Shravan Maas 2022: ಮನೆಯ ಮೇಲೆ ಶಿವನ ಕೃಪಾ ಕಟಾಕ್ಷಕ್ಕೆ ಶ್ರಾವಣ ಮಾಸದಲ್ಲಿ ತುಳಸಿಯ ಜೊತೆಗೆ ಈ ಸಸ್ಯಗಳನ್ನು ನೆಡಿ

Shravan Maas 2022: ಹಿಂದೂ ಧರ್ಮದಲ್ಲಿ ಶ್ರಾವಣ ಮಾಸವನ್ನು ಅತ್ಯಂತ ಪವಿತ್ರ ಮಾಸವೆಂದು ಪರಿಗಣಿಸಲಾಗಿದೆ. ಶ್ರಾವಣ ಮಾಸದಲ್ಲಿ ಶಿವನ ಆಶೀರ್ವಾದ ಪಡೆಯಲು ಮನೆಯಲ್ಲಿ ತುಳಸಿ ಜೊತೆಗೆ ಈ ಗಿಡಗಳನ್ನು ನೆಟ್ಟರೆ ಶಿವನು ಪ್ರಸನ್ನನಾಗುತ್ತಾನೆ ಎಂದು ನಂಬಲಾಗಿದೆ. 

Shravan Maas 2022: ಹಿಂದೂ ಧರ್ಮದಲ್ಲಿ ಶ್ರಾವಣ ಮಾಸವನ್ನು ಅತ್ಯಂತ ಪವಿತ್ರ ಮಾಸವೆಂದು ಪರಿಗಣಿಸಲಾಗಿದೆ. ಶ್ರಾವಣ ಮಾಸದಲ್ಲಿ ಶಿವನ ಆಶೀರ್ವಾದ ಪಡೆಯಲು ಮನೆಯಲ್ಲಿ ತುಳಸಿ ಜೊತೆಗೆ ಈ ಗಿಡಗಳನ್ನು ನೆಟ್ಟರೆ ಶಿವನು ಪ್ರಸನ್ನನಾಗುತ್ತಾನೆ ಎಂದು ನಂಬಲಾಗಿದೆ. ಇದೇ ವೇಳೆ ಹಣಕಾಸಿನ ಸಮಸ್ಯೆಯಿಂದ ಮುಕ್ತರಾಗಲು ಬಯಸುವವರು, ವಾಸ್ತು ಪ್ರಕಾರ ಶ್ರಾವಣ ಮಾಸದಲ್ಲಿ ಯಾವ ಯಾವ ಗಿಡಗಳನ್ನು ನೆಡಬಹುದು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ,

 

ಇದನ್ನೂ ಓದಿ-Maha Purush Rajyog: 30 ವರ್ಷಗಳ ಬಳಿಕ ತನ್ನ ಮೂಲ ತ್ರಿಕೋನ ರಾಶಿಯಲ್ಲಿ ಈ ಗ್ರಹ, ವಿಶೇಷ ಕಾಕತಾಳೀಯದಿಂದ ಈ ಜನರ ಕನಸು ನನಸು

 

ಇದನ್ನೂ ನೋಡಿ-

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಧತ್ತೂರಿ ಗಿಡ- ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಧತ್ತೂರಿ ಶಿವನಿಗೆ ತುಂಬಾ ಪ್ರಿಯ ಎನ್ನಲಾಗಿದೆ. ಧತ್ತೂರಿಯಲ್ಲಿ ಶಿವನು ನೆಲೆಸಿದ್ದಾನೆ ಎನ್ನಲಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಭಾನುವಾರ ಮತ್ತು ಮಂಗಳವಾರ ಮನೆಯಲ್ಲಿ ಕಪ್ಪು ಧತ್ತೂರಿಯನ್ನು ನೆಡಲು ಸಲಹೆ ನೀಡಲಾಗುತ್ತದೆ. ಈ ದಿನ ಧತ್ತೂರಿ ಗಿಡವನ್ನು ನೆಟ್ಟರೆ ಅದು ವಿಶೇಷವಾಗಿ ಫಲಪ್ರದಾಯಕವಾಗುತ್ತದೆ ಎನ್ನಲಾಗುತ್ತದೆ. ಇದನ್ನು ಮನೆಯಲ್ಲಿ ಹಚ್ಚುವುದರಿಂದ ಶಿವನ ಆಶೀರ್ವಾದ ಪ್ರಾಪ್ತಿಯಾಗುತ್ತದೆ. 

