Heaviest Cricket Bats: ಕ್ರಿಕೆಟ್ ಲೋಕದಲ್ಲಿ ಅದೆಷ್ಟೊ ದಾಖಲೆಗಳನ್ನು ಕಂಡಿದ್ದೇವೆ. ಮೈದಾನದಲ್ಲಿ ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್ ಹೀಗೆ ಹತ್ತು ಹಲವಾರು ವಿಷಯಗಳಲ್ಲಿ ದಾಖಲೆ ನಿರ್ಮಾಣ ಅಥವಾ ಈ ಹಿಂದೆ ಬರೆದ ದಾಖಲೆಯನ್ನು ಮುರಿದಿರುವುದನ್ನು ನೋಡಿದ್ದೇವೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
ಕ್ರಿಕೆಟ್ ಲೋಕದಲ್ಲಿ ಅದೆಷ್ಟೊ ದಾಖಲೆಗಳನ್ನು ಕಂಡಿದ್ದೇವೆ. ಮೈದಾನದಲ್ಲಿ ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್ ಹೀಗೆ ಹತ್ತು ಹಲವಾರು ವಿಷಯಗಳಲ್ಲಿ ದಾಖಲೆ ನಿರ್ಮಾಣ ಅಥವಾ ಈ ಹಿಂದೆ ಬರೆದ ದಾಖಲೆಯನ್ನು ಮುರಿದಿರುವುದನ್ನು ನೋಡಿದ್ದೇವೆ. ಆದರೆ ನಾವಿಂದು ಇವೆಲ್ಲದರ ಹೊರತಾಗಿರುವ ಒಂದು ಅಪರೂಪದ ವಿಷಯದ ಬಗ್ಗೆ ಮಾಹಿತಿ ನೀಡಲಿದ್ದೇವೆ. ಕ್ರಿಕೆಟ್ ಇತಿಹಾಸಲ್ಲಿ ಅತೀ ಭಾರವಾದ ಬ್ಯಾಟ್ ಹಿಡಿದು ಮೈದಾನಕ್ಕೆ ಬಂದವರು ಯಾರು ಗೊತ್ತಾ? ಈ ಎಲ್ಲಾ ವಿಷಯಗಳ ಬಗ್ಗೆ ಇಂದು ಮಾಹಿತಿ ನೀಡಲಿದ್ದೇವೆ.
ಕ್ರಿಕೆಟ್ ದೇವರು ಸಚಿನ್ ರಮೇಶ್ ತೆಂಡೂಲ್ಕರ್ ಅವರ ಪರಿಚಯದ ಅಗತ್ಯವಿಲ್ಲ. ODI ಕ್ರಿಕೆಟ್ ನಲ್ಲಿ ಅತಿ ಹೆಚ್ಚು ರನ್ಗಳು, ಅತಿ ಹೆಚ್ಚು ಶತಕಗಳು, ಅತಿ ಹೆಚ್ಚು ಟೆಸ್ಟ್ ರನ್ಗಳು ಮತ್ತು ಇನ್ನೂ ಅನೇಕ ದಾಖಲೆಗಳನ್ನು ಇವರ ಹೆಸರಿನಲ್ಲಿ ಸೇರಿವೆ. ಕ್ಲಾಸಿ ಮತ್ತು ಆಧುನಿಕ ಬ್ಯಾಟಿಂಗ್ ಕೌಶಲ್ಯಗಳಿಗೆ ಹೆಸರುವಾಸಿಯಾದ ಸಚಿನ್ ತೆಂಡೂಲ್ಕರ್, ಬಹುಶಃ 80 ಮತ್ತು 90 ರ ದಶಕದಲ್ಲಿ ಜನಿಸಿದ ಮಕ್ಕಳು ಕ್ರಿಕೆಟ್ ವೀಕ್ಷಿಸಲು ಇವರೇ ಪ್ರಮುಖ ಕಾರಣ ಎನ್ನಬಹುದು. ಸಚಿನ್ ಎಂಆರ್ಎಫ್ ಮತ್ತು ಅಡಿಡಾಸ್ ಬ್ಯಾಟ್’ಗಳೊಂದಿಗೆ ಆಡುತ್ತಿದ್ದರು. ಇದರ ತೂಕ 1.47 ಕೆಜಿಗಿಂತಲೂ ಹೆಚ್ಚಿತ್ತು ಎನ್ನಲಾಗಿದೆ.
