ಶುಕ್ರ-ಶನಿ ಕೃಪೆಯಿಂದ ಸಮಸಪ್ತಕ ರಾಜಯೋಗ, 3 ರಾಶಿಗಳ ಭಾಗ್ಯ ಸೂರ್ಯನಂತೆ ಹೊಳೆಯಲಿದೆ, ಅಪಾರ ಧನಪ್ರಾಪ್ತಿ ಯೋಗ!

Spiritual News In Kannada: ವೈದಿಕ ಪಂಚಾಂಗದ ಪ್ರಕಾರ ಶುಕ್ರ-ಶನಿಯ ಕೃಪೆಯಿಂದ ಸಮಸಪ್ತಕ ರಾಜಯೋಗ ನಿರ್ಮಾಣಗೊಂಡಿದ್ದು. ಈ ಯೋಗ ಎಲ್ಲಾ ದ್ವಾದಶ ರಾಶಿಗಳ ಮೇಲೆ ಪ್ರಭಾವ ಬೀರಲಿದೆ. ಅದರಲ್ಲಿಯೂ ವಿಶೇಷವಾಗಿ ಮೂರು ರಾಶಿಗಳ ಜಾತಕದವರಿಗೆ ಇದರಿಂದ ಅಪಾರ ಧನಪ್ರಾಪ್ತಿಯಾಗಲಿದ್ದು ಅವರ ಜೀವನದಲ್ಲಿ ಒಳ್ಳೆಯ ದಿನಗಳು ಆರಂಭಗೊಳ್ಳಲಿವೆ. ಬನ್ನಿ ಆ ಅದೃಷ್ಟವಂತ ರಾಶಿಗಳು ಯಾವುವು ತಿಳಿದುಕೊಳ್ಳೋಣ, 
 

Shukra-Shani Samsaptak Raj Yog: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಗಳು ಕಾಲ-ಕಾಲಕ್ಕೆ ರಾಶಿಗಳನ್ನು ಪರಿವರ್ತಿಸುವ ಮೂಲಕ ಶುಭ ಹಾಗೂ ಅಶುಭ ಯೋಗಗಳನ್ನು ರೂಪಿಸುತ್ತವೆ. ಅವುಗಳ ಪ್ರಭಾವ ದೇಶ-ವಿದೇಶ ಹಾಗೂ ಮಾನವ ಜೀವನದ ಮೇಲೆ ಕಂಡುಬರುತ್ತದೆ. ಪ್ರಸ್ತುತ ಶುಕ್ರ-ಶನಿಯ ಕೃಪೆಯಿಂದ ಸಮಸಪ್ತಕ ರಾಜಯೋಗ ನಿರ್ಮಾಣಗೊಂಡಿದ್ದೆ. ಹಾಗೆ ನೋಡಿದರೆ, ಶನಿ-ಶುಕ್ರರ ಮಧ್ಯೆ ಮೈತ್ರಿ ಭಾವದ ಸಂಬಂಧವಿದೆ. ಹೀಗಾಗಿ ಇದು ಎಲ್ಲಾ ದ್ವಾದಶ ರಾಶಿಗಳ ಮೇಲೆ ಪ್ರಭಾವ ಬೀರುತ್ತದೆ. ಅದರಲ್ಲಿಯೂ ವಿಶೇಷವಾಗಿ 3 ರಾಶಿಗಳ ಜನರಿಗೆ ಇದು ಆಕಸ್ಮಿಕ ಧನಲಾಭ ಮತ್ತು ಭಾಗ್ಯೋದಯ ಯೋಗ ದಯಪಾಲಿಸಲಿದೆ. ಆ ರಾಶಿಗಳು ಯಾವುವು ತಿಳಿದುಕೊಳ್ಳೋಣ, 

 

ಇದನ್ನೂ ಓದಿ-12 ವರ್ಷಗಳ ಬಳಿಕ ಸಿಂಹ ರಾಶಿಯಲ್ಲಿ ಚತುರ್ಗ್ರಹಿ ಯೋಗ, ಈ ಜನರ ತಿಜೋರಿ ಹಣದಿಂದ ತುಂಬಿ ತುಳುಕಲಿದೆ!

