Surya Grahan on Shani Amavasya: ಹಲವು ವರ್ಷಗಳ ಬಳಿಕ ಸರ್ವ ಪಿತೃ ಅಮಾವಾಸ್ಯೆಯ ದಿನ ಸೂರ್ಯ ಗ್ರಹಣ ಸಂಭವಿಸುತ್ತಿದೆ. ನಾಳೆ ಅಕ್ಟೋಬರ್ 14, 2023ರ ಶನಿವಾರದಂದು ಈ ಅಮಾವಾಸ್ಯೆ ಸಂಭವಿಸುವುದರಿಂದ ಇದನ್ನು ಶನಿ ಅಮಾವಾಸ್ಯೆ ಎಂತಲೂ ಕರೆಯಲಾಗುತ್ತದೆ. ಈ ದಿನ ಅಪ್ಪಿತಪ್ಪಿಯೂ ಕೆಲವು ತಪ್ಪುಗಳನ್ನು ಮಾಡಲೇಬಾರದು ಎನ್ನಲಾಗುತ್ತದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.
ಕುಟುಂಬದಲ್ಲಿ ಪೂರ್ವಜರ ಆಶೀರ್ವಾದ ಪಡೆಯಲು, ಪಿತೃ ದೋಷ ನಿವಾರಿಸಲು ಸರ್ವ ಪಿತೃ ಅಮಾವಾಸ್ಯೆ ಎಂದರೆ ಮಹಾಲಯ ಅಮಾವಾಸ್ಯೆಯ ದಿನವನ್ನು ತುಂಬಾ ಪ್ರಾಶಸ್ತ್ಯವಾದ ದಿನ ಎಂದು ನಂಬಲಾಗಿದೆ. ಈ ವರ್ಷ ನಾಳೆ ಅಕ್ಟೋಬರ್ 14 ರಂದು ಸರ್ವ ಪಿತೃ ಅಮವಾಸ್ಯೆಯನ್ನು ಆಚರಿಸಲಾಗುತ್ತಿದೆ.
ಯಾವುದೇ ಶನಿವಾರದ ದಿನ ಅಮಾವಾಸ್ಯೆ ಬಂದರೆ ಅದನ್ನು ಶನಿ ಅಮಾವಾಸ್ಯೆ ಎಂತಲೂ ಕರೆಯಲಾಗುತ್ತದೆ. ನಾಳೆ, ಶನಿವಾರದಂದು ಬರಲಿರುವ ಸರ್ವ ಪಿತೃ ಅಮಾವಾಸ್ಯೆಯನ್ನೂ ಸಹ ಶನಿ ಅಮಾವಾಸ್ಯೆ ಎಂದು ಕರೆಯಲಾಗುತ್ತದೆ. ಸರ್ವ ಪಿತೃ ಅಮಾವಾಸ್ಯೆಯ ದಿನವೇ ಸೂರ್ಯ ಗ್ರಹಣ ಸಂಭವಿಸುತ್ತಿದೆ.
ಹಲವು ವರ್ಷಗಳ ನಂತರ ಸರ್ವ ಪಿತೃ ಅಮಾವಾಸ್ಯೆಯಂದು ಸೂರ್ಯಗ್ರಹಣ ಸಂಭವಿಸುತ್ತಿದೆ. ಅಮಾವಾಸ್ಯೆಯ ದಿನ ಅಕ್ಟೋಬರ್ 14ರ ರಾತ್ರಿ 8:34ರಿಂದ ಮರುದಿನ ಅಕ್ಟೋಬರ್ 15ರ ಮುಂಜಾನೆ 2:25 ರವರೆಗೆ ಸೂರ್ಯ ಗ್ರಹಣ ಇರಲಿದೆ. ಹಾಗಾಗಿ, ಭಾರತದಲ್ಲಿ ಇದು ಗೋಚರಿಸುವುದಿಲ್ಲ ಎಂದು ಹೇಳಲಾಗುತ್ತಿದೆ.
