ತನ್ನ ಸ್ನೇಹಿತನ ನಕ್ಷತ್ರಕ್ಕೆ ಶನಿಯ ಪ್ರವೇಶ, 3 ರಾಶಿಗಳ ಜನರಿಗೆ ಅಪಾರ ಧನ-ಸಂಪತ್ತು-ಘನತೆ-ಗೌರವ ಪ್ರಾಪ್ತಿ!

Shani Nakshatra Gochar 2023: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಶೀಘ್ರದಲ್ಲಿಯೇ ಶನಿ ಮಹಾರಾಜನ ಶತಭಿಶಾ ನಕ್ಷತ್ರ ಗೋಚರ ನೆರವೇರಲಿದೆ. ಶತಭಿಶಾ ನಕ್ಷತ್ರಕ್ಕೆ ರಾಹು ಅಧಿಪತಿ ಮತ್ತು ರಾಹು ಹಾಗೂ ಶನಿಯ ನಡುವೆ ಸ್ನೇಹ ಭಾವದ ಸಂಬಂಧವಿದೆ. ಶನಿಯ ಈ ಗೋಚರ ಒಟ್ಟು 3 ರಾಶಿಗಳ ಜಾತಕದವರಿಗೆ ಅಪಾರ ಧನ-ಸಂಪತ್ತು-ಘನತೆ-ಗೌರವವನ್ನು ಕರುಣಿಸಲಿದೆ ಆ ಅದೃಷ್ಟವಂತ ರಾಶಿಗಳು ಯಾವುವು ತಿಳಿದುಕೊಳ್ಳೋಣ ಬನ್ನಿ, 
 

Shani In Rahu's Nakshatra: ವೈದಿಕ ಜ್ಯೋತಿಷ್ಯದ ಪ್ರಕಾರ, ಗ್ರಹಗಳು ಹೇಗೆ ನಿರ್ದಿಷ್ಟ ಕಾಲಾಂತರದಲ್ಲಿ ತಮ್ಮ ರಾಶಿಗಳನ್ನು ಬದಲಾಯಿಸುತ್ತವೆಯೋ ಹಾಗೆಯೇ ನಕ್ಷತ್ರಗಳನ್ನು ಕೂಡ ಬದಲಾಯಿಸುತ್ತವೆ. . ಇದರ ಪರಿಣಾಮವು ಮಾನವ ಜೀವನ ಮತ್ತು ಭೂಮಿಯ ಮೇಲೆ ಗೋಚರಿಸುತ್ತದೆ. ನ್ಯಾಯ ಫಲದಾತ ಎಂದೇ ಪ್ರಚ್ಲಿತನಾಗಿರುವ ಶನಿದೇವ ಶೀಘ್ರದಲ್ಲೆ ತನ್ನ ನಕ್ಷತ್ರ ಬದಲಾಯಿಸಲಿದ್ದಾನೆ. ಮಾರ್ಚ್ 15 ರಂದು ಶನಿದೇವನು ರಾಹುವಿನ ನಕ್ಷತ್ರ ಶತಭಿಷಾ ನಕ್ಷತ್ರವನ್ನು ಪ್ರವೇಶಿಸಲಿದ್ದಾನೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಶನಿ ದೇವ ಮತ್ತು ರಾಹು ನಡುವೆ ಸ್ನೇಹ ಭಾವದ ಸಂಬಂಧ ಇದೆ. ಹೀಗಾಗಿ ಶನಿದೇವನ ನಕ್ಷತ್ರ  ಬದಲಾವಣೆಯು ಎಲ್ಲಾ ದ್ವಾದಶ ರಾಶಿಗಳ ಜನರ ಮೇಲೆ ಪರಿಣಾಮ ಬೀರುತ್ತದೆ. ಆದರೆ 3 ರಾಶಿಗಳ ಜನರಿಗೆ ಈ ಅವಧಿಯಲ್ಲಿ ಅಪಾರ ಧನ ಪ್ರಾಪ್ತಿ  ಮತ್ತು ಪ್ರಗತಿಯ ಯೋಗ ರೂಪುಗೊಳ್ಳುತ್ತಿದೆ. ಆ ಅದೃಷ್ಟವಂತ ರಾಶಿಗಳು ಯಾವುವು ತಿಳಿದುಕೊಳ್ಳೋಣ ಬನ್ನಿ,

 

ಇದನ್ನೂ ಓದಿ-ಕೆಲವೇ ಗಂಟೆಗಳಲ್ಲಿ ಮಂಗಳನ ಅಂಗಳಕ್ಕೆ ಶುಕ್ರನ ಎಂಟ್ರಿ, ಈ ರಾಶಿಯ ಜನರು ಮುಟ್ಟಿದ್ದೆಲ್ಲಾ ಚಿನ್ನ!

 

ಇದನ್ನೂ ನೋಡಿ-

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /3

ಮೇಷ ರಾಶಿ: ಶತಭಿಷಾ ನಕ್ಷತ್ರದಲ್ಲಿ ಶನಿದೇವನ ಸಂಚಾರವು ನಿಮಗೆ ಪ್ರಯೋಜನಕಾರಿಯಾಗಿದೆ. ಏಕೆಂದರೆ ಶನಿ ದೇವನು ನಿಮ್ಮ ಜಾತಕದ ಲಾಭ ಮತ್ತು ