Shukra Uday 2021: ಮೇಷ ರಾಶಿಯಲ್ಲಿ ಶುಕ್ರನ ಉದಯ, ಯಾವ ರಾಶಿಗಳಿಗೆ ತರಲಿದೆ ಅದೃಷ್ಟ

ಭೌತಿಕ ಸಂತೋಷ ಮತ್ತು ಸಮೃದ್ಧಿಯ ಅಂಶವಾದ ಶುಕ್ರ ಗ್ರಹವು ಮೇಷ ರಾಶಿಯಲ್ಲಿ ಉದಯಿಸಲಿದ್ದಾನೆ. ಇದು ಎಲ್ಲಾ 12 ರಾಶಿಚಕ್ರ ಚಿಹ್ನೆಗಳ ಮೇಲೆ ಏನು ಪರಿಣಾಮ ಬೀರುತ್ತದೆ ಎಂದು ತಿಳಿಯಿರಿ.

ನವದೆಹಲಿ: ಮದುವೆ, ಗೃಹ ಪ್ರವೇಶ, ಹೊಸ ಉದ್ಯಮವನ್ನು ಪ್ರಾರಂಭಿಸುವಂತಹ ಶುಭ ಕಾರ್ಯಗಳನ್ನು ನಿರ್ವಹಿಸಲು ಎರಡು ಗ್ರಹಗಳ ಉಪಸ್ಥಿತಿಯು ಬಹಳ ಮುಖ್ಯವಾಗಿದೆ. ಒಂದು ಗುರು ಅಂದರೆ ಬೃಹಸ್ಪತಿ ಮತ್ತು ಇನ್ನೊಂದು ಶುಕ್ರ. ಶುಕ್ರ ಗ್ರಹವನ್ನು ಭೌತಿಕ ಸಂತೋಷ ಮತ್ತು ಸಮೃದ್ಧಿಯ ಸಾಂದರ್ಭಿಕ ಗ್ರಹವೆಂದು ಪರಿಗಣಿಸಲಾಗಿದೆ ಮತ್ತು ಈಗ ಶುಕ್ರ ಗ್ರಹವು ಏಪ್ರಿಲ್ ತಿಂಗಳಲ್ಲಿ ಮೇಷ ರಾಶಿಯಲ್ಲಿ ಉದಯಿಸಲಿದ್ದಾನೆ. ಈ ಗ್ರಹದ ಉದಯದೊಂದಿಗೆ, ಎಲ್ಲಾ ಶುಭ ಮತ್ತು ಮಂಗಳ ಕೆಲಸಗಳು ಸಹ ಪ್ರಾರಂಭವಾಗುತ್ತವೆ. ಶುಕ್ರನ ಉದಯದಿಂದ ಯಾವ ರಾಶಿಚಕ್ರಗಳಿಗೆ ಅದೃಷ್ಟ ಒಲಿಯಲಿದೆ ಮತ್ತು ದ್ವಾದಶ ರಾಶಿಗಳಲ್ಲಿ ಯಾವ ರಾಶಿಗೆ ಏನು ಫಲ ದೊರೆಯಲಿದೆ ತಿಳಿಯಿರಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /12

ನಿಮ್ಮ ಸ್ವಂತ ರಾಶಿಚಕ್ರದಲ್ಲಿ ಶುಕ್ರ ಹೊರಹೊಮ್ಮುತ್ತಿದೆ, ಆದ್ದರಿಂದ ಈ ಬಾರಿ ಮೇಷ ರಾಶಿಯವರಿಗೆ ಶುಭ ಮತ್ತು ಅಧಿಕ ಧನ ಲಾಭವಾಗಲಿದೆ. ನಿಮ್ಮ ಆರ್ಥಿಕ ಸ್ಥಿತಿಯು ಉತ್ತಮವಾಗಿರುತ್ತದೆ. ವಿವಾಹ ಆಗದವರಿಗೆ ಕಂಕಣ ಭಾಗ್ಯ ಕೂಡಿ ಬರಲಿದೆ.  ಆರೋಗ್ಯವು ಉತ್ತಮವಾಗಿರುತ್ತದೆ ಮತ್ತು ವಿದ್ಯಾರ್ಥಿಗಳಿಗೂ ಸಮಯ ಚೆನ್ನಾಗಿದೆ.

2 /12

ಶುಕ್ರನ ಉದಯವು ವೃಷಭ ರಾಶಿ ಜನರಿಗೆ ಒಳ್ಳೆಯ ಸಮಯವನ್ನು ತಂದಿದೆ. ಈ ರಾಶಿಚಕ್ರದ ಜನರು ಹೊಸ ಮನೆ ಅಥವಾ ಹೊಸ ವಾಹನವನ್ನು ಖರೀದಿಸಬಹುದು. ಸಾಮಾಜಿಕ ಸ್ಥಾನಮಾನ ಹೆಚ್ಚಾಗುತ್ತದೆ, ಹೊಸ ಉದ್ಯೋಗಾವಕಾಶಗಳು ಲಭ್ಯವಾಗಲಿವೆ.  

