Shukra Gochar 2022: ಡಿಸೆಂಬರ್ 5 ರಿಂದ ಬದಲಾಗಲಿದೆ ಈ ವ್ಯಕ್ತಿಗಳ ಅದೃಷ್ಟ

Shukra Gochar 2022 In December: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಒಂದು ಗ್ರಹವು ತನ್ನ ರಾಶಿಯನ್ನು ಬದಲಾಯಿಸಿದಾಗ, ಅದು ಎಲ್ಲಾ ರಾಶಿಗಳ ಜಾತಕದವರ ಮೇಲೆ ಪ್ರಭಾವ ಬೀರುತ್ತದೆ. ಶುಕ್ರ ಡಿಸೆಂಬರ್ 5 ರಂದು ಧನು ರಾಶಿಗೆ ಪ್ರವೇಶಿಸಲಿದೆ. 

Shukra Gochar 2022 In December: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಒಂದು ಗ್ರಹವು ತನ್ನ ರಾಶಿಯನ್ನು ಬದಲಾಯಿಸಿದಾಗ, ಅದು ಎಲ್ಲಾ ರಾಶಿಗಳ ಜಾತಕದವರ ಮೇಲೆ ಪ್ರಭಾವ ಬೀರುತ್ತದೆ. ಶುಕ್ರ ಡಿಸೆಂಬರ್ 5 ರಂದು ಧನು ರಾಶಿಗೆ ಪ್ರವೇಶಿಸಲಿದೆ. ಇದು ಎಲ್ಲಾ ರಾಶಿಗಳ ಜನರ ಜೀವನದ ಮೇಲೆ ಪರಿಣಾಮ ಬೀರಲಿದೆ, ಆದರೆ ಕೆಲವು ರಾಶಿಗಳ ಜನರು ಇದರಿಂದ ವಿಶೇಷ ಪ್ರಯೋಜನಗಳನ್ನು ಪಡೆಯಲಿದ್ದಾರೆ. ಡಿಸೆಂಬರ್ 5 ರಂದು ಸಂಜೆ 6:07 ಕ್ಕೆ ಶುಕ್ರ ಧನು ರಾಶಿಗೆ ಪ್ರವೇಶಿಸಲಿದ್ದಾನೆ ಮತ್ತು ಕೆಲ  ರಾಶಿಗಳ ಜನರಿಗೆ ಒಳ್ಳೆಯ ದಿನಗಳು ಆರಂಭಗೊಳ್ಳಲಿವೆ. ಆ ರಾಶಿಗಳು ಯಾವುವು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ,

 

ಇದನ್ನೂ ಓದಿ-Mangal Transit In Taurus: 120 ದಿನ ವೃಷಭ ರಾಶಿಯಲ್ಲಿ ಮಂಗಳ ಸಂಚಾರ: ಈ 3 ರಾಶಿಯವರು ವೃತ್ತಿ ಜೀವನದಲ್ಲಿ ಮುನ್ನಡೆಯುವುದು ಖಚಿತ

 

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

 

ಇದನ್ನೂ ನೋಡಿ-

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 


 

1 /4

ಕುಂಭ ರಾಶಿ: ಕುಂಭ ರಾಶಿಯ ಲಗ್ನ ಭಾವದಲ್ಲಿ ಶುಕ್ರನ ಈ ಸಂಚಾರ ನಡೆಯಲಿದೆ. ಇಂತಹ ಪರಿಸ್ಥಿತಿಯಲ್ಲಿ, ಈ ರಾಶಿಗಳ ಜನರ ಎಲ್ಲಾ ಸ್ಥಗಿತಗೊಂಡ ಕೆಲಸಗಳು ಪೂರ್ಣಗೊಳ್ಳಲಿವೆ. ಈ ಅವಧಿಯಲ್ಲಿ ಸಾಲಬಾಧೆಯಿಂದ ಮುಕ್ತಿ ಸಿಗಲಿದೆ. ಹೊಸ ಆದಾಯದ ಮೂಲಗಳೂ ತೆರೆದುಕೊಳ್ಳಲಿವೆ. ಇದೇ ವೇಳೆ ಬಹಳ ದಿನಗಳಿಂದ ನನೆಗುದಿಗೆ ಬಿದ್ದಿರುವ ಕಾಮಗಾರಿಗಳೂ ಕೂಡ ಈ ಅವಧಿಯಲ್ಲಿ ಯಸಸ್ಸನ್ನು ಕಾಣಲಿವೆ. ವೈವಾಹಿಕ ಜೀವನದಲ್ಲಿ ಸಂತೋಷ ಇರಲಿದ್ದು, ಮಕ್ಕಳಿಂದ ಶುಭ ಸಮಾಚಾರ ಪ್ರಾಪ್ತಿಯಾಗಲಿದೆ.  

