Sun Never Sets Here: ಕತ್ತಲನ್ನೇ ಕಾಣದ ವಿಶ್ವದ ಸುಂದರ ಪ್ರವಾಸಿ ತಾಣಗಳಿವು

Sun Never Sets Here - ಸೂರ್ಯೋದಯ (Sun Rise) ಹಾಗೂ ಸೂರ್ಯಾಸ್ತ (Sun Set) ಒಂದು ಸಂಪೂರ್ಣ ನೈಸರ್ಗಿಕ ವಿದ್ಯಮಾನವಾಗಿದೆ. ಹಳೆಯ ಕಾಲದಲ್ಲಿ, ಸೂರ್ಯನ ಉದಯ ಮತ್ತು ಅಸ್ತಕ್ಕೆ ಅನುಗುಣವಾಗಿ ಸಮಯವನ್ನು ಅಳೆಯಲಾಗುತ್ತಿತ್ತು.

Sun Never Sets Here - ಸೂರ್ಯೋದಯ (Sun Rise) ಹಾಗೂ ಸೂರ್ಯಾಸ್ತ (Sun Set) ಒಂದು ಸಂಪೂರ್ಣ ನೈಸರ್ಗಿಕ ವಿದ್ಯಮಾನವಾಗಿದೆ. ಹಳೆಯ ಕಾಲದಲ್ಲಿ, ಸೂರ್ಯನ ಉದಯ ಮತ್ತು ಅಸ್ತಕ್ಕೆ ಅನುಗುಣವಾಗಿ ಸಮಯವನ್ನು ಅಳೆಯಲಾಗುತ್ತಿತ್ತು. ಆದರೆ ಈ ಜಗತ್ತಿನಲ್ಲಿ ಸೂರ್ಯ ಮುಳುಗದ (Sun Never Sets Here) ಕೆಲವು ಸ್ಥಳಗಳಿವೆ ಎಂದು ನಿಮಗೆ ಹೇಳಿದರೆ. ಕೇಳಿ ನಿಮಗೆ ಆಶ್ಚರ್ಯವಾಗಬಹುದು, ಆದರೆ ಇದು ನಿಜ. ಸೂರ್ಯ (Sun Set) ಅಸ್ತವಾಗದೆ ಇರುವ ಈ ದೇಶಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.

 

ಇದನ್ನೂ ಓದಿ-Famous Ganesh Temples: ಗಣಪತಿಯ ಈ 5 ದೇವಸ್ಥಾನಗಳಿಗೆ ಭೇಟಿ ನೀಡುವುದರಿಂದ ನಿಮ್ಮ ಮನಸ್ಸಿನ ಆಸೆ ಈಡೇರುತ್ತೆ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /6

1. ನಾರ್ವೆ (Norway) - ಈ ಸ್ಥಳವನ್ನು ಮಧ್ಯರಾತ್ರಿಯ ದೇಶ ಅಥವಾ Land Of Midnight Sun ಎಂದು ಕರೆಯಲಾಗುತ್ತದೆ. ನಾರ್ವೆ ದೇಶವು ಸೂರ್ಯಾಸ್ತವನ್ನು ಕಾಣುವುದಿಲ್ಲ. ಏಕೆಂದರೆ ಇದು ಆರ್ಕ್ಟಿಕ್ ವೃತ್ತದೊಳಗೆ ಬರುತ್ತದೆ ಮತ್ತು ಯುರೋಪಿನ ಭಾಗವಾಗಿದೆ. ಇಲ್ಲಿ ಮೇ ಮತ್ತು ಜುಲೈ ನಡುವೆ ಸುಮಾರು 76 ದಿನಗಳವರೆಗೆ ಸೂರ್ಯ ಮುಳುಗುವುದಿಲ್ಲ.

2 /6

2. ಐಲ್ಯಾಂಡ್ (Iceland) - ಗ್ರೇಟ್ ಬ್ರಿಟನ್ ನಂತರ ಈ ದೇಶವು ಯುರೋಪಿನ ಅತಿದೊಡ್ಡ ದ್ವೀಪವಾಗಿದೆ. ರಾತ್ರಿಯಲ್ಲೂ ಇಲ್ಲಿ ಸೂರ್ಯ ಬೆಳಗುತ್ತಾನೆ. ಮೇ 10 ರಿಂದ ಜುಲೈ ಅಂತ್ಯದವರೆಗೆ ಇಲ್ಲಿ ಸೂರ್ಯ ಮುಳುಗುವುದಿಲ್ಲ. ಇದನ್ನು ಹೊರತುಪಡಿಸಿ, ಈ ಐಸ್ ಲ್ಯಾಂಡ್ ನಲ್ಲಿ ಸೊಳ್ಳೆಗಳಿಲ್ಲ, ಹೀಗಾಗಿ ಸೊಳ್ಳೆಗಳಿಲ್ಲದ ಸ್ಥಳಕ್ಕೆ ಹೋಗಲು ಬಯಸುವವರಿಗೆ ಇದು ಉತ್ತಮ ಆಯ್ಕೆಯಾಗಿದೆ. ಇಲ್ಲಿ ಗ್ರಿಮ್ಸೆ ದ್ವೀಪ ಮತ್ತು ಅಕುರೆರಿ ನಗರದಲ್ಲಿ ನೀವು ಮಿಡ್ ನೈಟ್ ಸನ್ ಕಾಣಬಹುದು.

