ಮದುವೆ ಮಕ್ಕಳು ಇಲ್ಲದ ರತನ್‌ ಟಾಟಾ ಅವರ ಸಾಮ್ರಾಜ್ಯವನ್ನು ಮುಂದೆ ಯಾರು ಆಳಲಿದ್ದಾರೆ ಗೊತ್ತಾ..?

Tata industries next gens: ಟಾಟಾ ಸನ್ಸ್‌ನ ಎಮೆರಿಟಸ್‌ ಅಧ್ಯಕ್ಷ ರತನ್ ಟಾಟಾ ಅವರು ಬುಧವಾರ ತಡರಾತ್ರಿ ಮುಂಬೈನಲ್ಲಿ 86 ವರ್ಷದಲ್ಲಿ ಇಹ ಲೋಕ ತ್ಯಜಿಸಿದ್ದಾರೆ. ಎಲ್ಲರ ಪ್ರೀತಿಯ ರತನ್‌ ಟಾಟಾ ಅವರನ್ನು ಸೋಮವಾರದಂದು ತಪಾಸಣೆಗಾಗಿ ಬೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆದರೆ ಅವರ ಆರೋಗ್ಯ ಪರಿಸ್ಥಿತಿಯ ಕಾರಣ ಅವರನ್ನು ತೀವ್ರ ನಿಗಾ ಘಟಕದಲ್ಲಿಟ್ಟು ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆಗೆ ಪಲಿಸದರೆ ಇಂಡಸ್ಟ್ರಿ ಲೋಕದ ಸಾಮಾರಾಟ ಬುಧವಾರ ರಾತ್ರಿ ಇಹಲೋಕ ತ್ಯಜಿಸಿದ್ದಾರೆ. 
 
1 /8

2 /8

ಆರ್‌ಪಿಜಿ ಗ್ರೂಪ್ ಮುಖ್ಯಸ್ಥ ಹರ್ಷ್ ಗೋಯಂಕಾ ಅವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ನಂತರ ಟಾಟಾ ಗ್ರೂಪ್ ತನ್ನ ಮಾಜಿ ಅಧ್ಯಕ್ಷರ ಮರಣದ ಕುರಿತು  ಅಧಿಕೃತವಾಗಿ ದೃಢಪಡಿಸಿದೆ.  

3 /8

ಸೋಮವಾರ ಆಸ್ಪತ್ರೆಗೆ ದಾಖಲಾಗಿದ್ದ ಕುರಿತು ಟ್ವಿಟರ್‌ನಲ್ಲಿ ಈ ಕುರಿತು ಪೋಸ್ಟ್‌ ಮಾಡಲಾಗಿತ್ತು, ಈ ಸುದ್ದಿ ಕೇಳಿ ಟಾಟಾ ಅವರ ಅನುಯಾಯಿಗಳು ಆತಂಕಕ್ಕೊಳಗಾಗಿದ್ದರು, ನಂತರ ಅವರ ಹಿತೈಶಿಗಳು ಆತಂಕ ಪಾಡುವ ವಿಷಯವೇನಿಲ್ಲ ಎಂದು ಭರವಸೆ ನೀಡಿದ್ದರು. ಆದರೆ ತಡರಾತ್ರಿ ಟಾಟಾ ಅವರು ನಿಧನ ಹೊಂದಿದ್ದು, ಬೆಳ್ಳಂಬೆಳಿಗ್ಗೆ ಈ ಸುದ್ದಿ ದೇಶದ ಜನತೆಗೆ ಶಾಕ್‌ ಕೊಟ್ಟಿದೆ.   

4 /8

ರತನ್‌ ಟಾಟಾ ಮರಣ ಹೊಂದುತ್ತಿದ್ದಂತೆ, ಅಷ್ಟು ದೊಡ್ಡ ಸಾಮ್ರಾಜ್ಯವನ್ನು ಯಾರು ಮುನ್ನಡೆಸಲಿದ್ದಾರೆ ಎನ್ನುವ ಪ್ರಶ್ನೆ ಹುಟ್ಟಿಕೊಂಡಿದೆ. ರತನ್‌ ತಾತಾ ಅವರು ಮದುವೆಯಾಗಿಲ್ಲ, ಇದರ ಕಾರಣ ಅಷ್ಟು ದೊಡ್ಡ ಸಮ್ರಾಜ್ಯ ಅನಾತವಾಗುತ್ತಾ ಎಂದು ಕೊಂಡರೆ ಅದು ತಪ್ಪು.   

5 /8

ಹೌದು, ರತನ್‌ ಟಾಟಾ ಅವರ ನಂತರ ಅವರು ಬಿಟ್ಟು ಹೋದ ಅಗಾದವಾದ ಸಾಮ್ರಾಜ್ವಯವನ್ನು ಲೇಹ್, ಮಾಯಾ ಮತ್ತು ನೆವಿಲ್ಲೆ- ರತನ್ ಟಾಟಾ ಅವರು ಮುನ್ನಡೆಸಲಿದ್ದಾರೆ. ಈ ಮೂವರು ರತನ್‌ ಟಾಟಾ ಅವರ ಸಹೋದರ ನೋಯೆಲ್ ನೇವಲ್ ಟಾಟಾ ಅವರ ಮಕ್ಕಳು.  

6 /8

ಹಿರಿಯ ಮಗಳಾದ ಲಿಯಾ ಟಾಟಾ , ಸ್ಪೇನ್‌ನ ಮ್ಯಾಡ್ರಿಡ್‌ನಲ್ಲಿರುವ IE ಬಿಸಿನೆಸ್ ಸ್ಕೂಲ್‌ನಿಂದ ಮಾರ್ಕೆಟಿಂಗ್‌ನಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದು, 2006 ರಲ್ಲಿ ಟಾಟಾ ಗ್ರೂಪ್‌ಗೆ ತಾಜ್ ಹೋಟೆಲ್ಸ್ ರೆಸಾರ್ಟ್ಸ್ ಮತ್ತು ಪ್ಯಾಲೇಸ್‌ಗಳಲ್ಲಿ ಸಹಾಯಕ ಮಾರಾಟ ವ್ಯವಸ್ಥಾಪಕರಾಗಿ ಸೇರಿದ್ದರು.   

7 /8

ಮಾಯಾ ಟಾಟಾ ಅವರು ಟಾಟಾ ಕ್ಯಾಪಿಟಲ್‌ನಲ್ಲಿ ಗುಂಪಿನ ಪ್ರಮುಖ ಹಣಕಾಸು ಸೇವಾ ಕಂಪನಿಯಲ್ಲಿ ವಿಶ್ಲೇಷಕರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು.   

8 /8

ರತನ್ ಟಾಟಾ ಅವರು 1991 ರಲ್ಲಿ ಟಾಟಾ ಗ್ರೂಪ್‌ನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು, ಒಂದು ಶತಮಾನಕ್ಕೂ ಹೆಚ್ಚು ಹಿಂದೆ ಅವರ ಮುತ್ತಜ್ಜ ಸ್ಥಾಪಿಸಿದ ಬೃಹತ್ ಸಮೂಹವನ್ನು ಅವರು ನೋಡಿಕೊಳ್ಳುತ್ತಾ ಬಂದಿದ್ದರು.