ದೀಪಾವಳಿಗೂ ಮುನ್ನ ಈ ರಾಶಿಗೆ ಶುಕ್ರದೆಸೆ ಶುರು: ಕನಸೆಲ್ಲಾ ನನಸಾಗಿಸಿ ಒಂದೂವರೆ ವರ್ಷ ಸಂಪತ್ತಿನ ಮಳೆ ಸುರಿಸಲಿದ್ದಾನೆ ಶನಿ

Shani Margi and Shukra Gochar 2023: ವೈದಿಕ ಜ್ಯೋತಿಷ್ಯದ ಪ್ರಕಾರ ನವೆಂಬರ್ ತಿಂಗಳು ಕೆಲ ರಾಶಿಯ ಜನರಿಗೆ ಭಾಗ್ಯ ತರಲಿದೆ. ಮಂಗಳಕರ ಗ್ರಹಗಳ ಗೋಚರದಿಂದ ಅದೃಷ್ಟ ಸೂರ್ಯನಂತೆ ಹೊಳೆಯಲಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /9

ನವೆಂಬರ್ 4 ರಂದು ಶನಿ ಗ್ರಹವು ನೇರವಾಗಿ ಚಲಿಸಲು ಪ್ರಾರಂಭಿಸುತ್ತದೆ. ಈ ರೀತಿಯಾಗಿ ಶುಕ್ರ ಸಂಕ್ರಮಣ ಮತ್ತು ಶನಿಯ ನೇರ ಚಲನೆಯಿಂದ ಕೆಲ ರಾಶಿಯ ಜನರ ಬದುಕಲ್ಲಿ ಭಾರೀ ಬದಲಾವಣೆ ತರಲಿದೆ.

2 /9

ನವೆಂಬರ್ 3 ರಂದು, ಸಂಪತ್ತು, ಐಷಾರಾಮಿ, ಪ್ರೀತಿ ಮತ್ತು ಶ್ರೀಮಂತಿಕೆಯ ಸಂಕೇತವಾಗಿರುವ ಶುಕ್ರ ಗ್ರಹವು ಸಿಂಹ ರಾಶಿಯಿಂದ ಹೊರಬಂದು ಕನ್ಯಾರಾಶಿಗೆ ಪ್ರವೇಶಿಸಲಿದೆ.

3 /9

ಇದರ ಜೊತೆಗೆ ನವೆಂಬರ್ 12 ರಂದು ದೀಪಾವಳಿಯು ಪ್ರಾರಂಭವಾಗುತ್ತದೆ. ಆದ್ದರಿಂದ ಲಕ್ಷ್ಮಿ ದೇವಿಯು ಈ ರಾಶಿಯ ಜನರ ಬಾಳಲ್ಲಿ ದಯೆ ತೋರಿ, ಸಾಕಷ್ಟು ಸಂಪತ್ತನ್ನು ನೀಡುತ್ತಾಳೆ. ಅಂದಹಾಗೆ ನವೆಂಬರ್‌’ನಲ್ಲಿ ಅದೃಷ್ಟವನ್ನೇ ಅನುಭವಿಸುವ ಅದೃಷ್ಟಶಾಲಿ ರಾಶಿಗಳು ಯಾವುವು ಎಂದು ತಿಳಿದುಕೊಳ್ಳೋಣ.

4 /9

ಮೇಷ- ಮೇಷ ರಾಶಿಯವರಿಗೆ ನವೆಂಬರ್ ತಿಂಗಳು ಅಪಾರ ಲಾಭವನ್ನು ನೀಡಲಿದೆ. ಶಾಂತಿ ನೆಲೆಸುವುದಲ್ಲದೆ, ಶನಿ-ಶುಕ್ರನ ಪ್ರಭಾವದಿಂದಾಗಿ ಜೀವನದಲ್ಲಿ ಪ್ರಮುಖ ಬದಲಾವಣೆಗಳು ಸಂಭವಿಸುತ್ತವೆ. ಉದ್ಯೋಗ ಬದಲಾಯಿಸಲು ಇಚ್ಛಿಸುವ ಜನರಿಗೆ ಇದು ಸುವರ್ಣ ಘಳಿಗೆಯಾಗಲಿದೆ.

5 /9

ವೃಷಭ ರಾಶಿ – ಈ ರಾಶಿಯವರಿಗೆ ಶುಕ್ರ ಮತ್ತು ಶನಿ ಒಟ್ಟಾಗಿ ಪ್ರಗತಿಯ ಹಾದಿಯನ್ನು ಕರುಣಿಸಿ, ಯಾವುದೇ ಅಡೆತಡೆಗಳು ಬರದಂತೆ ಕಾಯಲಿದ್ದಾರೆ. ಅಪಾರ ಧನಲಾಭದ ಜೊತೆ ಕಲ್ಯಾಣ ಯೋಗವೂ ಇವರಿಗಿದೆ.

6 /9

ಮಿಥುನ ರಾಶಿ: ಶನಿಯ ನೇರ ನಡೆ ಮತ್ತು ಶುಕ್ರನ ಸಂಕ್ರಮಣವು ಮಿಥುನ ರಾಶಿಯವರಿಗೆ ಅದ್ಭುತ ಸಮಯವನ್ನು ಕರುಣಿಸಲಿದೆ. ಯಶಸ್ಸು ಕೂಡ ಈ ಜನರ ಪಾಲಾಗಲಿದ್ದು, ಅನಿರೀಕ್ಷಿತ ಧನಲಾಭವಾಗಲಿದೆ.

7 /9

ಸಿಂಹ ರಾಶಿ: ಈ ರಾಶಿಯ ಜನರ ಕುಟುಂಬದಲ್ಲಿ ದೀಪಾವಳಿಗೂ ಮುನ್ನ ಶುಭಕಾರ್ಯ ನಡೆಯಲಿದೆ. ಅಂದುಕೊಂಡ ಕೆಲಸ ಈ ಸಮಯದಲ್ಲಿ ಈಡೇರಲಿದೆ. ಮಕ್ಕಳಿಂದ ಖುಷಿಯ ವಿಚಾರ ಕೇಳುತ್ತೀರಿ, ಯಶಸ್ಸು ನಿಮ್ಮನ್ನು ಅರಸಿ ಬರಲಿದೆ.

8 /9

ಮಕರ ರಾಶಿ: ಶನಿಯ ನೇರ ನಡೆ ಮತ್ತು ಶುಕ್ರನ ಸಂಕ್ರಮಣವು ಮಕರ ರಾಶಿಯವರಿಗೆ ಅದ್ಭುತವಾದ ಲಾಭಗಳನ್ನು ನೀಡಲಿದೆ. ಶನಿಯ ಪ್ರಭಾವದಿಂದ ನೀವು ಅನಿರೀಕ್ಷಿತ ಆರ್ಥಿಕ ಲಾಭವನ್ನು ಪಡೆಯುತ್ತೀರಿ. ಅಷ್ಟೇ ಅಲ್ಲದೆ, ಒಂದೂವರೆ ವರ್ಷ ನಿಮಗೆ ಕಷ್ಟವೇ ಇಲ್ಲದ ಜೀವನ ಇರಲಿದೆ. ಸರ್ಕಾರಿ ನೌಕರಿಗಾಗಿ ಕಾಯುತ್ತಿರುವವರಿಗೆ ಗುಡ್ ನ್ಯೂಸ್ ಕಾದಿದೆ.

9 /9

(ಸೂಚನೆ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)