ಜಾಗ್ರತಾವಸ್ಥೆಗೆ ಶನಿಯ ಪ್ರವೇಶ, ಐಶ್ವರ್ಯ ಲಕ್ಷ್ಮಿಯ ಕೃಪೆಯಿಂದ 4 ರಾಶಿಗಳ ಜನರು ಮುಟ್ಟಿದ್ದೆಲ್ಲಾ ಚಿನ್ನವಾಗಲಿದೆ!

Shani Wakes Up In Kumbha: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಕರ್ಮ ಫಲದಾತ ಶನಿದೇವ ತನ್ನ ಜಾಗ್ರತಾವಸ್ಥೆಗೆ ಪ್ರವೇಶಿಸಿದ್ದಾನೆ. ಶನಿಯ ಈ ಪ್ರವೇಶದಿಂದ ಒಟ್ಟು ನಾಲ್ಕು ರಾಶಿಗಳ ಜಾತಕದವರಿಗೆ ಆಕಸ್ಮಿಕ ಧನಲಾಭ ಹಾಗೂ ಉನ್ನತಿಯ ಯೋಗ ನಿರ್ಮಾಣಗೊಳ್ಳುತ್ತಿದೆ (Spiritual News In Kannada). 
 

ಬೆಂಗಳೂರು: ವೈದಿಕ ಪಂಚಾಂಗದ ಪ್ರಕಾರ ಎಲ್ಲಾ ನವಗ್ರಹಗಳು ತನ್ನ ಬ್ಯಾಲ್ಯಾವಸ್ಥೆ, ಯುವಾವಸ್ಥೆ ಹಾಗೂ ಜಾಗ್ರತಾವಸ್ಥೆಗೆ ಪ್ರವೇಶಿಸುತ್ತವೆ ಮತ್ತು ಉದಯಿಸುತ್ತವೆ. ಗ್ರಹಗಳ ಈ ಅವಸ್ಥೆಯ ಪ್ರಭಾವ ಭೂಮಿಯ ಮೇಲಿರುವ ಸಕಲ ಚರಾಚರಗಳ ಮೇಲೆ ಉಂಟಾಗುತ್ತದೆ. ಶನಿದೇವ ಆಗಸ್ಟ್ 15 ರಂದು ತನ್ನ ಜಾಗ್ರತಾವಸ್ಥೆಗೆ ಪ್ರವೇಶಿಸಿದ್ದಾನೆ (Spiritual News In Kannada). ಏಕೆಂದರೆ ಯಾವುದೇ ಒಂದು ಗ್ರಹ 1 ರಿಂದ 10 ಡಿಗ್ರಿಯೊಳಗೆ ಇದ್ದು ಹಾಗೂ ವಿಷಮ ರಾಶಿಯಲ್ಲಿದ್ದರೆ, ಇದು ಆ ಗ್ರಹದ ಜಾಗ್ರತಾವಸ್ಥೆ ಎಂದು ಹೇಳಲಾಗುತ್ತದೆ. ಹೀಗಿರುವಾಗ ಶನಿಯ ಈ ಜಾಗ್ರತಾವಸ್ಥೆ ಎಲ್ಲಾ ದ್ವಾದಶ ರಾಶಿಗಳ ಮೇಲೆ ಪ್ರಭಾವ ಬೀರುತ್ತದೆ. ಆದರೆ, 4 ರಾಶಿಗಳ ಜನರಿಗೆ ಈ ಅವಧಿಯಲ್ಲಿ ಆಕಸ್ಮಿಕ ಧನಲಾಭ ಹಾಗೂ ಭಾಗ್ಯೋದಯ ಯೋಗ ನಿರ್ಮಾಣಗೊಳ್ಳುತ್ತಿದೆ. ಆ ಲಕ್ಕಿ ರಾಶಿಗಳು ಯಾವುವು ಬನ್ನಿ ತಿಳಿದುಕೊಳ್ಳೋಣ, 

 

ಇದನ್ನೂ ಓದಿ-Nagpanchami 2023: ಕೆಲವೇ ಗಂಟೆಗಳಲ್ಲಿ ಅಪರೂಪದ ಶುಕ್ಲ ಯೋಗ ನಿರ್ಮಾಣ, ಈ ರಾಶಿಗಳ ಜನರಿಗೆ ಭಾಗ್ಯೋದಯ-ಧನಪ್ರಾಪ್ತಿ ಯೋಗ!