ಖಗೋಳ ವಿಧ್ಯಮಾನಗಳಲ್ಲಿ ಒಂದಾದ ಗ್ರಹಣಕ್ಕೆ ಜ್ಯೋತಿಷ್ಯ ಶಾಸ್ತ್ರದಲ್ಲಿಯೂ ವಿಶೇಷ ಮಹತ್ವವಿದೆ. ಇದೀಗ ಹಲವು ವರ್ಷಗಳ ಬಳಿಕ ಸರ್ವ ಪಿತೃ ಅಮಾವಾಸ್ಯೆಯ ದಿನ, ಅದರಲ್ಲೂ ವಿಶೇಷವಾಗಿ ಶನಿ ಅಮಾವಾಸ್ಯೆಯ ದಿನ ಸಂಭವಿಸುತ್ತಿರುವ ಸೂರ್ಯಗ್ರಹಣವೂ ಬಹಳ ವಿಶೇಷವಾಗಿದ್ದು ಈ ದಿನ ನಾವು ಅಪ್ಪಿತಪ್ಪಿಯೂ ಕೂಡ ಕೆಲವು ತಪ್ಪುಗಳನ್ನು ಮಾಡಲೇಬಾರದು ಎಂದು ಹೇಳಲಾಗುತ್ತದೆ. ಹಾಗಿದ್ದರೆ, ಈ ದಿನ ಯಾವ ಕೆಲಸಗಳನ್ನು ಮಾಡುವುದನ್ನು ತಪ್ಪಿಸಬೇಕು ಎಂದು ನೋಡುವುದಾದರೆ...
ಈ ವರ್ಷ ಸೂರ್ಯಗ್ರಹಣದ ನೆರಳಿನಲ್ಲಿ ಸರ್ವ ಪಿತೃ ಅಮಾವಾಸ್ಯೆಯನ್ನು ಆಚರಿಸಲಾಗುತ್ತಿದ್ದು ಇಂದು ಯಾವುದೇ ಕಾರಣಕ್ಕೂ ತುಳಸಿ ಪೂಜೆಯನ್ನು ಮಾಡಬಾರದು. ಮಾತ್ರವಲ್ಲ, ತುಳಸಿಯನ್ನು ಸ್ಪರ್ಶಿಸುವುದನ್ನು ಕೂಡ ನಿಷೇಧಿಸಲಾಗಿದೆ. ಇದರಿಂದ ತಾಯಿ ಲಕ್ಷ್ಮಿ ಕೋಪಿಸಿಕೊಳ್ಳುತ್ತಾಳೆ ಎನ್ನಲಾಗುತ್ತದೆ.
ಸರ್ವ ಪಿತೃ ಅಮಾವಾಸ್ಯೆಯ ದಿನ ಜಪ, ತಪ, ಉಪವಾಸವನ್ನು ಆಚರಿಸುವ ವ್ಯಕ್ತಿ ಈ ದಿನ ಮರೆತೂ ಸಹ ದೈಹಿಕ ಸಂಬಂಧವನ್ನು ಹೊಂದಬಾರದು. ಬ್ರಹ್ಮಚರ್ಯವನ್ನು ಆಚರಿಸಬೇಕು. ಇಲ್ಲದಿದ್ದರೆ, ಪಿತೃ ದೋಷ ಉಂಟಾಗಬಹುದು.
ಸರ್ವ ಪಿತೃ ಅಮಾವಾಸ್ಯೆ, ಶನಿ ಅಮಾವಾಸ್ಯೆಯ ದಿನವೇ ಸೂರ್ಯ ಗ್ರಹಣವೂ ಇದೆ. ಇಂದು ಕೈಲಾಗದವರಿಗೆ ತೊಂದರೆ ನೀಡುವುದರಿಂದ ರಾಹು-ಕೇತು ಗ್ರಹಗಳು ನಕಾರಾತ್ಮಕ ಪರಿಣಾಮವನ್ನು ಬೀರಬಹುದು.
ಅಮಾವಾಸ್ಯೆಯ ದಿನ ನಕಾರಾತ್ಮಕ ಶಕ್ತಿಗಳು ಹೆಚ್ಚು ಸಕ್ರಿಯವಾಗಿರುತ್ತವೆ. ಹಾಗಾಗಿ, ಸ್ಮಶಾನದಂತಹ ಸ್ಥಳಗಳಿಗೆ, ನಿರ್ಜನ ಪ್ರದೇಶಗಳಿಗೆ ಹೋಗುವುದನ್ನು ತಪ್ಪಿಸಿ. ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.