Shukra Dasha : ಈ 4 ರಾಶಿಗಳ ಮೇಲೆ ಸಂಪತ್ತಿನ ಮಳೆ ಸುರಿಸಲಿದ್ದಾನೆ ಶುಕ್ರ.. ಇನ್ಮೇಲೆ ಅದೃಷ್ಟವೆಲ್ಲ ನಿಮ್ಮದೇ!

Shukra Gochar 2023: ಶುಕ್ರ ಗ್ರಹವು ಮಿಥುನ ರಾಶಿಯಲ್ಲಿ ಸಂಚರಿಸಲಿದೆ. ಈ ನಾಲ್ಕು ರಾಶಿಯವರಿಗೆ ಇದು ಬಹಳ ಮುಖ್ಯವಾಗಿರುತ್ತದೆ. ಶುಕ್ರನು ಈ ನಾಲ್ಕು ರಾಶಿಯವರಿಗೆ ಅವರ ಸ್ವಭಾವಕ್ಕನುಗುಣವಾಗಿ ಭೌತಿಕ ಸೌಕರ್ಯಗಳನ್ನು ನೀಡುತ್ತಾನೆ. 

Venus Transit 2023: ಪ್ರತಿ ಗ್ರಹವು ಕಾಲ ಕಾಲದಲ್ಲಿ ತನ್ನ ರಾಶಿಯನ್ನು ಬದಲಿಸುತ್ತಾ ಸಂಚರಿಸುತ್ತದೆ. ಇದು ಮಾನವ ಜೀವನದ ಮೇಲೂ ಪರಿಣಾಮ ಬೀರುತ್ತದೆ. ಗ್ರಹಗಳ ಸಂಚಾರದಿಂದ ಶುಭ ಅಥವಾ ಅಶುಭ ಫಲಿತಾಂಶಗಳು ಸಿಗುತ್ತವೆ. ಜ್ಯೋತಿಷ್ಯದಲ್ಲಿ ಶುಕ್ರನನ್ನು ಐಶ್ವರ್ಯ, ಐಷಾರಾಮಿ, ಭೌತಿಕ ಸಂತೋಷ ಮತ್ತು ವೈಭವದ ಗ್ರಹವೆಂದು ಪರಿಗಣಿಸಲಾಗಿದೆ. 

 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ. ‌

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಮೇ 2, 2023 ರಂದು ಮಧ್ಯಾಹ್ನ 1.46 ಕ್ಕೆ ಶುಕ್ರ ಸಂಕ್ರಮಣ ನಡೆಯಲಿದೆ. ಈ ಗ್ರಹದ ಸಂಕ್ರಮಣದಿಂದಾಗಿ, ಕೆಲವು ಜನರ ಅದೃಷ್ಟದಲ್ಲಿ ಭಾರಿ ಬದಲಾವಣೆ ಕಂಡುಬರುತ್ತದೆ.   

2 /5

ಕನ್ಯಾ ರಾಶಿ: ಶುಕ್ರನು ಕನ್ಯಾ ರಾಶಿಯ 10 ನೇ ಮನೆಯಲ್ಲಿ ಸಾಗುತ್ತಾನೆ. ಸ್ಥಗಿತಗೊಂಡಿರುವ ಕೆಲಸ ಮತ್ತೆ ಆರಂಭವಾಗಲಿದೆ. ಸಂಬಳ ಹೆಚ್ಚಾಗಲಿದೆ. ವೃತ್ತಿಜೀವನಕ್ಕೆ ಉತ್ತಮ ಸಮಯ. ದೇವರ ದಯೆಯಿಂದ ನೀವು ಅದೃಷ್ಟವನ್ನು ಪಡೆಯುತ್ತೀರಿ. ಹೊಸ ವ್ಯವಹಾರವನ್ನು ಸಹ ಪ್ರಾರಂಭಿಸಬಹುದು.   

3 /5

ವೃಷಭ ರಾಶಿ: ಶುಕ್ರನು ಜೀವನದಲ್ಲಿ ಹೊಂದಾಣಿಕೆಯನ್ನು ತರಲಿದ್ದಾನೆ. ಎರಡನೇ ಮನೆಯಲ್ಲಿ ಶುಕ್ರ ಸಂಚಾರ ಮಾಡುವುದರಿಂದ ಧನಲಾಭವಾಗಲಿದೆ. ದೈಹಿಕ ಸಂತೋಷದ ಜೊತೆಗೆ ರುಚಿಕರ ಆಹಾರ ಸವಿಯುವಿರಿ. ವೃತ್ತಿಜೀವನವೂ ಉನ್ನತ ಮಟ್ಟದಲ್ಲಿರುತ್ತದೆ. ಎಲ್ಲೆಲ್ಲೂ ನಿಮ್ಮನ್ನು ಹೊಗಳಿ ಪ್ರೋತ್ಸಾಹಿಸಲಾಗುತ್ತದೆ. ಜನರು ನಿಮ್ಮ ಮಾತಿನಿಂದ ಆಕರ್ಷಿತರಾಗುತ್ತಾರೆ.  

4 /5

ಮೇಷ ರಾಶಿ: ಶುಕ್ರನು 2 ಮತ್ತು 7 ನೇ ಮನೆಯ ಅಧಿಪತಿಯಾಗಿದ್ದು, 3 ನೇ ಮನೆಯಲ್ಲಿ ಸಂಚಾರ ಇರುತ್ತದೆ. ಸ್ನೇಹಿತರು ಮತ್ತು ಕುಟುಂಬದೊಂದಿಗೆ ಉತ್ತಮ ಸಮಯವನ್ನು ಕಳೆಯುವಿರಿ. ಪ್ರೇಮ ಸಂಬಂಧಗಳಲ್ಲಿ ಮಾದುರ್ಯವಿರುತ್ತದೆ. ಕುಟುಂಬದಲ್ಲಿ ಸಂತೋಷದ ವಾತಾವರಣ ಇರುತ್ತದೆ. ಲಾಭದಾಯಕವಾಗಿರುವ ಅಲ್ಪ ದೂರ ಪ್ರಯಾಣ ಮಾಡುವಿರಿ.    

5 /5

ಕುಂಭ ರಾಶಿ: ಶುಕ್ರವು ನಿಮ್ಮ 5 ನೇ ಮನೆಯಲ್ಲಿ ಸಾಗುತ್ತಿದೆ. ಇದು ಪ್ರೀತಿಯ ಸಂಬಂಧಗಳನ್ನು ಗಟ್ಟಿಗೊಳಿಸುತ್ತದೆ. ಜೀವನ ಸಂಗಾತಿಯಿಂದ ಪ್ರೀತಿ ಹೆಚ್ಚಾಗುತ್ತದೆ. ಜೀವನ ಸಂಗಾತಿಯೊಂದಿಗೆ ಸುತ್ತಾಡಲು ಹೋಗಬಹುದು. ಲಾಭ ಇರುತ್ತದೆ. ಭವಿಷ್ಯದ ಯೋಜನೆಗಳಿಗೆ ಕೆಲಸ ಮಾಡಲು ಪ್ರಾರಂಭಿಸುವಿರಿ. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಲಿದೆ.