ನವೆಂಬರ್ 17 ರಿಂದ ಈ ರಾಶಿಗಳ ಜನರಿಗೆ ಕುಬೇರ ನಿಧಿ ಪ್ರಾಪ್ತಿ ಯೋಗ, ಲಕ್ಷ್ಮಿ ಕೃಪೆಯಿಂದ ಸೂರ್ಯನಂತೆ ಹೊಳೆಯಲಿದೆ ಅದೃಷ್ಟ!

Surya Gochar In Vruschik Rashi 2023: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಶೀಘ್ರದಲ್ಲಿಯೇ ಗ್ರಹಗಳ ರಾಜ ಎಂದೇ ಕರೆಯಲಾಗುವ ಸೂರ್ಯ ದೇವ ವೃಶ್ಚಿಕ ರಾಶಿಗೆ ಪ್ರವೇಶಿಸಲಿದ್ದಾನೆ. ಇದರಿಂದ ಮೂರು ರಾಶಿಗಳ ಜನರಿಗೆ ಧನಕುಬೇರ ನಿಧಿ ಪ್ರಾಪ್ತಿಯಾಗಲಿದ್ದು, ಅವರ ಅದೃಷ್ಟ ಸೂರ್ಯನಂತೆ ಹೊಳೆಯಲಿದೆ. (Spiritual News In Kannada) 
 

ಬೆಂಗಳೂರು: ಜೋತಿಷ್ಯ ಶಾಸ್ತ್ರದಲ್ಲಿ ಸೂರ್ಯ ದೇವನಿಗೆ ಗ್ರಹಗಳ ರಾಜನ ಸ್ಥಾನಮಾನ ಪ್ರಾಪ್ತಿ ಇದೆ. ಸೂರ್ಯ ಆತ್ಮವಿಶ್ವಾಸ, ತಂದೆ, ಬಾಸ್, ಸರ್ಕಾರಿ ನೌಕರಿ, ಘನತೆ-ಗೌರವ-ಪ್ರತಿಷ್ಠೆಯ ಕಾರಕ ಗ್ರಹ ಕೂಡ ಹೌದು. ಹೀಗಾಗಿ ಆತನ ರಾಶಿ ಪರಿವರ್ತನೆ ತುಂಬಾ ಮಹತ್ವವನ್ನು ಪಡೆದುಕೊಂಡಿದೆ. ಬರುವ ನವೆಂಬರ್ 17, 2023 ರಂದು ಸೂರ್ಯ ತನ್ನ ಸ್ನೇಹಿತನ ರಾಶಿಯಾಗಿರುವ ವೃಶ್ಚಿಕ ರಾಶಿಗೆ ಪ್ರವೇಶಿಸಲಿದ್ದಾನೆ. ಇದರಿಂದ ಕೆಲ ರಾಶಿಗಳ ಜನರ ಜೀವನದಲ್ಲಿ ಒಳ್ಳೆಯ ದಿನಗಳು ಆರಂಭಗೊಳ್ಳಲಿವೆ. ಈ ಜನರಿಗೆ ಪ್ರತಿಯೊಂದು ಕ್ಷೇತ್ರದಲ್ಲಿ ಯಶಸ್ಸು ಸಿಗಲಿದೆ. ಜೊತೆಗೆ ಘನತೆ-ಗೌರವ-ಪ್ರತಿಷ್ಠೆ ಕೂಡ ಹೆಚ್ಚಾಗುವ ಯೋಗವಿದೆ. ಬನ್ನಿ ಆ ಅದೃಷ್ಟವಂತ ರಾಶಿಗಳು ಯಾವುವು ತಿಳಿದುಕೊಳ್ಳೋಣ, (Spiritual News In Kannada) 

 

ಇದನ್ನೂ ಓದಿ- ವರ್ಷ 2024ರಲ್ಲಿ ಮೂರು ರಾಶಿಗಳ ಜನರಿಗೆ ಆಕಸ್ಮಿಕ ಧನಲಾಭ ಕರುಣಿಸಲಿದ್ದಾನೆ ಮಂಗಳ, ವೃತ್ತಿ ಜೀವನದಲ್ಲಿ ಅಪಾರ ಉನ್ನತಿಯ ಯೋಗ!

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /5

Surya Gochar In Vruschik Rashi 2023: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಶೀಘ್ರದಲ್ಲಿಯೇ ಗ್ರಹಗಳ ರಾಜ ಎಂದೇ ಕರೆಯಲಾಗುವ ಸೂರ್ಯ ದೇವ ವೃಶ್ಚಿಕ ರಾಶಿಗೆ ಪ್ರವೇಶಿಸಲಿದ್ದಾನೆ. ಇದರಿಂದ ಮೂರು ರಾಶಿಗಳ ಜನರಿಗೆ ಧನಕುಬೇರ ನಿಧಿ ಪ್ರಾಪ್ತಿಯಾಗಲಿದ್ದು, ಅವರ ಅದೃಷ್ಟ ಸೂರ್ಯನಂತೆ ಹೊಳೆಯಲಿದೆ. (Spiritual News In Kannada) 