 

ಇದನ್ನೂ ನೋಡಿ-

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

Spiritual News In Kannada: ವೈದಿಕ ಪಂಚಾಂಗದ ಪ್ರಕಾರ ಶುಕ್ರ-ಶನಿಯ ಕೃಪೆಯಿಂದ ಸಮಸಪ್ತಕ ರಾಜಯೋಗ ನಿರ್ಮಾಣಗೊಂಡಿದ್ದು. ಈ ಯೋಗ ಎಲ್ಲಾ ದ್ವಾದಶ ರಾಶಿಗಳ ಮೇಲೆ ಪ್ರಭಾವ ಬೀರಲಿದೆ. ಅದರಲ್ಲಿಯೂ ವಿಶೇಷವಾಗಿ ಮೂರು ರಾಶಿಗಳ ಜಾತಕದವರಿಗೆ ಇದರಿಂದ ಅಪಾರ ಧನಪ್ರಾಪ್ತಿಯಾಗಲಿದ್ದು ಅವರ ಜೀವನದಲ್ಲಿ ಒಳ್ಳೆಯ ದಿನಗಳು ಆರಂಭಗೊಳ್ಳಲಿವೆ. ಬನ್ನಿ ಆ ಅದೃಷ್ಟವಂತ ರಾಶಿಗಳು ಯಾವುವು ತಿಳಿದುಕೊಳ್ಳೋಣ,   

2 /5

ಮೇಷ ರಾಶಿ: ಶನಿ-ಶುಕ್ರರ ಕೃಪೆಯಿಂದ ನಿರ್ಮಾಣಗೊಳ್ಳುತ್ತಿರುವ ಸಮಸಪ್ತಕ ರಾಜಯೋಗ ಮೇಷ ರಾಶಿಯ ಜಾತಕದವರ ಪಾಲಿಗೆ ಅತ್ಯಂತ ಮಂಗಳಕರ ಸಾಬೀತಾಗಲಿದೆ. ಜೋತಿಷ್ಯ ಶಾಸ್ತ್ರದಲ್ಲಿ ಈ ಯೋಗವನ್ನು ಅತ್ಯಂತ ಮಹತ್ವಪೂರ್ಣ ಯೋಗ ಎಂದು ಭಾವಿಸಲಾಗಿದೆ. ಹೀಗಾಗಿ ಈ ಅವಧಿಯಲ್ಲಿ ನಿಮ್ಮ ಆದಾಯದಲ್ಲಿ ಅಪಾರ ಹೆಚ್ಚಳ ಸಂಭವಿಸುವ ಸಾಧ್ಯತೆ ಇದೆ. ಇದಲ್ಲದೆ ಆದಾಯದ ಹೊಸ ಮಾಧ್ಯಮಗಳು ಸೃಷ್ಟಿಯಾಗಲಿವೆ. ಈ ಅವಧಿಯಲ್ಲಿ ನಿಮಗೆ ನಿಮ್ಮ ಹಳೆ ಹೂಡಿಕೆಗಳಿಂದ ಲಾಭ ಉಂಟಾಗುವ ಎಲ್ಲಾ ಸಾಧ್ಯತೆಗಳಿವೆ. ಇನ್ನೊಂದೆಡೆ ಕಾರ್ಯಕ್ಷೇತ್ರದಲ್ಲಿಯೂ ಕೂಡ ನಿಮಗೆ ಅಪಾರ ಉನ್ನತಿಯ ಯೋಗ ನಿರ್ಮಾಣಗೊಂಡಿದೆ. ಯಾವುದೇ ಒಂದು ವ್ಯವಸಾಯದಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಂಡಿದ್ದರೆ, ಅದರಲ್ಲಿ ನಿಮಗೆ ಸಾಕಷ್ಟು ಆರ್ಥಿಕ ಲಾಭಸಿಗಲಿದೆ. ಮಕ್ಕಳ ಕಡೆಯಿಂದ ನಿಮಗೆ ಶುಭ ಸಮಾಚಾರ ಪ್ರಾಪ್ತಿಯಾಗುವ ಸಾಧ್ಯತೆ ಇದೆ. ಆಕಸ್ಮಿಕ ಧನಲಾಭದ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ಸ್ಟಾಕ್ ಮಾರ್ಕೆಟ್, ಲಾಟರಿ ವ್ಯವಹಾರಗಳಲ್ಲಿ ಲಾಭ ನಿಮ್ಮದಾಗಲಿದೆ.   

