ಎಚ್ಚರವಾಗಿರಿ! ನಿಮ್ಮ Aadhaar-PAN ನಕಲಿ ಬ್ಯಾಂಕ್ ಸಾಲಗಳಿಗೆ ಬಳಕೆಯಾಗಬಹುದು !

                    

Aadhar Card Alert : ನಿಮ್ಮ ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಅನ್ನು ನಕಲಿ ಬ್ಯಾಂಕ್ ಸಾಲಗಳಿಗಾಗಿ ದುರುಪಯೋಗಪಡಿಸಿಕೊಳ್ಳಬಹುದು. ಆದ್ದರಿಂದ ಜಾಗರೂಕರಾಗಿರಿ. ನಿಮ್ಮ ಎಟಿಎಂನ ಪಿನ್ ಸಂಖ್ಯೆಯಂತೆ ನಿಮ್ಮ ಆಧಾರ್-ಪ್ಯಾನ್ ಕಾರ್ಡ್ ಸಂಖ್ಯೆಯನ್ನು ಸಹ ಯಾರೊಂದಿಗೂ ಹಂಚಿಕೊಳ್ಳಬೇಡಿ.

1 /5

ವೇಗವಾಗಿ ಬೆಳೆಯುತ್ತಿರುವ ಸೈಬರ್ ಅಪರಾಧವನ್ನು (Cyber Crime) ಗಮನಿಸಿದರೆ ನಿಮ್ಮ ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಸಂಖ್ಯೆಯನ್ನು ನಿಮ್ಮ ಎಟಿಎಂ ಪಿನ್‌ನಂತೆ ಸುರಕ್ಷಿತವಾಗಿರಿಸಿಕೊಳ್ಳಬೇಕು. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (Reserve Bank Of India) ಅಧಿಕಾರಿಗಳ ಪ್ರಕಾರ ದೇಶದಲ್ಲಿ ಅನೇಕ ಪ್ರಕರಣಗಳು ಹೊರ ಬಂದಿವೆ. ಇದರಲ್ಲಿ ಸೈಬರ್ ಅಪರಾಧಿಗಳು ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್‌ನೊಂದಿಗೆ ಆನ್‌ಲೈನ್ ವೆಬ್‌ಸೈಟ್ ಸಹಾಯದಿಂದ ನಿಜವಾದ ಕಾರ್ಡ್‌ಹೋಲ್ಡರ್ ಹೆಸರು ಮತ್ತು ಮೊಬೈಲ್ ಸಂಖ್ಯೆ, ವಿಳಾಸವನ್ನು ತೆಗೆದುಕೊಂಡಿದ್ದಾರೆ. ಇದನ್ನು ಬದಲಾಯಿಸಿ ಬ್ಯಾಂಕಿನಿಂದ ಲಕ್ಷ ಲಕ್ಷ ರೂ. ಸಾಲ ತೆಗೆದುಕೊಂಡಿರುವ ಪ್ರಕರಣಗಳು ಬೆಳಕಿಗೆ ಬಂದಿವೆ. ಅದಕ್ಕಾಗಿಯೇ ನೀವು ಸಹ ಜಾಗರೂಕರಾಗಿರಬೇಕು.

2 /5

ನಿಮ್ಮ ಎಟಿಎಂ ಪಿನ್‌ನಂತೆ ನಿಮ್ಮ ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಸಂಖ್ಯೆಯನ್ನು ಎಂದಿಗೂ ಹಂಚಿಕೊಳ್ಳಬೇಡಿ. ಹೀಗೆ ಮಾಡುವುದರಿಂದ ಮುಂದಿನ ದಿನಗಳಲ್ಲಿ ಸಾಲ (Loan) ಸ್ವೀಕರಿಸುವ ಸಂಬಂಧ ವಿವಿಧ ಬ್ಯಾಂಕುಗಳ ಹೆಸರಿನಲ್ಲಿ ಫೋನ್‌ಗಳು ಬರಲಾರಂಭಿಸುತ್ತವೆ.  ಅಧಿಕಾರಿಗಳ ಪ್ರಕಾರ ವಂಚಕನು ಬ್ಯಾಂಕಿನ ಹೆಸರಿನಲ್ಲಿ ಕರೆ ಮಾಡಿ ಸಾಲವನ್ನು ಮಂಜೂರು ಮಾಡುವ ಬಗ್ಗೆ ಜನರಿಗೆ ತಿಳಿಸಿ ಖಾತೆ, ಆಧಾರ್ ಕಾರ್ಡ್ ಮತ್ತು ಪ್ಯಾನ್ ಸಂಖ್ಯೆಯನ್ನು ಕೇಳುತ್ತಾನೆ ಎಂದು ಹೇಳಲಾಗಿದೆ.