2 /5

ಕುಂಭ ರಾಶಿ: ಈ ಅವಧಿಯಲ್ಲಿ ಸೂರ್ಯ ನಿಮ್ಮ ಗೋಚರ ಜಾತಕದ ಕರ್ಮ ಭಾವದಲ್ಲಿ ಸಂಚರಿಸಲಿದ್ದಾನೆ. ಹೀಗಾಗಿ ನಿಮ್ಮ ಜೀವನ ಸಂಪನ್ಮೂಲಗಳಲ್ಲಿ ಅಪಾರ ವೃದ್ಧಿಯಾಗಲಿದೆ. ಕೆಲಸ ಕಾರ್ಯಗಳಲ್ಲಿ ಉನ್ನತಿಯಾಗಲಿದೆ. ನೌಕರಿ ಬದಲಾವಣೆಗಾಗಿ ಕಾಯುತ್ತಿರುವವರಿಗೆ ಈ ಸಮಯ ಉತ್ತಮವಾಗಿದೆ. ಈ ಅವಧಿಯಲ್ಲಿ ನಿಮಗೆ ಉತ್ತಮ ಅವಕಾಶಗಳು ಪ್ರಾಪ್ತಿಯಾಗಲಿವೆ. ವ್ಯಾಪಾರಿಗಳಿಗೆ ಈ ಅವಧಿಯಲ್ಲಿ ಉತ್ತಮ ಆರ್ಡರ್ ಗಳು ಬರಲಿವೆ. ಇದರಿಂದ ನಿಮ್ಮ ಆದಾಯ ಹೆಚ್ಚಾಗಲಿದೆ. ಅಷ್ಟೇ ಅಲ್ಲ ಈ ಅವಧಿಯಲ್ಲಿ ನಿಮ್ಮ ಜೀವನದಲ್ಲಿ ಕೆಲ ಮಹತ್ವದ ಬದಲಾವಣೆಗಳಾಗುವ ಸಾಧ್ಯತೆ ಇದೆ.

3 /5

ಮೀನ ರಾಶಿ: ಸೂರ್ಯನ ಈ ಗೋಚರ ನಿಮ್ಮ ಜಾತಕದ ಭಾಗ್ಯ ಸ್ಥಾನದಲ್ಲಿ ನೆರವೇರುತ್ತಿದೆ. ಹೀಗಾಗಿ ಈ ಅವಧಿಯಲ್ಲಿ ನಿಮಗೆ ನಿಮ್ಮ ಭಾಗ್ಯದ ಸಂಪೂರ್ಣ ಬೆಂಬಲ ಸಿಗಲಿದೆ. ನಿಂತುಹೋದ ಕೆಲಸಗಳು ಮತ್ತೆ ವೇಗ ಪಡೆದುಕೊಳ್ಳಲಿವೆ. ಈ ಅವಧಿಯಲ್ಲಿ ನಿಮ್ಮ ಆರ್ಥಿಕ ಸ್ಥಿತಿ ಸುಧಾರಿಸಲಿದೆ. ಧರ್ಮದ ಕೆಲಸ ಕಾರ್ಯಗಳಲ್ಲಿ ನಿಮ್ಮ ಅಭಿರುಚಿ ಹೆಚ್ಚಾಗಲಿದೆ. ದೇಶ-ವಿದೇಶಗಳ ಯಾತ್ರೆ ಸಂಭವಿಸುವ ಸಾಧ್ಯತೆ ಇದೆ. ಈ ಯಾತ್ರೆಗಳು ನಿಮಗೆ ಶುಭ ಫಲಗಳನ್ನು ನೀಡಲಿವೆ. ವಿದ್ಯಾರ್ಥಿಗಳಿಗೆ ಈ ಸಮಯ ಸಾಕಷ್ಟು ಅನುಕೂಲಕರವಾಗಿದೆ. 

4 /5

ತುಲಾ ರಾಶಿ: ಈ ಅವಧಿಯಲ್ಲಿ ಸೂರ್ಯದೇವ ನಿಮ್ಮ ಗೋಚರ ಜಾತಕದ ಧನಭಾವದಲ್ಲಿ ಸಂಚರಿಸಲಿದ್ದಾನೆ. ಹೀಗಾಗಿ ಈ ಅವಧಿಯಲ್ಲಿ ನಿಮಗೆ ಕಾಲಕಾಲಕ್ಕೆ ಧನಪ್ರಾಪ್ತಿಯಾಗುವ ಎಲ್ಲಾ ಸಂಕೇತಗಳಿವೆ. ಇದಲ್ಲದೆ ಆಕಸ್ಮಿಕ ಧನಾಗಮನದ ಸಂಕೇತಗಳು ಕೂಡ ಇವೆ. ಭೂಮಿ-ವಾಹನ ಹಾಗೂ ಕೌಟುಂಬಿಕ ಸುಖ ಪ್ರಾಪ್ತಿಯಾಗುವ ಸಾಧ್ಯತೆ ಕೂಡ ಇದೆ. ಈ ಅವಧಿಯಲ್ಲಿ ವ್ಯಾಪಾರಿಗಳಿಗೆ ಅವರಿಗೆ ಬರಬೇಕಾದ ಹಣ ಬರಲಿದೆ. ಹೊಸ ಜನರ ಜೊತೆಗೆ ನಿಮ್ಮ ಪರಿಚಯ ಹೆಚ್ಚಾಗಲಿದ್ದು, ಭವಿಷ್ಯದಲ್ಲಿ ಅವು ನಿಮಗೆ ಲಾಭವನ್ನು ತಂದುಕೊಡಲಿವೆ. ನೌಕರ ವರ್ಗದ ಜನರಿಗೆ ಬಡ್ತಿ ಭಾಗ್ಯ, ವೃತ್ತಿ ಜೀವನದಲ್ಲಿ ಉತ್ತಮ ಅವಕಾಶಗಳು ಪ್ರಾಪ್ತಿಯಾಗಲಿವೆ. 

5 /5

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)