 

ಇದನ್ನೂ ನೋಡಿ-

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /5

ಮೇಷ ರಾಶಿ: ಶನಿ ನಿಮ್ಮ ಗೋಚರ ಜಾತಕದ ಕರ್ಮ ಸ್ಥಾನದ ಅಧಿಪತಿಯಾಗಿ ಲಾಭ ಸ್ಥಾನದಲ್ಲಿ ವಿರಾಜಮಾನನಾಗಿದ್ದಾನೆ. ಹೀಗಾಗಿ ಶನಿಯ ಜಾಗ್ರತಾವಸ್ಥೆಯ ಸಂಚಾರ ನಿಮ್ಮ ಪಾಲಿಗೆ ಅತ್ಯಂತ ಶುಭ ಫಲದಾಯಿ ಸಾಬೀತಾಗಲಿದೆ. ಹೀಗಾಗಿ ಈ ಅವಧಿಯಲ್ಲಿ ನಿಮ್ಮ ಸಕಲ ಇಷ್ಟಾರ್ಥಗಳು ನೆರವೇರಲಿವೆ. ಇದಲ್ಲದೆ ನಿಮಗೆ ಪದೋನ್ನತಿಯ ಭಾಗ್ಯ ಪ್ರಾಪ್ತಿಯಾಗಲಿದೆ. ನೀವು ಬಯಸಿದ ಕಡೆಗೆ ನಿಮಗೆ ವರ್ಗಾವಣೆ ಭಾಗ್ಯ ಸಿಗಲಿದೆ. ಈ ಅವಧಿಯಲ್ಲಿ ನಿಮಗೆ ಕಾರ್ಯಸಿದ್ಧಿ ಪ್ರಾಪ್ತಿಯಾಗಲಿದೆ. ಹಳೆ ಹೂಡಿಕೆಗಳಿಂದ ನಿಮಗೆ ಲಾಭ ಸಿಗಲಿದೆ. ನಿರುದ್ಯೋಗಿಗಳಿಗೆ ನೌಕರಿ ಭಾಗ್ಯ ಪ್ರಾಪ್ತಿಯಾಗಲಿದೆ.   

2 /5

ವೃಷಭ ರಾಶಿ: ಐಶ್ವರ್ಯದಾತ ಶುಕ್ರ ನಿಮ್ಮ ರಾಶಿಯ ಅಧಿಪತಿಯಾಗಿದ್ದಾನೆ ಮತ್ತು ಶನಿ ಹಾಗೂ ಶುಕ್ರನ ನಡುವೆ ಮಿತ್ರಭಾವದ ಸಂಬಂಧವಿದೆ. ಹೀಗಾಗಿ ಶನಿಯ ಜಾಗ್ರತಾವಸ್ಥೆಯಲ್ಲಿನ ಸಂಚಾರ ನಿಮ್ಮ ಪಾಲಿಗೆ ಸಾಕಷ್ಟು ಅನುಕೂಲಕರ ಸಿದ್ಧ ಸಾಬೀತಾಗಲಿದೆ. ಇನ್ನೊಂದೆಡೆ ನಿಮ್ಮ ಗೋಚರ ಚಾಟಕದಲ್ಲಿ ಶನಿ ಶಶ ಹಾಗೂ ಕೇಂದ್ರ ತ್ರಿಕೋನ ರಾಜಯೋಗ ನಿರ್ಮಿಸಿದ್ದಾನೆ. ಹೀಗಾಗಿ ಈ ಅವಧಿಯಲ್ಲಿ ನಿಮಗೆ ಸಕಲ ಕಾರ್ಯಸಿದ್ಧಿ ಪ್ರಾಪ್ತಿಯಾಗಲಿದೆ. ಇದರ ಜೊತೆಗೆ ಶನಿ ನಿಮಗೆ ಆಕಸ್ಮಿಕ ಧನಲಾಭ ಕರುಣಿಸಲಿದ್ದಾನೆ. ನಿಂತುಹೋದ ಕೆಲಸಗಳಿಗೆ ಪುನಃ ವೇಗ ಸಿಗಲಿದೆ. ನೌಕರವರ್ಗದ ಜನರಿಗೆ ನೌಕರಿಯಲ್ಲಿ ಹೊಸ ಅವಕಾಶಗಳು ಪ್ರಾಪ್ತಿಯಾಗಲಿವೆ. ಇದಲ್ಲದೆ ಈ ಅವಧಿಯಲ್ಲಿ ನಿಮ್ಮ ಭಾಗ್ಯೋದಯವಾಗುವ ಸಾಧ್ಯತೆ ಇದೆ.   

