ಸೋನಿಯಾ ಗಾಂಧಿ ಎಂಬುದು ಗಾಂಧಿ ಮತ್ತು ನೆಹರೂ ಕುಟುಂಬದ ಪರಂಪರೆಯನ್ನು ಹೊಂದಿರುವ ದೇಶದ ಅತ್ಯಂತ ಹಳೆಯ ರಾಜಕೀಯ ಪಕ್ಷವನ್ನು ದೀರ್ಘಕಾಲದವರೆಗೆ ಹಿಡಿದಿರುವ ಹೆಸರು.
ಸೋನಿಯಾ ಗಾಂಧಿ ಡಿಸೆಂಬರ್ 9, 1946 ರಂದು ಇಟಲಿಯ ವಿಸೆಂಜಾದಿಂದ ಸ್ವಲ್ಪ ದೂರದಲ್ಲಿರುವ ಲೂಯಿಸಿಯಾನ ಎಂಬ ಸಣ್ಣ ಹಳ್ಳಿಯಲ್ಲಿ ಜನಿಸಿದರು.
ಕಾಂಗ್ರೆಸ್ ಪಕ್ಷದ ಹಂಗಾಮಿ ಅಧ್ಯಕ್ಷರಾಗಿರುವ ಸೋನಿಯಾ ಗಾಂಧಿ, ಪ್ರಸ್ತುತ ರಾಯ್ ಬರೇಲಿಯ ಸಂಸದರಾಗಿದ್ದಾರೆ.
ಇಟಲಿಯಲ್ಲಿ ಶಾಲಾ ಶಿಕ್ಷಣವನ್ನು ಮುಗಿಸಿದ ನಂತರ, ಹೆಚ್ಚಿನ ಅಧ್ಯಯನಕ್ಕಾಗಿ ಸೋನಿಯಾ ಗಾಂಧಿ 1964 ರಲ್ಲಿ ಇಂಗ್ಲೆಂಡ್ಗೆ ಹೋದರು.
ಸೋನಿಯಾ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ತಮ್ಮ ಕಾಲೇಜು ವಿದ್ಯಾಭ್ಯಾಸವನ್ನು ಮುಗಿಸಿದರು. ಈ ಸಮಯದಲ್ಲಿಯೇ ಸೋನಿಯಾ ಮತ್ತು ರಾಜೀವ್ ಗಾಂಧಿ ಭೇಟಿಯಾದರು.
ಸೋನಿಯಾ ಮತ್ತು ರಾಜೀವ್ ಗಾಂಧಿ ಅವರ ಪ್ರೇಮಕಥೆಯು ಚಲನಚಿತ್ರ ಪ್ರೇಮಕಥೆಗಿಂತ ಕಡಿಮೆಯಿಲ್ಲ. ರಾಜೀವ್ ಮೊದಲ ಬಾರಿಗೆ ರೆಸ್ಟೋರೆಂಟ್ನಲ್ಲಿ ಸೋನಿಯಾರನ್ನು ನೋಡಿದ್ದರೆಂದು ಹೇಳಲಾಗುತ್ತದೆ. ಮೊದಲ ನೋಟದಲ್ಲೇ ರಾಜೀವ್ ತನ್ನ ಹೃದಯವನ್ನು ಸೋನಿಯಾರಿಗೆ ಕೊಟ್ಟರು ಎಂದು ಹೇಳಲಾಗುತ್ತದೆ.
ಸೋನಿಯಾ ಮತ್ತು ರಾಜೀವ್ ಗಾಂಧಿ1968 ರಲ್ಲಿ ವಿವಾಹವಾದರು. ಮದುವೆಯ ನಂತರ, ಸೋನಿಯಾ ಭಾರತಕ್ಕೆ ಬಂದು 1983 ರಲ್ಲಿ ಭಾರತದ ಪೌರತ್ವವನ್ನು ಸ್ವೀಕರಿಸಿದರು.
ಮೊದಲು ಸೋನಿಯಾ ಗಾಂಧಿ ಅವರಿಗೆ ಹಿಂದಿ ಬರುತ್ತಿರಲಿಲ್ಲ. ಆದರೆ ಅವರ ಅತ್ತೆ ಇಂದಿರಾ ಗಾಂಧಿಯವರು ಯಾವಾಗಲೂ ಸೋನಿಯಾ ಅವರಿಗೆ ಹಿಂದಿಯಲ್ಲಿ ಮಾತನಾಡುವಂತೆ ಪ್ರೇರೇಪಿಸುತ್ತಿದ್ದರು, ಈ ಕಾರಣದಿಂದಾಗಿ ಸೋನಿಯಾ ಹಿಂದಿ ಮಾತನಾಡಲು ಕಲಿತರು.
