ಶನಿದೇವರನ್ನು ನ್ಯಾಯದ ದೇವರು ಮತ್ತು ಕರ್ಮಫಲದಾತ ಎನ್ನುತ್ತಾರೆ. ಮನುಷ್ಯನ ಕರ್ಮಕ್ಕೆ ಅನುಗುಣವಾಗಿ ಶನಿದೇವ ಫಲವನ್ನು ನೀಡುತ್ತಾನೆ ಎಂಬುದು ನಂಬಿಕೆ. ಜ್ಯೋತಿಷ್ಯಶಾಸ್ತ್ರದಲ್ಲಿ ಶನಿ ದೇವರಿಗೆ ಮುಖ್ಯವಾದ ಸ್ಥಾನವಿದೆ.
ನವದೆಹಲಿ: ಶನಿದೇವರನ್ನು ನ್ಯಾಯದ ದೇವರು ಮತ್ತು ಕರ್ಮಫಲದಾತ ಎನ್ನುತ್ತಾರೆ. ಮನುಷ್ಯನ ಕರ್ಮಕ್ಕೆ ಅನುಗುಣವಾಗಿ ಶನಿದೇವ ಫಲವನ್ನು ನೀಡುತ್ತಾನೆ ಎಂಬುದು ನಂಬಿಕೆ. ಜ್ಯೋತಿಷ್ಯಶಾಸ್ತ್ರದಲ್ಲಿ ಶನಿ ದೇವರಿಗೆ ಮುಖ್ಯವಾದ ಸ್ಥಾನವಿದೆ. ಜನವರಿ 5, 2021 ರಂದು ಶನಿವನ್ನು ಮಕರ ರಾಶಿಯಲ್ಲಿ ಅಸ್ತಂಗತವಾಗಿತ್ತು. ಈಗ ಮತ್ತೆ ಅದೇ ಮಕರ ರಾಶಿಯಲ್ಲಿ ಉದಯವಾಗುತ್ತಿದೆ. 1 ತಿಂಗಳ ನಂತರ, ಇಂದು ರಾತ್ರಿ 12 ಗಂಟೆ 50 ನಿಮಿಷಗಳಲ್ಲಿ, ಮಕರ ರಾಶಿಯಲ್ಲಿ ಮತ್ತೆ ಉದಯಿಸಲಿದ್ದಾನೆ. ಶನಿ ಉದಯವಾಗುತ್ತಿದ್ದಂತೆ, ಅವನ ಪ್ರಬಾವವೂ ಹೆಚ್ಚುತ್ತದೆ. ಕೆಲ ರಾಶಿಗಳಿಗೆ ಭಾರೀ ಪ್ರಮಾಣದಲ್ಲಿ ಶುಭ ಫಲವನ್ನು ನೀಡಿದರೆ, ಇನ್ನು ಕೆಲ ರಾಶಿಗಳಿಗೆ ಅಶುಭ ಫಲವನ್ನು ಗೋಚರಿಸಲಿದೆ. ಶನಿ ಉದಯದಿಂದ ಯಾವ ರಾಶಿಗಳಿಗೆ ಶುಭ ಮತ್ತು ಯಾವ ರಾಶಿಗಳಿಗೆ ಅಶುಭ ಫಲ ಎಂಬುದರ ಮಾಹಿತಿ ಇಲ್ಲಿದೆ..
ಮೇಷ : ಮೇಷ ರಾಶಿಯವರಿಗೆ ಶನಿಯ ಉದಯವು ಶುಭ ಫಲವನ್ನು ನೀಡುತ್ತದೆ. ಮೇಷ ರಾಶಿಯವರು ಆರ್ಥಿಕವಾಗಿ ಸದೃಢವಾಗಲಿದ್ದಾರೆ. ಸಾಲ ಮುಕ್ತರಾಗಲಿದ್ದಾರೆ. ಯಾವ ಕೆಲಸ ಮಾಡಿದರೂ ಯಶಸ್ಸು ಸಿಗಲಿದೆ. ವ್ಯಾಪಾರ ವರ್ಗದವರಿಗೂ ಲಾಭದಾಯಕವಾಗಿರಲಿದೆ.
ಕರ್ಕ -: ಶನಿಯ ಉದಯವು ಕರ್ಕ ರಾಶಿವರಿಗೂ ಲಾಭದಾಯಕವಾಗಿರುತ್ತದೆ. ಆರ್ಥಿಕ ಸ್ಥಿತಿ ಬಲಗೊಳ್ಳುತ್ತದೆ. ಯಾವುದಾದದರೂ ಯೋಜನೆಗಳನ್ನು ಹಾಕಿಕೊಂಡಿದ್ದಲ್ಲಿ ಯಶಸ್ವಿಯಾಗುತ್ತವೆ, ಅವಕಾಶಗಳು ಸಿಗುತ್ತವೆ ಮತ್ತು ಗೌರವವೂ ಹೆಚ್ಚಾಗುತ್ತದೆ.
ಕನ್ಯಾರಾಶಿ : ಶನಿ ಎಚ್ಚರಗೊಳ್ಳುತ್ತಿದ್ದಂತೆ, ಕನ್ಯಾರಾಶಿಯವರ ಅದೃಷ್ಟವೂ ಎಚ್ಚರಗೊಳ್ಳಲಿದೆ. ಆರ್ಥಿಕ ಸಮಸ್ಯೆಗಳು ಪರಿಹಾರವಾಗುತ್ತವೆ. ಉದ್ಯೋಗದಲ್ಲಿ ಬಡ್ತಿ ಸಿಗುವ ಸಾಧ್ಯತೆ ಇದೆ, ಆದಾಯ ಹೆಚ್ಚಾಗುತ್ತದೆ.
