವಹಿಸಿದ್ದರು..
ಕೃನಾಲ್ ಹಾಗೂ ಪಂಖುರಿ ಇಬ್ಬರೂ ಸೋಷಿಯಲ್ ಮಿಡಿಯಾದಲ್ಲಿ ಸಖತ್ ಆಕ್ಟೀವ್ ಆಗಿದ್ದಾರೆ.. ಅಲ್ಲದೇ ಪಂಖುರಿ ಶರ್ಮಾ ಅವರು ಹಾರ್ದಿಕ್ ಪಾಂಡ್ಯ ಅವರೊಂದಿಗೂ ಉತ್ತಮ ಭಾಂದವ್ಯವನ್ನು ಹೊಂದಿದ್ದಾರೆ..