'ಯೂನಿವರ್ಸ್ ಬಾಸ್' ಕ್ರಿಸ್ ಗೇಲ್ ಇತಿಹಾಸದಲ್ಲಿ ಅತ್ಯಂತ ಜನಪ್ರಿಯ ಕ್ರಿಕೆಟಿಗರಲ್ಲಿ ಒಬ್ಬರು. ಕ್ರಿಸ್ ಗೇಲ್ ಸುಮಾರು ಒಂದು ದಶಕದ ಕಾಲ T20, ODIಗಳು ಮತ್ತು ಟೆಸ್ಟ್ ಪಂದ್ಯಗಳ ಅವಿಭಾಜ್ಯ ಅಂಗವಾಗಿದ್ದರು, ಇನ್ನು ಗೇಲ್ ಬಳಸಿದ ಕ್ರಿಕೆಟ್ ಬ್ಯಾಟ್ ಸ್ಪಾರ್ಟನ್ ಸಿಜಿ ಬ್ಯಾಟ್ ಆಗಿದ್ದು, ಇದರ ತೂಕ ಸುಮಾರು 1.36 ಕೆ.ಜಿ ಇದೆ.
ಟೆಸ್ಟ್’ನಲ್ಲಿ ಟ್ರಿಪಲ್ ಸೆಂಚುರಿ ಗಳಿಸಿದ ಮೊದಲ ಭಾರತೀಯ ಆಟಗಾರ ವೀರೇಂದ್ರ ಸೆಹ್ವಾಗ್ ವಿಶ್ವ ಕಂಡ ಅತ್ಯಂತ ವಿನಾಶಕಾರಿ ಆರಂಭಿಕ ಬ್ಯಾಟ್ಸ್ಮನ್ಗಳಲ್ಲಿ ಒಬ್ಬರು. ಗಿಲ್ ಕ್ರಿಸ್ಟ್, ಹೇಡನ್, ಸಯೀದ್ ಅನ್ವರ್, ಜಯಸೂರ್ಯ ಸೇರಿದಂತೆ ಅನೇಕ ದಂತಕಥೆಗಳೊಂದಿಗೆ ಹೋಲಿಕೆಯಾಗಬಲ್ಲ ವ್ಯಕ್ತಿತ್ವ ಮತ್ತು ಆಟ ಅವರದ್ದು. ಇವರು ಸುಮಾರು 1.35 ಕೆಜಿ ತೂಕದ ಬ್ಯಾಟ್’ನ್ನು ಬಳಸುತ್ತಾರೆ.
ಇನ್ನು ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿ ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಇದ್ದಾರೆ. ತಮ್ಮ 'ಹೆಲಿಕಾಪ್ಟರ್' ಶಾಟ್ ಮೂಲಕ ಕ್ರಿಕೆಟ್ ಲೋಕದಲ್ಲೇ ಸಂಚಲನ ಮೂಡಿಸಿದ ಧೋನಿ, ಭಾರತಕ್ಕೆ 3 ICC ಟ್ರೋಫಿಗಳನ್ನು ಗೆದ್ದ ನಾಯಕ (ಎರಡು ವಿಶ್ವಕಪ್ ಸೇರಿದಂತೆ) ಎಂಬ ಕೀರ್ತಿಗೆ ಭಾಜನರಾಗಿದ್ದಾರೆ. ಇವರು 1.27 ಕೆಜಿ ತೂಕದ ಕ್ರಿಕೆಟ್ ಬ್ಯಾಟ್ ಅನ್ನು ಬಳಸುತ್ತಾರೆ.
ಕ್ರಿಕೆಟ್ ಇತಿಹಾಸದಲ್ಲಿ ಅತೀ ಹೆಚ್ಚು ತೂಕದ ಬ್ಯಾಟ್ ಹಿಡಿದ ಆಟಗಾರರ ಪಟ್ಟಿಯಲ್ಲಿ ಡೇವಿಡ್ ವಾರ್ನರ್ 5 ನೇ ಸ್ಥಾನದಲ್ಲಿದ್ದಾರೆ. ವಾರ್ನರ್ ಕ್ರಿಕೆಟ್ ಜಗತ್ತು ಕಂಡ ಅತ್ಯಂತ ಭಯಭೀತ ಮತ್ತು ದಿಟ್ಟ ಬ್ಯಾಟ್ಸ್ಮನ್ಗಳಲ್ಲಿ ಒಬ್ಬರು. ಎಡಗೈ ಬ್ಯಾಟ್ಸ್ಮನ್ ಆಗಿರುವ ಇವರು ಸುಮಾರು 1.24 ಕೆಜಿ ತೂಕದ ಗ್ರೇ ನಿಕೋಲ್ಸ್ ಕಬೂಮ್ ಕ್ರಿಕೆಟ್ ಬ್ಯಾಟ್ ಅನ್ನು ಬಳಸುತ್ತಾರೆ.