3 /5

ಆನ್‌ಲೈನ್‌ನಲ್ಲಿ ಅಥವಾ ಕರೆಗಳ ಮೂಲಕ ಯಾವುದೇ ಮಾಹಿತಿಯನ್ನು ಫೋನ್‌ನಲ್ಲಿ ಹಂಚಿಕೊಳ್ಳಬೇಡಿ. ಬ್ಯಾಂಕುಗಳ ಹೊರತಾಗಿ, ವಂಚಕರು ಸಹ ಈ ಪ್ರಕ್ರಿಯೆಯನ್ನು ಅನುಸರಿಸುತ್ತಾರೆ ಮತ್ತು ಎಲ್ಲಾ ಮಾಹಿತಿಯನ್ನು ಸಂಗ್ರಹಿಸಿ ಬಳಸುತ್ತಾರೆ. ಹಾಗಾಗಿ ಮೊಬೈಲ್‌ನಲ್ಲಿನ ಸಂದೇಶಗಳಲ್ಲಿ ಬರುವ ಲಿಂಕ್ ಗಳನ್ನು ತೆರೆಯಬಾರದು ಮತ್ತು ಯಾವುದೇ ಪ್ರತಿಕ್ರಿಯೆಯನ್ನು ನೀಡಬಾರದು. ಮತ್ತೆ ಮತ್ತೆ ಕರೆ ಬಂದರೆ ಅದನ್ನು ಸ್ಥಳೀಯ ಪೊಲೀಸ್ ಠಾಣೆ ಮತ್ತು ಸೈಬರ್ ಸೆಲ್‌ಗೆ ವರದಿ ಮಾಡಬೇಕು. ಇದನ್ನೂ ಓದಿ - Big Aadhaar card update! ನಿಮ್ಮ ಮಾಹಿತಿಯನ್ನು ಆನ್ ಲೈನ್ ನಲ್ಲಿಯೇ ಬದಲಾಯಿಸಬಹುದು...!

4 /5

ಒಬ್ಬರ ಅರಿವಿಲ್ಲದೆ ಅವರ ಐಡಿಯಲ್ಲಿ ಲಕ್ಷ ರೂಪಾಯಿಗಳ ಸಾಲವನ್ನು ಸ್ವೀಕರಿಸುವ ಮೂಲಕ, ಅದನ್ನು ನಿಮ್ಮ ಖಾತೆಗೆ ವರ್ಗಾಯಿಸುವ ಮೂಲಕ ಹಣವನ್ನು ಹಿಂಪಡೆಯಲಾಗುತ್ತದೆ. ವಂಚಕರ ಕಾರಣದಿಂದಾಗಿ ಸಿಬಿಲ್ ದಾಖಲೆ ಹದಗೆಡುತ್ತದೆ ಮತ್ತು ಯಾವುದೇ ಬ್ಯಾಂಕ್ ಮತ್ತೆ ಸಾಲವನ್ನು ನೀಡುವುದಿಲ್ಲ. ಇದನ್ನೂ ಓದಿ - mAadhaar Appನಲ್ಲಿ ಹೆಚ್ಚಿನ ಸೇವೆ ಪಡೆಯುವುದು ಹೇಗೆ ಎಂದು ತಿಳಿಯಿರಿ

5 /5

ನಕಲಿ ಆಧಾರ್ ಕಾರ್ಡ್‌ಗಳು ಮತ್ತು ಪ್ಯಾನ್ ಕಾರ್ಡ್‌ಗಳನ್ನು ರಚಿಸಲು ಮೊಬೈಲ್ ಅಪ್ಲಿಕೇಶನ್‌ಗಳು ಮತ್ತು ಫೋಟೋಶಾಪ್‌ನಂತಹ ಸಾಫ್ಟ್‌ವೇರ್ ಅನ್ನು ಬಳಸಲಾಗುತ್ತದೆ. ಹಣಕಾಸು ಕಂಪನಿಗಳು ಮತ್ತು ಖಾಸಗಿ ಬ್ಯಾಂಕುಗಳಲ್ಲಿ ಸಾಲ ನೀಡಲು ಆಧಾರ್ ಕಾರ್ಡ್ (Aadhaar Card) ಮತ್ತು ಪ್ಯಾನ್ ಕಾರ್ಡ್  ನಂತಹ ದಾಖಲೆಗಳನ್ನು ಕೇಳುತ್ತವೆ. ಅದರಿಂದ ನಕಲಿ  ಕಾರ್ಡ್‌ಗಳನ್ನು ಸಹ ತಯಾರಿಸಲಾಗುತ್ತಿದೆ. ಅದಕ್ಕಾಗಿಯೇ ಬ್ಯಾಂಕುಗಳು ಮತ್ತು ಇತರ ಹಣಕಾಸು ಕಂಪನಿಗಳು ಯಾವುದೇ ಸಾಲವನ್ನು ಅನುಮೋದಿಸುವ ಮೊದಲು ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್‌ನ ತಾಂತ್ರಿಕ ಸಿಂಧುತ್ವವನ್ನು ಪರಿಶೀಲಿಸುತ್ತವೆ. ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ... Android Link - https://bit.ly/3hDyh4G Apple Link - https://apple.co/3loQYe  ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.