3 /6

3. ನುನೌತ್, ಕೆನಡಾ (Nuvavut, Canada) - ಈ ನಗರದ ಜನಸಂಖ್ಯೆಯು ಕೇವಲ 3000 ಮತ್ತು ಇದು ಆರ್ಕ್ಟಿಕ್ ವೃತ್ತಕ್ಕಿಂತ ಎರಡು ಡಿಗ್ರಿಗಳಷ್ಟು ದೂರದಲ್ಲಿದೆ. ದೀರ್ಘಕಾಲದವರೆಗೆ ಹಿಮದಿಂದ ಆವೃತವಾಗಿರುವ ಕೆನಡಾ ವಿಶ್ವದ ಎರಡನೇ ಅತಿದೊಡ್ಡ ದೇಶವಾಗಿದೆ. ಇಲ್ಲಿ ಬೇಸಿಗೆಯಲ್ಲಿ ಸುಮಾರು ಎರಡು ತಿಂಗಳು ಸೂರ್ಯ ಮುಳುಗುವುದಿಲ್ಲ, ಚಳಿಗಾಲದಲ್ಲಿ ಇಲ್ಲಿ ಒಂದು ತಿಂಗಳ ಕಾಲ ಕತ್ತಲಿರುತ್ತದೆ.

4 /6

4. ಕಿರುನಾ, ಸ್ವೀಡನ್ (Kiruna, Sweden) - ಕಿರುನಾ ನಗರವು ಸ್ವೀಡನ್‌ನ ಉತ್ತರದಲ್ಲಿದೆ. ಇದು 19000 ಜನಸಂಖ್ಯೆಯನ್ನು ಹೊಂದಿದೆ. ಈ ನಗರದಲ್ಲಿ ಪ್ರತಿವರ್ಷ ಸುಮಾರು 100 ದಿನಗಳವರೆಗೆ ಸೂರ್ಯಾಸ್ತ ಇರುವುದಿಲ್ಲ. ಪ್ರತಿ ವರ್ಷ ಮೇ ಮತ್ತು ಆಗಸ್ಟ್ ನಡುವೆ ಇಲ್ಲಿ ಸೂರ್ಯ ಮುಳುಗುವುದಿಲ್ಲ. ಈ ಸಮಯದಲ್ಲಿ, ಹೆಚ್ಚಿನ ಸಂಖ್ಯೆಯ ಜನರು ಇಲ್ಲಿಗೆ ಭೇಟಿ ನೀಡಲು ಬರುತ್ತಾರೆ.

5 /6

5. ಬೈರೋ, ಅಲಾಸ್ಕಾ (Barrow, Alaska) - ಇದು ಅಮೆರಿಕಾದ ರಾಜ್ಯವಾಗಿರುವ ಅಲಾಸ್ಕಾನಲ್ಲಿ ಬಾರೋ ಸೀಟ್ ಹಾಗೂ ನಾರ್ತ್ ಸ್ಲೋಪ್ ಬಾರೋ ಅತಿ ದೊಡ್ಡ ನಗರವಾಗಿದೆ. ಇಲ್ಲಿ ಪ್ರತಿವರ್ಷದ ಮೇ ತಿಂಗಳಿನಿಂದ ಜುಲೈ ವರೆಗೆ ಇಲ್ಲಿ ಸೂರ್ಯ ಬೆಳಗುತ್ತಾನೆ. ನವೆಂಬರ್ ತಿಂಗಳಿನಲ್ಲಿ ಇಲ್ಲಿ ಸೂರ್ಯದಯ ಆಗುವುದೇ ಇಲ್ಲ ಮತ್ತು ಒಂದು ತಿಂಗಳು ಇಲ್ಲಿ ಸಂಪೂರ್ಣ ಕತ್ತಲಿರುತ್ತದೆ. ಈ ಸ್ಥಿತಿಯನ್ನು ಪೋಲಾರ್ ನೈಟ್ ಎಂದೂ ಕೂಡ ಕರೆಯಲಾಗುತ್ತದೆ. ಇಲ್ಲಿನ ಪಾಯಿಂಟ್ ಬಾರೋ ಆರ್ಕ್ಟಿಕ್ ವೃತ್ತದ ಮೇಲಿರುವ ಅಮೇರಿಕಾದ ಉತ್ತರ ಬಿಂದುವಾಗಿದೆ.

6 /6

6. ಫಿನ್ಲ್ಯಾಂಡ್ (Finland) - ಈ ಸ್ಥಳವನ್ನು ಸಾವಿರ ಸರೋವರಗಳು ಮತ್ತು ದ್ವೀಪಗಳ ಭೂಮಿ ಎಂದೂ ಕರೆಯುತ್ತಾರೆ. ಈ ಸ್ಥಳವು ತುಂಬಾ ಸುಂದರವಾಗಿರುತ್ತದೆ. ಬೇಸಿಗೆ ಕಾಲದಲ್ಲಿ, ಇಲ್ಲಿನ ಬಹುತೇಕ ನಗರಗಳಲ್ಲಿ ಸುಮಾರು 73 ದಿನಗಳವರೆಗೆ ಸೂರ್ಯ ಮುಳುಗುವುದಿಲ್ಲ. ಇಲ್ಲಿ ಇಗ್ಲೂನಲ್ಲಿ ಉಳಿಯುವುದರೊಂದಿಗೆ, ಉತ್ತರ ದೀಪಗಳ ನೋಟವನ್ನು ಆನಂದಿಸಬಹುದು. ಭೇಟಿ ನೀಡಲು ಇದು ಅತ್ಯುತ್ತಮ ಸ್ಥಳವಾಗಿದೆ. (ಫೋಟೋ ಕೃಪೆ : ಗ್ಲೋಬಲ್ ಟೈಮ್ಸ್)