Shruti Hariharan stance on Ayodhya Ram Mandir: ಸೌತ್ ಸಿನಿಮಾಗಳ ಸುಂದರಿ ನಟಿ ಶೃತಿ ಹರಿಹರನ್ ಆಗಾಗ ಧರ್ಮ, ರಾಜಕೀಯ ವಿಚಾರಕ್ಕೆ ಸಂಬಂಧಿಸಿದಂತೆ ತಮ್ಮ ಅಸಮಧಾನವನ್ನು ಹೊರಹಾಕುತ್ತಲೇ ಇದ್ದಾರೆ. ಆಗಾಗ ಪ್ರಮುಖ ವೇದಿಕೆಗಳಲ್ಲಿ ಸಾಮಾಜಿಕ ನ್ಯಾಯ, ಮಹಿಳೆಯ ಮೇಲಿನ ಧೋರಣೆ ಬಗ್ಗೆ ಮಾತಾಡುತ್ತಲೇ ಇರುತ್ತಾರೆ. ಇದೀಗ ರಾಮ ಮಂದಿರ ಉದ್ಘಾಟನೆ ಹಿನ್ನೆಲೆ ರಾಜಕೀಯ ಉದ್ದೇಶವಿದೆ ಎಂದು ನಟಿ ಶ್ರೃತಿ ವಿರೋಧ ವ್ಯಕ್ತಪಡಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಶ್ರೀರಾಮ ಮಂದಿರ ಉದ್ಘಾಟನೆ ಹಿಂದೆ ರಾಜಕೀಯ ಉದ್ದೇಶವಿದೆ ಎಂದು ಹಲವು ವಿರೋಧ ವ್ಯಕ್ತಪಡಿಸಿದ್ದಾರೆ. ಇದೀಗ ನಟಿ ಶೃತಿ ಹರಿಹರನ್ ಇನ್ನೊಂದು ಧರ್ಮದ ಪ್ರವಿತ್ರ ಸ್ಥಳದಲ್ಲಿ ದೇವಸ್ಥಾನ ಕಟ್ಟಿರೋದ ಅಸಮಧಾನ ಹೆಚ್ಚಿಸಿದೆ ಎಂದಿದ್ದಾರೆ.
ನೇರ ನುಡಿಯ ನಟಿ ಶೃತಿ ಹರಿಹರನ್ ಈಗ ಸಂವಿಧಾನದ ಪ್ರತಿಯನ್ನು ತನ್ನ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡು, ಶ್ರೀರಾಮ ಮಂದಿರ ಉದ್ಘಾಟನೆ ಬಗ್ಗೆ ಅಸಮಧಾನ ಹೊರಹಾಕಿದ್ದಾರೆ.
ನಟಿ ಶೃತಿ ಹರಿಹರನ್ ಪೋಸ್ಟ್ನಲ್ಲಿ "ನಾನು ಏನನ್ನು ನಂಬುತ್ತೇನೋ ಅದರ ಹಿಂದೆ ಹೋಗುವುದು ಇದೀಗ ಉತ್ತಮ ಪ್ರವೃತ್ತಿಯಾಗಿಟ್ಟಿದೆ. ಇಂತಹ ಸಮಯದಲ್ಲಿ ಸಂವಿಧಾನವನ್ನು ನೆನಪಿಟ್ಟುಕೊಳ್ಳುವುದು ಏಕೆ ಮುಖ್ಯ? ಧರ್ಮದ ವಿಷಯದಲ್ಲಿ ದೇಶವು ತಟಸ್ಥವಾಗಿರಬೇಕೆಂದು ಸಂವಿಧಾನದಲ್ಲಿ ಸ್ಪಷ್ಟವಾಗಿ ಉಲ್ಲೇಖವಾಗಿದೆ. ಇದು ಯಾವುದೇ ಧರ್ಮದ ವಿರುದ್ಧ ತಾರತಮ್ಯ ಅಥವಾ ಪೋಷಣೆ ಮಾಡುವಂತಿಲ್ಲ. ನಾನಿಲ್ಲಿ ರಾಜಕೀಕರಣ ಆಗುತ್ತಿರುವುದನ್ನು ಗಮನಿಸುತ್ತಿದ್ದೇನೆ. ಇದನ್ನೆಲ್ಲ ನೋಡಿ ಆರಾಮಾಗಿ ಕೂತು ಗಮನಿಸಲು ಸಾಧ್ಯವಿಲ್ಲ." ಎಂದು ಹೇಳಿದ್ದಾರೆ.
