ಕಪಿಲ್ ಶರ್ಮಾ, ಜಾನಿ ಲಿವರ್ ಅಲ್ಲ.. ಭಾರತದ ಶ್ರೀಮಂತ ಕಾಮಿಡಿಯನ್‌ ದಕ್ಷಿಣ ಭಾರತದ ಈ ಹಾಸ್ಯ ನಟ

Indiaʼs Richest Comedian : ಹಾಸ್ಯನಟರು ಮನರಂಜನಾ ಉದ್ಯಮದಲ್ಲಿ ನಾಐಕ ನಟರಂತೆ ಹೆಚ್ಚು ಸಂಭಾವನೆ ಪಡೆಯುವುದಿಲ್ಲ ಮತ್ತು ಅವರ ಆದಾಯ ಕೂಡ ಕಡಿಮೆ ಎಂಬ ಸಾಮಾನ್ಯ ನಂಬಿಕೆಯಿದೆ. ಆದರೆ ಕೆಲವು ಭಾರತೀಯ ಹಾಸ್ಯನಟರು ಈ ಕಲ್ಪನೆಯನ್ನು ಸುಳ್ಳು ಮಾಡಿದ್ದಾರೆ. 
 

Indiaʼs Richest Comedian : ಭಾರತದ ಶ್ರೀಮಂತ ಹಾಸ್ಯನಟ ಎಂಬ ಬಿರುದು ಕಪಿಲ್ ಶರ್ಮಾ, ಜಾನಿ ಲಿವರ್, ಪರೇಶ್ ರಾವಲ್ ಅಥವಾ ರಾಜ್ಪಾಲ್ ಯಾದವ್ ಅವರಂತಹ ಮುಖ್ಯವಾಹಿನಿಯ ಹೆಸರುಗಳಿಗೆ ಬದಲಾಗಿ ಈ ನಟನ ಮುಡಿಗೇರಿದೆ. ಸರಿಸುಮಾರು 490 ಕೋಟಿ ರೂಪಾಯಿ ಆಸ್ತಿ ಹೊಂದಿರುವ ಈ ಹಾಸ್ಯ ನಟನ ಪ್ರತಿ ತಿಂಗಳ ಆದಾಯ 2 ಕೋಟಿ ರೂಪಾಯಿ ಎನ್ನಲಾಗಿದೆ. ದಕ್ಷಿಣ ಭಾರತೀಯ ಚಿತ್ರರಂಗದ ಹಾಸ್ಯನಟ ಇದೀಗ ಭಾರತದ ಅತಿ ಶ್ರೀಮಂತ ಕಾಮಿಡಿಯನ್‌ ಆಗಿದ್ದಾರೆ. 

1 /6

ಬ್ರಹ್ಮಾನಂದಂ ತೆರೆಮೇಲೆ ಬಂದರೆ.. ಅಭಿಮಾನಿಗಳ ಹರ್ಷೋದ್ಗಾರ ಮುಗಿಲು ಮುಟ್ಟಿವಂತಿರುತ್ತದೆ. ಹೀರೋಗಳಷ್ಟೇ ಕ್ರೇಜ್ ಹೊಂದಿದ್ದಾರೆ ತೆಲುಗು ಹಾಸ್ಯನಟ ಬ್ರಹ್ಮಾನಂದಂ.    

2 /6

ಬ್ರಹ್ಮಾನಂದಂ ಪ್ರಸಿದ್ಧ ತೆಲುಗು ಹಾಸ್ಯನಟ. ಅತಿ ಹೆಚ್ಚು ಸ್ಕ್ರೀನ್ ಕ್ರೆಡಿಟ್‌ಗಳಿಗಾಗಿ ಅವರು ಗಿನ್ನೆಸ್ ವಿಶ್ವ ದಾಖಲೆಯನ್ನು ಸಹ ನಿರ್ಮಿಸಿದ್ದಾರೆ.   

3 /6

67 ನೇ ವಯಸ್ಸಿಗೆ 1,000 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ. 2009 ರಲ್ಲಿ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ ಪಡೆದರು.   

4 /6

ವರದಿಗಳ ಪ್ರಕಾರ, ಬ್ರಹ್ಮಾನಂದಂ ಅವರ ನಿವ್ವಳ ಆಸ್ತಿ ಸುಮಾರು 490 ಕೋಟಿ ಎಂದು ಅಂದಾಜಿಸಲಾಗಿದೆ. ಮಾಸಿಕ ವೇತನವು 2 ಕೋಟಿ ಮೀರಿದೆ.   

5 /6

ಕಪಿಲ್ ಶರ್ಮಾ ಮತ್ತು ಭಾರ್ತಿ ಸಿಂಗ್ ಅವರಂತಹ ಜನಪ್ರಿಯ ಹೆಸರುಗಳನ್ನು ಹಿಂದಿಕ್ಕಿ ಬ್ರಹ್ಮಾನಂದಂ ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಕಾಮಿಕ್ ನಟರಲ್ಲಿ ಒಬ್ಬರೆಂದು ಮನ್ನಣೆ ಪಡೆದಿದ್ದಾರೆ.   

6 /6

ಬ್ರಹ್ಮಾನಂದಂ ಅವರು ಐಷಾರಾಮಿ ಕಾರುಗಳಾದ ಆಡಿ ಆರ್8, ಆಡಿ ಕ್ಯೂ7, ಮರ್ಸಿಡಿಸ್ ಬೆಂಜ್ ಕಾರುಗಳನ್ನು ಹೊಂದಿದ್ದಾರೆ. ಕೋಟಿ ಮೌಲ್ಯದ ಕೃಷಿ ಭೂಮಿ ಹೊಂದಿದ್ದಾರೆ. ಹೈದರಾಬಾದ್‌ನ ಪ್ರತಿಷ್ಠಿತ ಜುಬಿಲಿ ಹಿಲ್ಸ್ ಪ್ರದೇಶದಲ್ಲಿ ಬಂಗಲೆಯನ್ನು ಹೊಂದಿದ್ದಾರೆ.