April Horoscope: ಏಪ್ರಿಲ್‌ನಲ್ಲಿ ಹಲವು ಶುಭ ಯೋಗಗಳ ನಿರ್ಮಾಣ, ಐದು ರಾಶಿಯವರಿಗೆ ಗೋಲ್ಡನ್ ಟೈಮ್

Lucky Zodiac Signs April 2024: 2024ರ ನಾಲ್ಕನೇ ತಿಂಗಳಿಗೆ ನಾವು ಕಾಲಿಟ್ಟಿದ್ದೇವೆ. ಏಪ್ರಿಲ್ ತಿಂಗಳಿನಲ್ಲಿ  ಗ್ರಹಗಳ ಸ್ಥಾನದಲ್ಲಿ ಪ್ರಮುಖ ಬದಲಾವಣೆಯಿಂದಾಗಿ ಹಲವು ಮಂಗಳಕರ ಯೋಗಗಳು ರೂಪುಗೊಳ್ಳುತ್ತಿದ್ದು, ಕೆಲವು ರಾಶಿಯವರಿಗೆ ಕೆಟ್ಟ ದಿನಗಳು ಕಳೆದು ಒಳ್ಳೆಯ ದಿನಗಳು ಆರಂಭವಾಗುವ ಸಮಯ ಎಂದು ಹೇಳಲಾಗುತ್ತಿದೆ. 
 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /8

ಏಪ್ರಿಲ್ ತಿಂಗಳಿನಲ್ಲಿ ಕೆಲವು ಪ್ರಮುಖ ಗ್ರಹಗಳ ಸಂಚಾರವು ಹಲವು ಶುಭ ಯೋಗಗಳನ್ನು ನಿರ್ಮಿಸುತ್ತಿವೆ. ಇದರೊಂದಿಗೆ ವರ್ಷದ ಮೊದಲ ಸೂರ್ಯಗ್ರಹಣವೂ ಸಹ ಏಪ್ರಿಲ್ ಮಾಸದಲ್ಲಿಯೇ ಇರಲಿದೆ. 

2 /8

ಏಪ್ರಿಲ್‌ನಲ್ಲಿ 2024ರ ಮೊದಲ ಸೂರ್ಯ ಗ್ರಹಣ ಸಂಭವಿಸಲಿದೆ. ಇದಲ್ಲದೆ, ಒಂದೇ ರಾಶಿಯಲ್ಲಿ ಶುಕ್ರ, ಬುಧ, ಮಂಗಳ, ರಾಹು ಗ್ರಹಗಳ ಸಂಯೋಗದಿಂದಾಗಿ ಚತುರ್ಗ್ರಾಹಿ ಹೋಗ ನಿರ್ಮಾಣವಾಗುತ್ತಿದೆ. ಇದಲ್ಲದೆ, ಶುಕ್ರ-ಬುಧರ ಸಂಯೋಗದಿಂದ ಮೇಷ ರಾಶಿಯಲ್ಲಿ ಲಕ್ಷ್ಮೀನಾರಾಯಣ ಯೋಗ ರೂಪುಗೊಳ್ಳುತ್ತಿದೆ. ಬಳಿಕ ಬುಧ-ಸೂರ್ಯರ ಯುತಿಯಿಂದ ಬುಧಾದಿತ್ಯ ಯೋಗವೂ ನೀರ್ಮಾಣವಾಗಲಿದೆ. 

3 /8

ಏಪ್ರಿಲ್‌ನಲ್ಲಿ ಮಂಗಳಕರ ಯೋಗಗಳ ನಿರ್ಮಾಣದಿಂದ ಎಲ್ಲಾ ರಾಶಿಯವರ ಜೀವ್ನಾದಲ್ಲಿ ಶುಭ-ಅಶುಭ ಫಲಗಳು ಕಂಡು ಬರುತ್ತವೆ. ಆದರೂ, ಈ ಸಮಯದಲ್ಲಿ ಐದು ರಾಶಿಯವರ ಜೀವನದಲ್ಲಿ ಕೆಟ್ಟ ಸಮಯಗಳು ಕಳೆದು ಸುವರ್ಣ ಸಮಯ ಆರಂಭವಾಗಲಿದೆ ಎಂದು ಹೇಳಲಾಗುತ್ತಿದೆ. ಆದೃಷ್ಟದ ರಾಶಿಗಳು ಯಾವುವು ಎಂದು ತಿಳಿಯೋಣ... 