ಶೃತಿ ಹರಿಹರನ್ ಇದೇ ಪೋಸ್ಟ್ನಲ್ಲಿ ಶ್ರೀರಾಮನ ಬಗ್ಗೆನೂ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾ "ಹೀಗೆ ಹೇಳುವುದರಲ್ಲಿ ಸಮಸ್ಯೆಯಿಲ್ಲ. ರಾಮನಲ್ಲಿರುವ ಸ್ವಭಾವಗಳಿಂದ ಯಾರು ಪ್ರೇರಿತರಾಗುವುದಿಲ್ಲ? ಹನುಮಂತ ತನ್ನ ಎದೆಯನ್ನು ಬಗೆದು ರಾಮನನ್ನು ತೋರಿಸುವುದು ನನಗೆ ಕಾಕತಾಳೀಯ ಅಂತ ಅನಿಸುವುದಿಲ್ಲ. ಬಹುಶ: ರಾಮ ನಮ್ಮೊಳಗೆ ಇದ್ದಾನೆ ಅಂತ ಹೇಳುವುದಕ್ಕಂತಲೇ ಉದ್ದೇಶಪೂರ್ವಕವಾಗಿ ಇದನ್ನು ಹೇಳಲಾಗಿದೆಯೇ?" ಎಂದಿದ್ದಾರೆ.
ನಟಿ ಶೃತಿ ಹರಿಹರನ್ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಕಟ್ಟಿದ್ದಾರೆಂದು ಬೇಸರ ಹೊರ ಹಾಕುತ್ತಾ, "ಇನ್ನೊಂದು ಧರ್ಮದ ಪವಿತ್ರ ಸ್ಥಳದಲ್ಲಿ ದೇವಸ್ಥಾನ ಕಟ್ಟುವ ರಾಜಕೀಯ ಭರವಸೆ ನೀಡಿ, ಅದನ್ನೀಗ ಈಡೇರಿಸಿರುವುದು. ಅಲ್ಲದೆ ಅದನ್ನು ಸಂಭ್ರಮಿಸುತ್ತಿರುವ ರೀತಿ ಅಸಮಧಾನಕ್ಕೆ ಕಾರಣವಾಗಿದೆ." ಎಂದು ಹೇಳಿದ್ದಾರೆ
ಶೃತಿ ಹರಿಹರನ್ ಪೋಸ್ಟ್ಗೆ ಕೆಲವರು ಅಸಮಧಾನ ಹೊರ ಹಾಕಿದ್ದಾರೆ. ಇದೇ ವೇಳೆ ಭಾರತೀಯ ಸಂವಿಧಾನ ಪ್ರತಿಯನ್ನು ಹಂಚಿಕೊಂಡಿದ್ದರ ಬಗ್ಗೆನೂ ಚರ್ಚೆ ಮಾಡುತ್ತಿದ್ದಾರೆ.
ಶೃತಿ ಹರಿಹರನ್ ಪೋಸ್ಟ್ಗೆ ಮತ್ತೆ ಕೆಲವರು ಬೆಂಬಲವನ್ನೂ ಸೂಚಿಸುತ್ತಿದ್ದಾರೆ. ಅಯೋಧ್ಯೆ ಶ್ರೀರಾಮ ಮಂದಿರ ಉದ್ಘಾಟನೆ ಬೆನ್ನಲ್ಲೇ ಕಿಶೋರ್, ಚೇತನ್ ಬಳಿಕ ಶ್ರುತಿ ಹರಿಹರನ್ ತಮ್ಮ ಅಸಮಧಾನವನ್ನು ಹೊರಹಾಕಿದ್ದಾರೆ.