ಬಾಲಿ ಸಮುದ್ರತೀರದಲ್ಲಿ ಕಂಡುಬಂದ ಮತ್ಸ್ಯಕನ್ಯೆ.. ಸಮಯಾವಕಾಶವಿರುವಾಗಲೇ ಎಚ್ಚೆತ್ತುಕೊಳ್ಳುವಂತೆ ಸಲಹೆ..
ಬಾಲಿ : ಕರೋನಾ ಮಹಾಮಾರಿಯ (Corona Pandamic) ನಡುವೆಯೂ ಹೊಸ ವರ್ಷಾಚರಣೆ (New Year) ವೇಳೆ ಜನ ತಮ್ಮ ನೆಚ್ಚಿನ ತಾಣಗಳಿಗೆ ಭೇಟಿ ಕೊಡುವವುದನ್ನು ಮಾತ್ರ ಮರೆತರಲಿಲ್ಲ. ಕೊರೊನಾ ರೋಗಕ್ಕೆ ಲಸಿಕೆ ಬಂದಿರುವುದುಇದಿಗ ಜನರಲ್ಲಿ ಆತ್ಮವಿಶ್ವಾಸ ಹೆಚ್ಚಿಸಿದೆ. ಕರೋನಾದಂತಹುದೇ ಮತ್ತೊಂದು ಭೀಕರತೆ ಅನೇಕ ವರ್ಷಗಳಿಂದ ೀ ಭುಮಿ ಮೇಲಿದೆ. ಇದು ಭೂಮಿ ಮಾತ್ರ ಅಲ್ಲ ಸಾಗರಗಳನ್ನೂ ಬಿಟ್ಟಿಲ್ಲ. ಅದು ಮತ್ತೇನೂ ಅಲ್ಲ. ಪ್ಲಾಸ್ಟಿಕ್.. ಇದುಕರೊನಾದಂತೆಯೇ ಇಡೀ ಜಗತ್ತನ್ನೇ ರೋಗಗ್ರಸ್ತವನ್ನಾಗಿಸುವ ಶಕ್ತಿಯನ್ನು ಹೊಂದಿದೆ. ಲಕ್ಷಗಟ್ಟಲೆ ಪ್ಲಾಸ್ಟಿಕ್, ಪ್ಲಾಸ್ಟಿಕ್ ಉತ್ಪನ್ನಗಳು ಸಮುದ್ರತೀರದಲ್ಲಿ ಬಂದು ಬೀಳತ್ತವೆ. ತಿಮಿಂಗಿಲಗಳಂತಹ ಸಮುದ್ರಜೀವಿಗಳ ಅವಸಾನಕ್ಕೂ ಇದು ಕಾರಣವಾಗಿದೆ. ಇನ್ನು ಅಡುಗೆಗೆ ಬೇಕಾಗುವ ಉಪ್ಪು ಕೂಡಾ ಶುದ್ದವಾಗಿರುವುದಿಲ್ಲ ಎಂಬ ಆತಂಕವೂ ಎದುರಾಗಿದೆ.
ಬಾಲಿಯ ಮಹಿಳೆಯೊಬ್ಬರು ಸಮುದ್ರ ತೀರದ ಸೌಂದರ್ಯ ಮತ್ತು ಜಲಚರಗಳನ್ನ ಉಳಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಿಟ್ಟಿದ್ದಾರೆ. ಈ ಮಹಿಳೆಯ ಹೆಸರು ಲಾರಾ. ಇವರು ಮತ್ಸ್ಯಕನ್ಯೆಯ (mermaid) ತರಹ ಬಟ್ಟೆ ತೊಟ್ಟು ಸಮುದ್ರ ತೀರದಲ್ಲಿ ಕಂಡುಬಂದರು. ಇವರ ಫೋಟೋವನ್ನು ಫ್ರಿಲಾನ್ಸ್ ಫೋಟೋಗ್ರಾಫರ್ ವಯಾನ್ ಸುಯದ್ನಾಎಂಬವರು ಕ್ಲಿಕ್ಕಿಸಿದ್ದಾರೆ.
ಬಾಲಿ (Bali)ತನ್ನ ಸೌಂದರ್ಯಕ್ಕಾಗಿಯೇ ಹೆಸರು ವಾಸಿ. ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರಿಗೆ ಲೆಕ್ಕವೇ ಇಲ್ಲ. ಆದರೆ ಇಲ್ಲಿಗೆ ಬರುವ ಪ್ರವಾಸಿಗರು ಇಲ್ಲಿನ ಸಮುದ್ರ ಕಿನಾರೆಯನ್ನು ಸಂಪೂರ್ಣ ಗಬ್ಬೆಬ್ಬಿಸುವುದು ಬೇಸರದ ಸಂಗತಿ. ಕೊರೊನಾಗೆ ಲಸಿಕೆ ಬಂದಿರುವ ನಂತರ ಮತ್ತೆ ಈ ಸ್ಥಳಕ್ಕೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಲು ಶುರು ಮಾಡಿದ್ದಾರೆ.
ಇಲ್ಲಿಯ ನೈರ್ಮಲ್ಯದ ಬಗ್ಗೆ ಜನರಿಗೆ ಜಾಗೃತಿ ಮೂಡಿಸುವ ಸಲುವಾಗಿ ಮಹಿಳೆಯೊಬ್ಬರು, ಮತ್ಸ್ಯಕನ್ಯೆಯಂತೆ ಬಟ್ಟೆಧರಿಸಿ ಬಾಲಿ ಸಮುದ್ರಕಿನಾರೆಯಲ್ಲಿ ಕಂಡುಬಂದರು. ಬಾಲಿ ಮಾತ್ರವಲ್ಲದೆ ಇಡೀ ಜಗತ್ತಿನ ಸಮುದ್ರ ತೀರದ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸುವುದು ಇವರ ಉದ್ದೇಶ.
ಬಾಲಿಯಲ್ಲಿ ಆಗಾಗ ಸ್ವಚ್ಛತೆ ಬಗ್ಗೆಅರಿವು ಮೂಡಿಸಲು ಇಂಥಹ ಅಭಿಯಾನಗಳು ನಡೆಯುತ್ತಿರುತ್ತವೆ.
ಪ್ಲಾಸ್ಟಿಕ್ ವೇಸ್ಟ್ ಈಗ ನಾವು ಊಟ ಮಾಡುವ ತಟ್ಟೆಯನ್ನು ಸಹಾ ತಲುಪಿದೆ. ಹೌದು ನಾವು ಅಡುಗೆಗೆ ಬಳಸುವ ಉಪ್ಪಿನಲ್ಲಿ ಪ್ಲಾಸ್ಟಿಕ್ ಕಣಗಳು ಕಂಡುಬಂದಿದೆ. ೀ ಕಾರಣದಿಂದ ಲಾರಾ ಎಂಬ ಮಹಿಳೆ ಸಾಮಾಜಿಕ ಜಾಲತಾಣಗಳ ಮೂಲಕ ಜಾಗೃತಿ ಮೂಡಿಸುತ್ತಿದ್ದಾರೆ.
ಬಾಲಿಯ ಸಮುದ್ರ ತೀರದಲ್ಲಿ ಕಂಡು ಬರುವ ಪ್ರಮುಖ ಸಮಸ್ಯೆಯೆಂದರೆ ಸಿಂಗಲ್ ಯೂಸ್ ಪ್ಲಾಸ್ಟಿಕ್