ರಾಜೀವ್ ಗಾಂಧಿ ರಾಜಕೀಯ ಪ್ರವೇಶಿಸಬೇಕೆಂದು ಸೋನಿಯಾ ಎಂದಿಗೂ ಬಯಸಿರಲಿಲ್ಲ, ಆದರೆ ಇಂದಿರಾ ಗಾಂಧಿಯವರ ಹಠಾತ್ ನಿಧನದ ನಂತರ, ರಾಜೀವ್ ಗಾಂಧಿ ರಾಜಕೀಯಕ್ಕೆ ಬರಬೇಕಾಯಿತು. ಸೋನಿಯಾ ಗಾಂಧಿ ಅವರಿಗೂ ಇಂತಹದ್ದೇ ಪರಿಸ್ಥಿತಿ ಎದುರಾಗಿತ್ತು. ರಾಜೀವ್ ಗಾಂಧಿಯವರ ಹಠಾತ್ ಮರಣದ ನಂತರ ಸೋನಿಯಾ ರಾಜಕೀಯ ಪ್ರವೇಶಿಸಬೇಕಾಯಿತು.
ರಾಜೀವ್ ಗಾಂಧಿಯವರನ್ನು ಕಳೆದುಕೊಂಡ ನಂತರ, ಸೋನಿಯಾ ರಾಜಕೀಯವನ್ನು ದ್ವೇಷಿಸಲು ಪ್ರಾರಂಭಿಸಿದ್ದರು. ಎಂದಿಗೂ ತಮ್ಮ ಮಕ್ಕಳನ್ನೂ ಈ ರಾಜಕೀಯಕ್ಕೆ ಕರೆತರುವುದಿಲ್ಲ ಎಂದು ಹೇಳುವಷ್ಟು ಅವರು ರಾಜಕೀಯದಿಂದ ದೂರ ಉಳಿಯಲು ಬಯಸಿದ್ದರು.
ಆದರೆ, ಕಾಂಗ್ರೆಸ್ ಪಕ್ಷವು ಸೋನಿಯಾ ಅವರನ್ನು ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿತು. ಸೋನಿಯಾ 1998 ರಲ್ಲಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನವನ್ನು ಸ್ವೀಕರಿಸಿದರು. 1999 ರಲ್ಲಿ ಉತ್ತರ ಪ್ರದೇಶದ ಅಮೆಥಿ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಸೋನಿಯಾ ಮೊದಲ ಬಾರಿಗೆ ಸಂಸದರಾದರು.
2004 ರಲ್ಲಿಯೂ ಸೋನಿಯಾ ಗಾಂಧಿಯವರ ನೇತೃತ್ವದಲ್ಲಿ ಕಾಂಗ್ರೆಸ್ ವಿರೋಧ ಪಕ್ಷವನ್ನು ಸೋಲಿಸಿತು.
2006 ರಲ್ಲಿ, ಸೋನಿಯಾ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಬಳಿಕ ಉಪಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದರು.
ಆರಂಭದಲ್ಲಿ ಸೋನಿಯಾ ಗಾಂಧಿಯವರಿಗೆ ಹಿಂದಿ ಮಾತನಾಡಲು ಕಷ್ಟವಾಗಿತ್ತು. ಅವರು ರಾಜಕೀಯಕ್ಕೆ ಬಂದಾಗ, ಜನ ಅವರನ್ನು ಗೇಲಿ ಮಾಡುತ್ತಿದ್ದರು ಮತ್ತು ಹೊರಗಿನವರೆಂದು ಕರೆಯುತ್ತಿದ್ದರು. ಆದರೆ ಸೋನಿಯಾ ಇದರಿಂದ ಹಿಂದೆ ಸರಿಯಾದ ಸೋನಿಯಾ ರಾಜಕೀಯದ ಜೊತೆಗೆ, ಅಚ್ಚುಕಟ್ಟಾಗಿ ಹಿಂದಿ ಮಾತನಾಡುವುದನ್ನೂ ಕಲಿತರು. ಸೋನಿಯಾ ಗಾಂಧಿಯವರು ಈಗ ಹಿಂದಿಯನ್ನು ಸಲೀಸಾಗಿ ಮಾತನಾಡುತ್ತಾರೆ.
ಸೋನಿಯಾ ಅವರು ಡಿಸೆಂಬರ್ 2017 ರಲ್ಲಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದರು ಮತ್ತು ಅವರ ನಂತರ ಅವರ ಪುತ್ರ ರಾಹುಲ್ ಗಾಂಧಿ ಅಧಿಕಾರ ಸ್ವೀಕರಿಸಿದರು. ಸೋನಿಯಾ ಅವರ ಪುತ್ರಿ ಪ್ರಿಯಾಂಕಾ ಗಾಂಧಿ ಕೂಡ ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ. ಲೋಕಸಭಾ ಚುನಾವಣೆಯ ಸೋಲಿನ ಹೊಣೆಹೊತ್ತು ರಾಹುಲ್ ಗಾಂಧಿ ರಾಜೀನಾಮೆ ನೀಡಿದ ಬಳಿಕ ಈಗ ಮತ್ತೊಮ್ಮೆ ಸೋನಿಯಾ ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.