2 /5

ಚಂಪಾ ಗಿಡ- ಚಂಪಾ ಗಿಡ- ವಾಸ್ತು ಪ್ರಕಾರ ಮನೆಯಲ್ಲಿ ಬಾಳೆ, ಚಂಪಾ, ಕೇದಿಗೆ ಗಿಡಗಳು ಕೂಡ ಮಂಗಳಕರವೆಂದು ಸಾಬೀತಾಗುತ್ತದೆ. ಮನೆಯಲ್ಲಿ ಈ ಗಿಡಗಳನ್ನೂ ನೆಟ್ಟರೆ ಲಾಭ. ಚಂಪಾ ಗಿಡವನ್ನು ಅದೃಷ್ಟದ ಸಂಕೇತವೆಂದು ಪರಿಗಣಿಸಲಾಗಿದೆ. ಈ ಸಸ್ಯವನ್ನು ವಾಯುವ್ಯ ದಿಕ್ಕಿನಲ್ಲಿ ನೆಡುವುದು ಉತ್ತಮ

3 /5

ಬಾಳೆಗಿಡ- ಬಾಳೆ ಗಿಡವು ಮನೆಯ ನಕಾರಾತ್ಮಕತೆಯನ್ನು ಹೋಗಲಾಡಿಸುತ್ತದೆ, ಆದ್ದರಿಂದ ಮನೆಯಲ್ಲಿ ಬಾಳೆ ಗಿಡವನ್ನು ನೆಡುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ತುಳಸಿ ಗಿಡ ಮತ್ತು ಬಾಳೆ ಗಿಡಗಳನ್ನು ಒಟ್ಟಿಗೆ ನೆಡಬಾರದು ಎಂಬುದನ್ನು ನೆನಪಿನಲ್ಲಿಡಿ. ಮನೆಯ ಮುಖ್ಯ ದ್ವಾರದ ಎಡಭಾಗದಲ್ಲಿ ತುಳಸಿ ಗಿಡ ಮತ್ತು ಬಲಭಾಗದಲ್ಲಿ ಬಾಳೆ ಗಿಡ ನೆಡಲಾಗುತ್ತದೆ.

4 /5

ಶಮಿ ವೃಕ್ಷ- ವಾಸ್ತು ಪ್ರಕಾರ, ಮನೆಯಲ್ಲಿ ಕೆಲವು ಗಿಡಗಳನ್ನು ನೆಟ್ಟರೆ ಪ್ರಯೋಜನಕಾರಿ ಸಾಬೀತಾಗುತ್ತವೆ. ಮನೆಯಲ್ಲಿ ಶಮಿ ಗಿಡ ನೆಡುವುದರಿಂದ ಕುಟುಂಬ ಸದಸ್ಯರಿಗೆ ಅನುಕೂಲವಾಗುತ್ತದೆ. ಶಮಿ ಗಿಡವನ್ನು ಪೂಜಿಸುವುದರಿಂದ ಶನಿದೇವನ ಆಶೀರ್ವಾದ ಪ್ರಾಪ್ತಿಯಾಗುತ್ತದೆ. ಇದಲ್ಲದೆ, ಮನೆಯಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ. ತುಳಸಿ ಗಿಡದ ಜೊತೆಗೆ ಶಮಿ ಗಿಡವನ್ನು ನೆಟ್ಟರೆ ಅದರಿಂದ ಬಹುಮುಖ ಲಾಭ ಸಿಗುತ್ತದೆ ಎಂದು ನಂಬಲಾಗಿದೆ. ಶಮಿ ಸಸ್ಯ ಶನಿವಾರ ಮತ್ತು ಶನಿ ದೇವರಿಗೆ ಸಂಬಂಧಿಸಿದೆ.

5 /5

ತುಳಸಿ ಗಿಡ-ವಾಸ್ತು ಪ್ರಕಾರ, ಯಾವುದೇ ಸಂಗತಿಯನ್ನು ಅದರ ಸರಿಯಾದ ದಿಕ್ಕಿನಲ್ಲಿ ಇರಿಸಿದಾಗ ಮಾತ್ರ ಅದರ ಸಂಪೂರ್ಣ ಪ್ರಯೋಜನಗಳು ಸಿಗುತ್ತವೆ. ತುಳಸಿ ಗಿಡವನ್ನು ಮನೆಯ ಈಶಾನ್ಯ ದಿಕ್ಕಿನಲ್ಲಿ ನೆಟ್ಟರೆ ಶುಭ ಫಲ ಸಿಗುತ್ತದೆ. ತುಳಸಿ ಗಿಡವನ್ನು ಲಕ್ಷ್ಮಿ ದೇವಿಯ ರೂಪವೆಂದು ಪರಿಗಣಿಸಲಾಗುತ್ತದೆ. ಮನೆಯಲ್ಲಿ ತುಳಸಿ ಗಿಡವನ್ನು ನೆಟ್ಟರೆ ಲಕ್ಷ್ಮಿಯ ಜೊತೆಗೆ ಶ್ರೀ ವಿಷ್ಣುವಿನ ಆಶೀರ್ವಾದವೂ ಪ್ರಾಪ್ತಿಯಾಗುತ್ತದೆ.