3 /12

ಶುಕ್ರನ ಉದಯವು ಮಿಥುನ ರಾಶಿಯ ಜನರಿಗೆ ಯಶಸ್ಸನ್ನು ದಯಪಾಲಿಸಲಿದೆ. ಹಣಕಾಸಿನ ಭಾಗವು ಬಲವಾಗಿರುತ್ತದೆ, ಪ್ರೀತಿಯ ಜೀವನದಲ್ಲಿ ಪ್ರಣಯ ಹೆಚ್ಚಾಗುತ್ತದೆ, ಅಧ್ಯಯನಗಳು ಮತ್ತು ಬರವಣಿಗೆಗೆ ಸಂಬಂಧಿಸಿದ ಜನರು ಪ್ರಯೋಜನ ಪಡೆಯುತ್ತಾರೆ.

4 /12

ಶುಕ್ರನ ಉದಯವು ಕರ್ಕಾಟಕ ರಾಶಿಯವರಿಗೆ ಒಳ್ಳೆಯ ಸಮಯವನ್ನು ತಂದಿದೆ. ನೀವು ಹೊಸ ವ್ಯವಹಾರವನ್ನು ಪ್ರಾರಂಭಿಸುವ ಬಗ್ಗೆ ಯೋಚಿಸುತ್ತಿದ್ದರೆ ಇದು ಒಳ್ಳೆಯ ಸಮಯ.  ಹೂಡಿಕೆ ಮಾಡುವುದರಿಂದ ಲಾಭವಾಗುತ್ತದೆ, ಉದ್ಯೋಗದಲ್ಲಿ ಉತ್ತಮ ಅವಕಾಶಗಳಿವೆ, ವ್ಯವಹಾರದಲ್ಲಿ ಲಾಭವೂ ಇರುತ್ತದೆ. ಇದನ್ನೂ ಓದಿ - Rashi Parivartan 2021: ಮೇ ತಿಂಗಳಿನಲ್ಲಿ 3 ದೊಡ್ಡ ಗ್ರಹಗಳ ನಡೆ ಪರಿವರ್ತನೆ, ಈ ರಾಶಿಯ ಮೇಲೆ ಅತಿ ಹೆಚ್ಚು ಪ್ರಭಾವ

5 /12

ಮೇಷ ರಾಶಿಯಲ್ಲಿ ಶುಕ್ರನ ಉದಯದಿಂದಾಗಿ ಸಿಂಹ ರಾಶಿಯವರಿಗೆ ಮಿಶ್ರ ಪ್ರತಿಫಲ ದೊರೆಯಲಿದೆ. ಉದ್ಯೋಗ ಮತ್ತು ವ್ಯವಹಾರಕ್ಕೆ ಸಂಬಂಧಿಸಿದಂತೆ ಸಮಯ ಒಳ್ಳೆಯದು. ಕುಟುಂಬ ಸದಸ್ಯರ ಬೆಂಬಲ ಸಿಗಲಿದೆ. ನಿಮ್ಮ ಸಮಸ್ಯೆಗಳಿಗೆ ಶೀಘ್ರವೇ ಪರಿಹಾರ ದೊರೆಯಲಿದೆ.

6 /12

ಕನ್ಯಾರಾಶಿ ಜನರು ಈ ಅವಧಿಯಲ್ಲಿ ಅವರ ಆರೋಗ್ಯದ ಬಗ್ಗೆ ಜಾಗರೂಕರಾಗಿರಬೇಕು. ನಿಮ್ಮ ಗೌರವವು ಹೆಚ್ಚಾಗುತ್ತದೆ, ವಹಿವಾಟಿನ ವಿಷಯದಲ್ಲಿ ಕಾಳಜಿ ವಹಿಸಿ. ಕೋರ್ಟು ಕಚೇರಿ ಸಂಬಂಧಿತ ಕೆಲಸಗಳನ್ನು ಸಾಧ್ಯವಾದಷ್ಟು ತಪ್ಪಿಸಲು ಪ್ರಯತ್ನಿಸಿ.

7 /12

ಶುಕ್ರನ ಉದಯವು ತುಲಾ ರಾಶಿಯ ಜನರ ದಾಂಪತ್ಯ ಜೀವನದಲ್ಲಿ ಸಂತೋಷವನ್ನು ತರುತ್ತದೆ. ಹೊಸ ವ್ಯಾಪಾರ ಅವಕಾಶಗಳು ಸೃಷ್ಟಿಯಾಗುತ್ತವೆ, ಗೌರವ ಹೆಚ್ಚಾಗುತ್ತದೆ. ಉದ್ಯೋಗ ವ್ಯವಹಾರವು ಪ್ರಗತಿಯಾಗುತ್ತದೆ ಮತ್ತು ಈ ಸಮಯವು ನಿಮಗೆ ಅನುಕೂಲಕರವಾಗಿದೆ.

