Athiya Shetty-KL Rahul Wedding: ಜ.23ಕ್ಕೆ ಅಥಿಯಾ ಶೆಟ್ಟಿ ಜೊತೆಗೆ ಸಪ್ತಪದಿ ತುಳಿಯಲಿರುವ ಕೆ.ಎಲ್.ರಾಹುಲ್?

Athiya Shetty- KL Rahul Wedding: ಜ.23ಕ್ಕೆ ಸ್ಟಾರ್ ಕ್ರಿಕೆಟರ್ ಕೆ.ಎಲ್.ರಾಹುಲ್ ಮತ್ತು ಬಾಲಿವುಡ್ ಖ್ಯಾತ ನಟ ಸುನೀಲ್ ಶೆಟ್ಟಿ ಪುತ್ರಿ ಅಥಿಯಾ ಶೆಟ್ಟಿ ಅದ್ದೂರಿಯಾಗಿ ಮದುವೆಯಾಗಲಿದ್ದಾರೆಂದು ವರದಿಯಾಗಿದೆ.

Athiya Shetty- KL Rahul Wedding: ಟೀಂ ಇಂಡಿಯಾದ ಸ್ಟಾರ್ ಆಟಗಾರ, ಕನ್ನಡಿಗ ಕೆ.ಎಲ್.ರಾಹುಲ್ ಹಾಗೂ ಬಾಲಿವುಡ್ ಖ್ಯಾತ ನಟ ಸುನೀಲ್ ಶೆಟ್ಟಿ ಪುತ್ರಿ, ನಟಿ ಅಥಿಯಾ ಶೆಟ್ಟಿ ಕಳೆದ ಹಲವಾರು ದಿನಗಳಿಂದ ಡೇಟಿಂಗ್ ನಡೆಸುತ್ತಿದ್ದರು. ಇದೀಗ ಈ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗಿದೆ. ಇದೇ ತಿಂಗಳು ಇವರಿಬ್ಬರು ಸಪ್ತಪದಿ ತುಳಿಯಲಿದ್ದಾರೆ ಎನ್ನಲಾಗ್ತಿದೆ. ಮದುವೆಗೂ ಮುನ್ನವೇ ಮುಂಬೈನಲ್ಲಿ ಮನೆ ಕೂಡ ಖರೀದಿಸಿದ್ದಾರೆಂದು ವರದಿಯಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಹೊಸ ವರ್ಷದ ಆರಂಭದಲ್ಲೇ ಹೊಸ ಜೀವನಕ್ಕೆ ಕಾಲಿಡಲು ಕೆ.ಎಲ್ ರಾಹುಲ್ ಹಾಗೂ ಅಥಿಯಾ ಶೆಟ್ಟಿ ಸಜ್ಜಾಗಿದ್ದಾರೆ. ವರದಿಗಳ ಪ್ರಕಾರ ಈ ಜೋಡಿ ಜ.23ರಂದು ಅದ್ಧೂರಿಯಾಗಿ ಮದುವೆಯಾಗಲಿದ್ದಾರೆಂದು ಹೇಳಲಾಗಿದೆ.

2 /5

ಸ್ಟಾರ್ ಕ್ರಿಕೆಟರ್ ಕೆ.ಎಲ್.ರಾಹುಲ್ ಮತ್ತು ನಟಿ ಅಥಿಯಾ ಶೆಟ್ಟಿ ಹಲವಾರು ವರ್ಷಗಳಿಂದ ಪರಸ್ಪರ ಡೇಟಿಂಗ್ ನಡೆಸುತ್ತಿದ್ದರು. ಇವರಿಬ್ಬರ ಮದುವೆ ಬಗ್ಗೆ ನಾನಾ ವದಂತಿಗಳು ಹಬ್ಬಿದ್ದವು. ಆದರೆ ತಮ್ಮ ಸಂಬಂಧದ ಯಾವುದೇ ಗುಟ್ಟು ಬಿಟ್ಟುಕೊಟ್ಟಿರಲಿಲ್ಲ.

3 /5

ಬಾಲಿವುಡ್ ನಟ ಸುನೀಲ್ ಶೆಟ್ಟಿಯವರಿಗೆ ಸೇರಿದ ಭವ್ಯ ಬಂಗಲೆಯಲ್ಲಿ ಕೆ.ಎಲ್.ರಾಹುಲ್ ಹಾಗೂ ಅಥಿಯಾ ಶೆಟ್ಟಿ ಅದ್ಧೂರಿಯಾಗಿ ಸಪ್ತಪದಿ ತುಳಿಯಲು ರೆಡಿಯಾಗಿದ್ದಾರೆಂದು ವರದಿಯಾಗಿದೆ.

4 /5

ಮಹಾರಾಷ್ಟ್ರದ ಪಶ್ಚಿಮ ಘಟ್ಟದ ಪರ್ವತಗಳಲ್ಲಿರುವ ಒಂದಾಗಿರುವ ಗಿರಿಧಾಮ ಖಂಡಾಲಾದಲ್ಲ ಸುನೀಲ್ ಶೆಟ್ಟಿಯವರ ಭವ್ಯ ಬಂಗಲೆ ಇದೆ. ಇಲ್ಲಿಯೇ ಅಥಿಯಾ ಶೆಟ್ಟಿ ಮತ್ತು ಕೆ.ಎಲ್.ರಾಹುಲ್ ಮದುವೆ ಶಾಸ್ತ್ರಗಳು ನಡೆಯಲಿದೆ. ಖಂಡಾಲಾದಲ್ಲಿ 3 ದಿನ ಮದುವೆ ಸಂಭ್ರಮದಿಂದ ನಡೆಯಲಿದೆಯಂತೆ.

5 /5

ಜನವರಿ 23ರಂದು ಅಥಿಯಾ ಶೆಟ್ಟಿ ಜೊತೆಗೆ ಸಪ್ತಪದಿ ತುಳಿಯಲು ಸಜ್ಜಾಗಿರುವ ಕ್ರಿಕೆಟಿಗ ಕೆ.ಎಲ್.ರಾಹುಲ್ ನಾಳೆಯಿಂದ ನ್ಯೂಜಿಲ್ಯಾಂಡ್ ವಿರುದ್ಧ ನಡೆಯಲಿರುವ 3 ದಿನಗಳ ಏಕದಿನ ಸರಣಿ ಮತ್ತು ಟಿ-20 ಸರಣಿಯಲ್ಲಿ ಆಡುತ್ತಿಲ್ಲ.