2 /4

ವೃಶ್ಚಿಕ ರಾಶಿ: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಶುಕ್ರನು ವೃಶ್ಚಿಕ ರಾಶಿಯ ದ್ವಿತೀಯ ಭಾವದಲ್ಲಿ ಸಾಗಲಿದ್ದಾನೆ. ಇಂತಹ ಪರಿಸ್ಥಿತಿಯಲ್ಲಿ, ಈ ರಾಶಿಯ ಜನರ ಜೀವನದಲ್ಲಿ ಸಂತೋಷ-ಸಮೃದ್ಧಿ ಮತ್ತು ಸಂಪತ್ತು ಹೆಚ್ಚಾಗಲಿದೆ. ಇದೇ ವೇಳೆ ವಿದೇಶ ಪ್ರವಾಸದ ಸಾಧ್ಯತೆಯೂ ಗೋಚರಿಸುತ್ತಿದೆ. ಕುಟುಂಬದೊಂದಿಗೆ ಕಾಲ ಕಳೆಯಲು ಈ ಸಮಯ ಅನುಕೂಲಕರವಾಗಿದೆ. ಉದ್ಯೋಗದಲ್ಲಿಯೂ ಲಾಭವಾಗಲಿದೆ. ವ್ಯಾಪಾರದಲ್ಲಿ ಹೂಡಿಕೆಯಿಂದ ಕೂಡ ಲಾಭ ಸಿಗಲಿದೆ.  

3 /4

ಸಿಂಹ ರಾಶಿ: ಈ ರಾಶಿಯ ಪಂಚಮ ಭಾವದಲ್ಲಿ ಶುಕ್ರ ಈ ಸಂಚಾರ ನಡೆಯಲಿದೆ. ಈ ಸ್ಥಾನ ಪ್ರೀತಿಯ ತಾಣ ಪರಿಗಣಿಸಲಾಗುತ್ತದೆ. ಈ ಶುಕ್ರ ಸಂಚಾರದಿಂದ ಸಿಂಹ ರಾಶಿಯವರ ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. ಈ ರಾಶಿಯ ಮೂರನೇ ಮತ್ತು ಹತ್ತನೇ ಮನೆಗಳಿಗೆ ಶುಕ್ರ ಅಧಿಪತಿ. ಹೀಗಾಗಿ ಹೊಸ ಉದ್ಯೋಗವನ್ನು ಹುಡುಕುತ್ತಿರುವ ಜನರಿಗೆ ಯಶಸ್ಸು ಸಿಗಲಿದೆ. ಉದ್ಯೋಗವನ್ನು ಹುಡುಕುತ್ತಿರುವ ಜನರು ಸಹ ಯಶಸ್ಸನ್ನು ಪಡೆಯುತ್ತಾರೆ. ಈಗಾಗಲೇ ಉದ್ಯೋಗದಲ್ಲಿರುವವರಿಗೆ ಬಡ್ತಿ ಸಿಗುವ ಸಾಧ್ಯತೆ ಇದೆ.

4 /4

ಮೇಷ ರಾಶಿ: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಮೇಷ ರಾಶಿಯ ಅದೃಷ್ಟದ ಭಾವದಲ್ಲಿ ಶುಕ್ರನ ಈ ಸಂಚಾರ ನಡೆಯಲಿದೆ. ಮೇಷ ರಾಶಿಯ ಏಳನೇ ಮನೆಗೆ ಶುಕ್ರ ಅಧಿಪತಿ. ಇದನ್ನು ಸಂಪತ್ತಿನ ಮನೆ ಎಂದು ಪರಿಗಣಿಸಲಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಮೇಷ ರಾಶಿಯವರಿಗೆ ಶುಕ್ರ ಸಂಚಾರ ಮಂಗಳಕರವಾಗಿರುತ್ತದೆ. ಈ ಅವಧಿಯಲ್ಲಿ, ವೈವಾಹಿಕ ಜೀವನದಲ್ಲಿ ಸಂತೋಷ ಇರಲಿದೆ. ಧಾರ್ಮಿಕ ಕಾರ್ಯಗಳಲ್ಲಿ ವ್ಯಕ್ತಿಯ ಆಸಕ್ತಿ ಹೆಚ್ಚಾಗುತ್ತದೆ. ಉದ್ಯೋಗ ಮತ್ತು ವ್ಯಾಪಾರದಲ್ಲಿಯೂ ಲಾಭವಾಗಲಿದೆ.