3 /5

ಮಿಥುನ ರಾಶಿ: ನಿಮ್ಮ ರಾಶಿಗೆ ಬುದ್ಧಿ ಕರುಣಿಸುವಾತ ಬುಧ ಅಧಿಪತಿಯಾಗಿದ್ದು, ಶನಿ ಹಾಗೂ ಬುಧನ ಮಧ್ಯೆ ಸ್ನೇಹಭಾವ ಸಂಬಂಧವಿದೆ. ಹೀಗಾಗಿ ಶನಿಯ ಜಾಗ್ರತಾವಸ್ಥೆಯಲ್ಲಿನ ಸಂಚಾರ, ನಿಮಗೆ ಸಾಕಷ್ಟು ಶುಭಫಲಗಳನ್ನು ನೀಡಲಿದೆ. ಇನ್ನೊಂದೆಡೆ ಶನಿದೇವನ ಗೋಚರ ನಿಮ್ಮ ಜಾತಕದ ಭಾಗ್ಯ ಸ್ಥಾನದಲ್ಲಿ ನೆರವೇರುತ್ತಿದೆ. ಇದು ಶನಿಯ ಅತ್ಯಂತ ಪ್ರಬಲ ಸ್ಥಾನ ಎಂದು ಭಾವಿಸಲಾಗುತ್ತದೆ. ಹೀಗಾಗಿ ಈ ಅವಧಿಯಲ್ಲಿ ನಿಮ್ಮ ಭಾಗ್ಯ ಸೂರ್ಯನಂತೆ ಹೊಳೆಯಲಿದೆ. ಇಷ್ಟಾರ್ಥಗಳು ನೆರವೇರಲಿವೆ. ಈ ಅವಧಿಯಲ್ಲಿ ನೀವು ಯಾತ್ರೆಗಳು ಸಂಭವಿಸುವ ಸಾಧ್ಯತೆ ಇದೆ. ವಿದೇಶಕ್ಕೆ ಹೋಗಿ ವ್ಯಾಸಂಗ ಮಾಡಲು ಬಯಸುವ ವಿದ್ಯಾರ್ಥಿಗಳ ಆಸೆ ಈಡೇರುವ ಸಾಧ್ಯತೆ ಇದೆ.  

4 /5

ತುಲಾ ರಾಶಿ: ಶನಿ ನಿಮ್ಮ ಗೋಚರ ಜಾತಕದಲ್ಲಿ ಕೇಂದ್ರ ತ್ರಿಕೋನ ರಾಜಯೋಗ ನಿರ್ಮಿಸುತ್ತಿದ್ದಾನೆ. ಹೀಗಾಗಿ ಶನಿಯ ಈ ಜಾಗ್ರತಾವಸ್ಥೆ ಅತ್ಯಂತ ಅದ್ಭುತ ಸಾಬೀತಾಗಲಿದೆ. ಇನ್ನೊಂದೆಡೆ ಶನಿ ನಿಮ್ಮ ಗೋಚರ ಜಾತಕದ ಸುಖ-ಸೌಕರ್ಯಕ್ಕೆ ಅಧಿಪತಿಯಾಗಿ ಪಂಚಮ ಭಾವದಲ್ಲಿ ಕುಳಿತಿದ್ದಾನೆ. ಹೀಗಾಗಿ ಈ ಅವಧಿಯಲ್ಲಿ ನೀವು ವಾಹನ-ಆಸ್ತಿಪಾಸ್ತಿ ಖರೀದಿಸುವ ಸಾಧ್ಯತೆ ಇದೆ. ಇನ್ನೊಂದೆಡೆ ಇದರಿಂದ ನಿಮಗೆ ಆಕಸ್ಮಿಕ ಧನಲಾಭ ಕೂಡ ಉಂಟಾಗಬಹುದು. ವೈದ್ಯಕೀಯ ಶಾಸ್ತ್ರ, ಸಂಶೋಧನೆ ಅಥವಾ ವೈಜ್ಞಾನಿಕ ಕ್ಷೇತ್ರಗಳಿಗೆ ಸಂಬಂಧಿಸಿದ ಜನರಿಗೆ ಇದರಿಂದ ವಿಶೇಷ ಲಾಭ ಸಿಗಲಿದೆ. ಈ ಅವಧಿಯಲ್ಲಿ ನಿಮ್ಮ ಘನತೆ-ಗೌರವ, ಪ್ರತಿಷ್ಠೆ ಸಾಕಷ್ಟು ಹೆಚ್ಚಾಗಲಿದೆ.   

5 /5

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)