4 /8

ಏಪ್ರಿಲ್‌ನಲ್ಲಿ ಗ್ರಹ ಗೋಚಾರದ ಫಲವಾಗಿ ವೃಷಭ ರಾಶಿಯ ಜನರಿಗೆ ಉದ್ಯೋಗ ಕ್ಷೇತ್ರದಲ್ಲಿ ಒಳ್ಳೆಯ ಸಮಯವನ್ನು ತರಲಿದೆ. ಸ್ವಂತ ಉದ್ಯಮದಲ್ಲಿ ತೊಡಗಿರುವವರಿಗೆ ಬಂಪರ್ ಧನಲಾಭ ಸಾಧ್ಯತೆ ಇದೆ. ಅನಿರೀಕ್ಷಿತ ಹಣದ ಮೂಲಗಳು ನಿಮ್ಮ ಆರ್ಥಿಕ ಸ್ಥಿತಿಯನ್ನು ಉತ್ತಮಗೊಳಿಸಲಿದೆ. ವಿಶೇಷ ವ್ಯಕ್ತಿಯೊಂದಿಗೆ ಸಂಪರ್ಕ ಬೆಳೆಯಲಿದೆ. 

5 /8

ಏಪ್ರಿಲ್ ತಿಂಗಳಿನಲ್ಲಿ ನಿರ್ಮಾಣವಾಗುತ್ತಿರುವ ಕೆಲವು ಶುಭ ಯೋಗಗಳು ಸಿಂಹ ರಾಶಿಯವರಿಗೆ ಅದೃಷ್ಟದ ಸಮಯ ಎಂತಲೇ ಹೇಳಬಹುದು. ಈ ವೇಳೆ ನಿಮ್ಮ ದೀರ್ಘಾವಧಿಯ ಸಮಸ್ಯೆಗಳಿಗೆ ಮುಕ್ತಿ ದೊರೆಯಲಿದೆ. ಪ್ರಯಾಣವು ಲಾಭದಾಯಕವಾಗಿರಲಿದೆ. ಸುಖ-ಸಂತೋಷದ ಕೌಟುಂಬಿಕ ಜೀವನವನ್ನು ಆನಂದಿಸುವಿರಿ. 

6 /8

ಏಪ್ರಿಲ್ ಮಾಸದಲ್ಲಿ ಗ್ರಹಗಳ ಸಂಚಾರದಿಂದ ನಿರ್ಮಾಣವಾಗಲಿರುವ ಶುಭ ಯೋಗಗಳು ತುಲಾ ರಾಶಿಯವರಿಗೂ ವೃತ್ತಿ-ವ್ಯವಹಾರದಲ್ಲಿ ಪ್ರಗತಿಯನ್ನು ನೀಡಲಿದೆ. ಹೊಸ ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಿರುವವರಿಗೆ ಉತ್ತಮ ಸಮಯ. ಜೀವನದಲ್ಲಿ ಎದುರಾಗಿದ್ದ ಕಷ್ಟಗಳಿಂದ ಪರಿಹಾರ ಪಡೆಯುವ ಸಮಯ ಇದಾಗಿದೆ. 

7 /8

ವೃಶ್ಚಿಕ ರಾಶಿಯ ಜನರಿಗೆ ಏಪ್ರಿಲ್‌ನಲ್ಲಿ ನಿರ್ಮಾಣವಾಗಲಿರುವ ಶುಭ ಯೋಗಗಳು ಅದೃಷ್ಟದ ಬಾಗಿಲುಗಳನ್ನು ತೆರೆಯಲಿವೆ. ಈ ಸಮಯದಲ್ಲಿ ವೃತ್ತಿ ಬದುಕಿನಲ್ಲಿ ಹೊಸ ಹೊಸ ಅವಕಾಶಗಳು ದೊರೆಯಲಿದ್ದು, ಉತ್ತಮ ಯಶಸ್ಸನ್ನು ಸಾಧಿಸುವಿರಿ. ಉದ್ಯೋಗಸ್ಥರಿಗೆ ನಿಮ್ಮ ಕೆಲಸಕ್ಕೆ ತಕ್ಕ ಮನ್ನಣೆ ಪ್ರಾಪ್ತಿಯಾಗಲಿದೆ. ಹಣಕಾಸಿನ ಸ್ಥಿತಿಯೂ ಉತ್ತಮವಾಗಿರಲಿದೆ. 

8 /8

ಏಪ್ರಿಲ್ ಗ್ರಹ ಗೋಚಾರದ ಫಲವಾಗಿ ಧನು ರಾಶಿಯವರ ಅದೃಷ್ಟವೂ ಹೊಳೆಯಲಿದೆ. ಉದ್ಯೋಗ-ವ್ಯವಹಾರದಲ್ಲಿ ನಿಮ್ಮ ಪರಿಶ್ರಮಕ್ಕೆ ತಕ್ಕ ಫಲ ದೊರೆಯಲಿದ್ದು, ಪ್ರಗತಿಯನ್ನು ಸಾಧಿಸುವಿರಿ. ಹೊಸ ಆದಾಯ ಮೂಲಗಳು ಸೃಷ್ಟಿಯಾಗಲಿದ್ದು ಹಣಕಾಸಿನ ಸ್ಥಿತಿ ಬಲಗೊಳ್ಳಲಿದೆ.  ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.