Home Loan: ಸ್ವಂತ ಮನೆ ಕಟ್ಟಬೇಕು ಅಥವಾ ಖರೀದಿಸಬೇಕು ಎಂದು ಕನಸು ಕಾಣುವವರಿಗೆ ಗೃಹ ಸಾಲವುತುಂಬಾ ಪ್ರಯೋಜನಕಾರಿ ಆಗಿದೆ. ಈ ಸಂದರ್ಭದಲ್ಲಿ ಕೆಲವು ಸಣ್ಣ-ಸಣ್ಣ ವಿಚಾರಗಳ ಬಗ್ಗೆ ನಿಗಾವಹಿಸುವುದರಿಂದ ನೀವು ಹೆಚ್ಚು ಹಣ ಉಳಿತಾಯ ಮಾಡಬಹುದು.
Home Loan Tricks: ಸ್ವಂತ ಮನೆ ಹೊಂದಲು ಗೃಹ ಸಾಲವು ತುಂಬಾ ಪ್ರಯೋಜನಕಾರಿಯೇ ಆದರೂ, ನೀವು ಬ್ಯಾಂಕ್ನಿಂದ ಪಡೆಯುವ ಹೋಮ್ ಲೋನ್ ಗೆ ಬಡ್ಡಿಯನ್ನು ಪಾವತಿಸಬೇಕಾಗುತ್ತದೆ. ನೀವು ಹೋಮ್ ಲೋನ್ ಕಟ್ಟುವಾಗ ಬಡ್ಡಿ ಕಡಿಮೆ ಎನಿಸಿದರೂ ಸಾಲ ಮರುಪಾವತಿಯ ಒಟ್ಟು ಮೊತ್ತವನ್ನು ಗಮನಿಸಿದಾಗ ಲಕ್ಷಗಟ್ಟಲೆ ಬಡ್ಡಿ ಪಾವತಿಸುತ್ತೀರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಮನೆ ಕಟ್ಟುವ/ಖರೀದಿಸುವ ಕನಸನ್ನು ನನಸಾಗಿಸಲು ಗೃಹಸಾಲಗಳು ಹಣಕಾಸಿನ ನೆರವನ್ನು ಒದಗಿಸುತ್ತದೆ. ನೀವು ಗೃಹ ಸಾಲ ಪಡೆಯುವಾಗ ಕೆಲವು ಪುಟ್ಟ-ಪುಟ್ಟ ವಿಚಾರಗಳ ಬಗ್ಗೆ ನಿಗಾವಹಿಸುವುದರಿಂದ ಬಡ್ಡಿಯ ಹಣದಲ್ಲಿ ಲಕ್ಷ ರೂಪಾಯಿಯಷ್ಟು ಹಣ ಉಳಿಸಬಹುದು. ಅಂತಹ 5 ಪ್ರಮುಖ ಟ್ರಿಕ್ ಗಳೆಂದರೆ...
ಗೃಹ ಸಾಲ ಪಡೆದಾಗ ಆ ಸಾಲವನ್ನು ತೀರಿಸಲು 30 ವರ್ಷಗಳವರೆಗೆ ಕಾಲಾವಕಾಶವಿರುತ್ತದೆ. ನೀವು ಹೆಚ್ಚಿನ ವರ್ಷಗಳವರೆಗೆ ಸಾಲದ ಅವಧಿಯನ್ನು ಹೊಂದಿದರೆ ತಿಂಗಳ EMI ಕಡಿಮೆಯಾಗುತ್ತದೆ. ಆದರೆ, ಹೆಚ್ಚಿನ ಬಡ್ಡಿ ಪಾವತಿಸುತ್ತೀರಿ.
ಒಂದೊಮ್ಮೆ ನೀವು ದೀರ್ಘಾವಧಿಯವರೆಗೆ ಹೋಮ್ ಲೋನ್ ಪಡೆದಿದ್ದರೂ ಸಹ ಹಣ ಹೊಂದಿಕೆಯಾದಂತೆ ಸಾಲವನ್ನು ಮರುಪಾವತಿ ಮಾಡಲು ಪ್ರಯತ್ನಿಸಿ. ಇದು ಸಾಲದ ಅವಧಿಯನ್ನು ಕಡಿಮೆ ಮಾಡುವುದಲ್ಲದೆ, ಲಕ್ಷ ರೂ.ಗಳಷ್ಟು ಹಣವನ್ನು ಉಳಿತಾಯ ಮಾಡುತ್ತದೆ.
ಗೃಹ ಸಾಲಕ್ಕೆ ಅರ್ಜಿ ಸಲ್ಲಿಸುತ್ತಿದ್ದರೆ ನಿಮ್ಮ ಹೆಂಡತಿಯ ಹೆಸರನ್ನೂ ಅದರಲ್ಲಿ ಸೇರಿಸಿ ಜಂಟಿ ಸಾಲವನ್ನು ತೆಗೆದುಕೊಳ್ಳಿ. ಜಂಟಿ ಸಾಲದಲ್ಲಿ ಬಡ್ಡಿದರ ಕಡಿಮೆ ಇರುತ್ತದೆ. ಮಹಿಳೆಯರ ಹೆಸರಿನಲ್ಲಿ ಪಡೆಯುವ ಗೃಹ ಸಾಲಕ್ಕೆ 5 ಬೇಸಿಸ್ ಪಾಯಿಂಟ್ಗಳಷ್ಟು ಕಡಿಮೆ ಬಡ್ಡಿ ಸೌಕರ್ಯ ಲಭ್ಯವಿದೆ.
ನೀವು ಹೋಮ್ ಲೋನ್ ಕೊಳ್ಳುವಾಗ ತಪ್ಪದೇ ಗೃಹ ಸಾಲ ವಿಮೆಯನ್ನು ತೆಗೆದುಕೊಳ್ಳಿ. ಕಷ್ಟದ ಸಮಯದಲ್ಲಿ ಇದು ನಿಮ್ಮ ಕುಟುಂಬಸ್ಥರಿಗೆ ಸಹಾಯಕವಾಗಿದೆ.
ಗೃಹ ಸಾಲದ ಬಡ್ಡಿದರಗಳು ಬದಲಾದಂತೆ ಅದರಲ್ಲೂ ಬಡ್ಡಿದಾರ ಹೆಚ್ಚಾದಾಗ ನೀವು ಬ್ಯಾಂಕ್ನೊಂದಿಗೆ ಮಾತನಾಡಿ ಹೋಮ್ ಲೋನ್ ಪುನರ್ರಚಿಸಬೇಕು. ಯಾವುದೇ ಕಾರಣಕ್ಕೂ ಸಾಲದ ಅವಧಿಯನ್ನು ವಿಸ್ತರಿಸಬೇಡಿ. ಈ ಟ್ರಿಕ್ಸ್ ಅನುಸರಿಸಿದರೆ ನೀವು ಕನಿಷ್ಠ ಎಂದರೂ ಲಕ್ಷ ರೂ.ವರೆಗೆ ಹಣ ಉಳಿತಾಯ ಮಾಡಬಹುದು.