ವೃಶ್ಚಿಕ : ವೃಶ್ಚಿಕ ರಾಶಿಯವರ ಆದಾಯ ಹೆಚ್ಚಾಗುತ್ತದೆ, ಮನೆಯಲ್ಲಿ ಸಂತೋಷ ಮತ್ತು ಶಾಂತಿಯ ವಾತಾವರಣ ನೆಲೆಸುತ್ತದೆ. ಸಾಲದಿಂದ ಮುಕ್ತಿ ಸಿಗಲಿದೆ, ವ್ಯವಹಾರದಲ್ಲಿ ಲಾಭ ಇರುತ್ತದೆ.
ಮಕರ : ಮಕರ ರಾಶಿಯಲ್ಲಿಯೇ ಶನಿ ಉದಯವಾಗುತ್ತಿದ್ದು, ಈ ರಾಶಿಯವರಿಗೆ ಭಾರೀ ಶುಭಫಲವನ್ನು ನೀಡುತ್ತಾನೆ. ಹೊಸ ಅವಕಾಶಗಳು ಸಿಗಲಿವೆ. ಧನಲಾಭವಾಗಲಿದೆ. ಬಹಳ ಸಮಯದಿಂದ ನಿಂತು ಹೋಗಿದ್ದ ಕೆಲಸಗಳು ವೇಗಪಡೆದುಕೊಳ್ಳಲಿವೆ. ಆರೋಗ್ಯ ಸಮಸ್ಯೆಗಳು ನಿವಾರಣೆಯಾಗಲಿವೆ.
ಕುಂಭ : ಶನಿಯ ಉದಯವು ಕುಂಭ ರಾಶಿಯವರಿಗೂ ಶುಭ ಫಲಿತಾಂಶಗಳನ್ನು ತರಲಿದೆ. ಗೌರವ ಹೆಚ್ಚಾಗುತ್ತದೆ. ಕೆಲಸದಲ್ಲಿ ಪ್ರಗತಿಯಾಗಲಿದೆ. ಹೊಸ ಅವಕಾಶಗಳು ಹುಡುಕಿಕೊಂಡು ಬರಲಿದೆ. ಕೆಲಸಗಳಲ್ಲಿ ಯಶಸ್ಸು ಸಿಗಲಿದೆ.
ವೃಷಭ ರಾಶಿ : ಶನಿಯ ಉದಯದೊಂದಿಗೆ, ವೃಷಭ ರಾಶಿಯವರ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಆದರೆ ಖರ್ಚಿನ ಮೇಲೆ ಹಿಡಿತ ಸಾಧಿಸುವ ಅವಶ್ಯಕತೆಯಿದೆ, ಇಲ್ಲದಿದ್ದರೆ ಹಣಕಾಸಿನ ತೊಂದರೆಗಳು ಎದುರಾಗಬಹುದು.
ಮಿಥುನ : ಮಿಥುನ ರಾಶಿಯವರ ಆರ್ಥಿಕ ಸ್ಥಿತಿ ಹದಗೆಡಬಹುದು. ವೆಚ್ಚಗಳು ಹೆಚ್ಚಾಗಬಹುದು, ದೈಹಿಕ ಮತ್ತು ಮಾನಸಿಕ ತೊಂದರೆಗಳು ಕಾಣಿಸಿಕೊಳ್ಳಬಹುದು. ಮತ್ತು ಕುಟುಂಬದಲ್ಲಿ ತೊಂದರೆ ಎದುರಾಗಬಹುದು.
ಸಿಂಹ : ಕಷ್ಟದ ಸಂದರ್ಭಗಳ ಹೊರತಾಗಿಯೂ ಸ್ನೇಹಿತರು ಮತ್ತು ಕುಟುಂಬದಿಂದ ಸಹಾಯ ದೊರೆಯಲಿದೆ. ಇದು ಅವರ ಆರ್ಥಿಕ ಪರಿಸ್ಥಿತಿಯನ್ನು ಸ್ವಲ್ಪ ಬಲಪಡಿಸುತ್ತದೆ
ತುಲಾ : ತುಲಾ ರಾಶಿಯವರು ಆರೋಗ್ಯ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸಬೇಕಾದಿತು. ಆದ್ದರಿಂದ ಆರೋಗ್ಯದ ಬಗ್ಗೆ ಎಚ್ಚರಿಕೆಯಿಂದಿರಿ. ಅನಗತ್ಯ ಚರ್ಚೆಗೆ ಇಳಿಯುವುದನ್ನು ತಪ್ಪಿಸಿಕೊಳ್ಳಿ. ಹಣಕಾಸಿನ ಸಮಸ್ಯೆ ಎದುರಾಗಬಹುದು.
ಧನು ರಾಶಿ : ಕಡಿಮೆ ಆದಾಯ ಮತ್ತು ಖರ್ಚುಗಳನ್ನು ಅಧಿಕವಾಗಿರುತ್ತದೆ. ಇದು ಮಾನಸಿಕ ಒತ್ತಡವನ್ನು ಉಂಟುಮಾಡಬಹುದು. ಉದ್ಯೋಗದಲ್ಲಿ ಬದಲಾವಣೆಯಾಗುವ ಸಂಭವವೂ ಇದೆ.
ಮೀನ : ಮೀನ ರಾಶಿಯವರ ಆರೋಗ್ಯದ ಬಗ್ಗೆ ಎಚ್ಚರಿಕೆಯಿಂದಿರಬೇಕು. ಸಂಗಾತಿಯ ಆರೋಗ್ಯದ ಬಗ್ಗೆಯೂ ಗಮನ ಹರಿಸುವ ಅಗತ್ಯವಿದೆ. ಕಠಿಣ ಪರಿಶ್ರಮದಿಂದಾಗಿ, ಹಣವನ್ನು ಪಡೆಯಬಹುದು.