2021ರ ಟಿ-20 ವಿಶ್ವಕಪ್‌ನಲ್ಲಿ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಆಡಿದ ಈ 6 ಆಟಗಾರರು ಈ ಬಾರಿಯ ಟಿ-20 ವಿಶ್ವಕಪ್‌ನಲ್ಲಿ ಆಡುತ್ತಿಲ್ಲ.
ನವದೆಹಲಿ: ಈ ಬಾರಿಯ ಟಿ-20 ವಿಶ್ವಕಪ್‍ನಲ್ಲಿ ಹೊಸ ಟೀಂ ಇಂಡಿಯಾ ಆಡಲಿದೆ. ಕಳೆದ ಟಿ-20 ವಿಶ್ವಕಪ್‌ನಿಂದ ಈ ಬಾರಿಯ ಟಿ-20 ವಿಶ್ವಕಪ್‌ಗೆ ಟೀಂ ಇಂಡಿಯಾ ಸಾಕಷ್ಟು ಬದಲಾಗಿದೆ. ಈ ಬಾರಿ ಟೀಂ ಇಂಡಿಯಾದ ಕಮಾಂಡ್ ರೋಹಿತ್ ಶರ್ಮಾ ಕೈಯಲ್ಲಿದ್ದು, ಕೋಚ್ ರಾಹುಲ್ ದ್ರಾವಿಡ್ ಮಾರ್ಗದರ್ಶನದಲ್ಲಿ ತಂಡ ಸಜ್ಜಾಗಿದೆ. 2021ರ ಟಿ-20 ವಿಶ್ವಕಪ್‌ನಲ್ಲಿ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಆಡಿದ ಈ 6 ಆಟಗಾರರು ಈ ಬಾರಿಯ ಟಿ-20 ವಿಶ್ವಕಪ್‌ನಲ್ಲಿ ಆಡುತ್ತಿಲ್ಲ. ಅವರು ಯಾರು ಅನ್ನೋ ಮಾಹಿತಿ ಇಲ್ಲಿದೆ ನೋಡಿ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
2022ರ ಟಿ-20 ವಿಶ್ವಕಪ್ ತಂಡದಲ್ಲಿ ಸ್ಟಾರ್ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಇಶಾನ್ ಕಿಶನ್ ಸ್ಥಾನ ಪಡೆಯಲು ಸಾಧ್ಯವಾಗಲಿಲ್ಲ. ಕಳೆದ ವರ್ಷ ನಡೆದ ಟಿ-20 ವಿಶ್ವಕಪ್‌ನಲ್ಲಿ ಇಶಾನ್ ಕಿಶನ್ ಟೀಂ ಇಂಡಿಯಾದ ಭಾಗವಾಗಿದ್ದರು.
ಮಿಸ್ಟರಿ ಸ್ಪಿನ್ನರ್ ವರುಣ್ ಚಕ್ರವರ್ತಿ ವಿರಾಟ್ ನಾಯಕತ್ವದಲ್ಲಿ ಕಳೆದ ಬಾರಿಯ ಟಿ-20 ವಿಶ್ವಕಪ್ ಆಡಲು ಅವಕಾಶ ಪಡೆದಿದ್ದರು. ಆದರೆ ಈ ಬಾರಿ ಸ್ಥಾನ ಪಡೆಯಲು ಅವರು ವಿಫಲರಾಗಿದ್ದಾರೆ. ಅತ್ಯುತ್ತಮ ಬೌಲಿಂಗ್ ಕೌಶಲ್ಯ ಹೊಂದಿದ್ದರು ವರುಣ್ ಈ ಬಾರಿ ಟೀಂ ಇಂಡಿಯಾದ ಭಾಗವಾಗಿಲ್ಲ.
ಟೀಂ ಇಂಡಿಯಾದ ಮಾಂತ್ರಿಕ ಬೌಲರ್ ರಾಹುಲ್ ಚಹಾರ್ ಕೂಡ ಈ ಬಾರಿಯ ಟಿ-20 ವಿಶ್ವಕಪ್‌ನಲ್ಲಿ ಆಡುತ್ತಿಲ್ಲ. ರಾಹುಲ್ ಚಹಾರ್ 2021ರ ಟಿ-20 ವಿಶ್ವಕಪ್‌ನಲ್ಲಿ ತಂಡದ ಭಾಗವಾಗಿದ್ದರು.
ಶಾರ್ದೂಲ್ ಠಾಕೂರ್ ಭಾರತ ತಂಡಕ್ಕೆ ಅನೇಕ ಪಂದ್ಯಗಳಲ್ಲಿ ಗೆಲುವು ತಂದುಕೊಟ್ಟಿದ್ದಾರೆ. ಆದರೆ ಶಾರ್ದೂಲ್ ಈ ಬಾರಿ ತಂಡದಲ್ಲಿ ಸ್ಥಾನ ಪಡೆಯಲು ಸಾಧ್ಯವಾಗಲಿಲ್ಲ.
ಟೀಂ ಇಂಡಿಯಾದ ಸ್ಟಾರ್ ವೇಗಿ ಮೊಹಮ್ಮದ್ ಶಮಿ ಕಳೆದ ವಿಶ್ವಕಪ್‌ನಲ್ಲಿ ಅತ್ಯಂತ ದುಬಾರಿಯಾಗಿದ್ದರು. ಈ ಕಾರಣದಿಂದಾಗಿ ಅವರನ್ನು ಈ ಬಾರಿ ಸ್ಟ್ಯಾಂಡ್‌ಬೈ ಆಟಗಾರರಲ್ಲಿ ಇರಿಸಲಾಗಿದೆ.
ಗಾಯದ ಕಾರಣ ರವೀಂದ್ರ ಜಡೇಜಾ 2022ರ ಟಿ-20 ವಿಶ್ವಕಪ್‌ನಲ್ಲಿ ತಂಡದ ಭಾಗವಾಗಿಲ್ಲ. ಜಡೇಜಾ ಕಳೆದ ಬಾರಿ ತಂಡದಲ್ಲಿದ್ದರು. ಕಳೆದ ಟಿ-20 ವಿಶ್ವಕಪ್‍ನ ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಅರ್ಧಶತಕ ಭಾರಿಸುವ ಮೂಲಕ ತಂಡಕ್ಕೆ ಗೆಲುವು ತಂದಕೊಡಲು ಹೋರಾಡಿದರೂ ಪ್ರಯೋಜನವಾಗಿರಲಿಲ್ಲ.