8 /12

ವೃಶ್ಚಿಕ ರಾಶಿಯ ಜನರಿಗೆ ಜನರಿಗೆ ಶುಕ್ರನ ಉದಯವು ಅಷ್ಟಾಗಿ ಒಳ್ಳೆಯದಲ್ಲ. ಯಾವುದೇ ಕೆಲಸ ಅಥವಾ ನಿರ್ಧಾರವನ್ನು ತರಾತುರಿಯಲ್ಲಿ ತೆಗೆದುಕೊಳ್ಳಬೇಡಿ ಅಥವಾ ಅದು ಹಾನಿಯನ್ನುಂಟುಮಾಡಬಹುದು. ಕಾಳಜಿ ವಹಿಸಿ, ಜಗಳ ಪಂದ್ಯಗಳನ್ನು ತಪ್ಪಿಸಿ, ವಿವಾಹ ಕಾರ್ಯಗಳು ವಿಳಂಬವಾಗಬಹುದು. ಇದನ್ನೂ ಓದಿ - ಅಕ್ಷಯ ತೃತೀಯ ದಿನದಂದು ಚಿನ್ನ ಯಾಕೆ ಖರೀದಿಸಬೇಕು..?

9 /12

ಧನು ರಾಶಿ ಜನರಿಗೆ ದೀರ್ಘಕಾಲದವರೆಗಿನ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆ ಶುಕ್ರನ ಉದಯದೊಂದಿಗೆ ಕೊನೆಗೊಳ್ಳುತ್ತದೆ. ವೈವಾಹಿಕ ಜೀವನದಲ್ಲಿ ಪ್ರೀತಿ ಹೆಚ್ಚಾಗುತ್ತದೆ, ಸ್ಥಾನವು ಪ್ರತಿಷ್ಠೆಗೆ ಪ್ರಯೋಜನವನ್ನು ನೀಡುತ್ತದೆ, ಈ ಸಮಯವು ನಿಮಗೆ ಒಳ್ಳೆಯದಾಗಿದ್ದು  ನಿಮ್ಮ ಚಿಂತೆಗೆಳು ದೂರವಾಗುತ್ತವೆ.

10 /12

ಶುಕ್ರನ ಉದಯದೊಂದಿಗೆ ಮಕರ ರಾಶಿಯ ಜನರು ಯಶಸ್ಸನ್ನು ಪಡೆಯಬಹುದು, ಮದುವೆಯಾಗದವರಿಗೆ ಕಂಕಣ ಭಾಗ್ಯ ಕೂಡಿಬರಲಿದೆ. ಹೊಸ ಮನೆ ಅಥವಾ ಹೊಸ ವಾಹನವನ್ನು ಪಡೆಯುವ ಸಾಧ್ಯತೆಗಳು ದಟ್ಟವಾಗಿವೆ. ಕುಟುಂಬದಲ್ಲಿ ಶುಭ ಕಾರ್ಯಗಳು ನಡೆಯಲಿವೆ.

11 /12

ಕುಂಭ ರಾಶಿಯ ಜನರು ಮಾಡುವ ಯಾವುದೇ ಕೆಲಸವು ಮೆಚ್ಚುಗೆ ಪಡೆಯುತ್ತದೆ, ಸಾಮಾಜಿಕ ಗೌರವವು ಹೆಚ್ಚಾಗುತ್ತದೆ, ಉದ್ಯೋಗಗಳು ಮತ್ತು ವ್ಯವಹಾರ ಕ್ಷೇತ್ರದಲ್ಲೂ ನಿಮ್ಮ ಕೆಲಸಕ್ಕೆ ಮೆಚ್ಚುಗೆ ದೊರೆಯಲಿದೆ.  

12 /12

ಶುಕ್ರನ ಉದಯವು ಮೀನ ರಾಶಿಯವರಿಗೆ ಮಿಶ್ರ ಫಲಿತಾಂಶಗಳನ್ನು ನೀಡುತ್ತದೆ, ಸಂಪತ್ತು ನಿಮ್ಮದಾಗಲಿದೆ. ಕುಟುಂಬದಲ್ಲಿ ಮಾಧುರ್ಯ ಇರುತ್ತದೆ. ನಿಮ್ಮ ಆರೋಗ್ಯದ ಬಗ್ಗೆ ಸಂಪೂರ್ಣ ಕಾಳಜಿ ವಹಿಸಿ. (ಗಮನಿಸಿ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಗಳನ್ನು ಆಧರಿಸಿದೆ.  ಜೀ ನ್ಯೂಸ್ ಇವುಗಳನ್ನು ಖಚಿತಪಡಿಸುವುದಿಲ್ಲ.)