3 /5

ವೃಷಭ ರಾಶಿ: ವೃಷಭ ರಾಶಿಯ ಜನರ ವೃತ್ತಿ ಜೀವನ ಹಾಗೂ ವ್ಯಾಪಾರದ ದೃಷ್ಟಿಯಿಂದ ಸಮಸಪ್ತಕ ರಾಜಯೋಗ ಅತ್ಯಂತ ಮಂಗಳಕರವಾಗಿದೆ. ಪ್ರಯತ್ನಗಳನ್ನು ಮುಂದುವರೆಸಿ. ನೌಕರವರ್ಗದ ಜನರಿಗೆ ಈ ಅವಧಿಯಲ್ಲಿ ಪ್ರಮೋಷನ್-ಇಂಕ್ರೀಮೆಂಟ್ ಭಾಗ್ಯ ಪ್ರಾಪ್ತಿಯಾಗಲಿದೆ. ಕಾರ್ಯಸ್ಥಳದಲ್ಲಿ ಅಧಿಕಾರಿಗಳು ನಿಮ್ಮಿಂದ ಪ್ರಭಾವಿತರಾಗಲಿದ್ದಾರೆ, ಪರಿಣಾಮವಶಾತ್ ನಿಮಗೆ ದೊಡ್ಡ ಜವಾಬ್ದಾರಿ ಸಿಗುವ ಸಾಧ್ಯತೆ ಇದೆ. ವ್ಯಾಪಾರಿಗಳಿಗೆ ಈ ಅವಧಿಯಲ್ಲಿ ವ್ಯಾಪಾರದಲ್ಲಿ ಉತ್ತಮ ಧನಲಾಭ ಉಂಟಾಗುವ ಸಾಧ್ಯತೆ ಇದೆ.   

4 /5

ಮಕರ ರಾಶಿ: ಮಕರ ರಾಶಿಯ ಜಾತಕದವರ ಪಾಲಿಗೆ ಸಮಸಪ್ತಕ ಯೋಗ ಅತ್ಯಂತ ಸಕಾರಾತ್ಮಕ ಸಾಬೀತಾಗಲಿದೆ. ಆಕಸ್ಮಿಕ ಧನಲಾಭದಿಂದ ನಿಮ್ಮ ಆರ್ಥಿಕ ಸ್ಥಿತಿ ಸುಧಾರಣೆಯಾಗಲಿದೆ. ನೌಕರಿ ಬದಲಾಯಿಸಲು ಬಯಸುವವರಿಗೆ ಅದರಲ್ಲಿ ನಿಮಗೆ ಯಶಸ್ಸು ಪ್ರಾಪ್ತಿಯಾಗಲಿದೆ. ಈ ಅವಧಿಯಲ್ಲಿ ನಿಮ್ಮ ಮಾತಿನಲ್ಲಿ ಪ್ರಭಾವ ಕಂಡುಬರಲಿದ್ದು. ಜನರು ನಿಮ್ಮತ್ತ ಆಕರ್ಷಿತರಾಗಲಿದ್ದಾರೆ. ಇನ್ನೊಂದೆಡೆ ನಿಮ್ಮ ಭೌತಿಕ ಸುಖದಲ್ಲಿಯೂ ಕೂಡ ವೃದ್ಧಿಯಾಗುವ ಸಾಧ್ಯತೆ ಇದೆ. ವಿವಾಹಿತರ ವೈವಾಹಿಕ ಜೀವನ ಉತ್ತಮವಾಗಿರಲಿದೆ.  

5 /5

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)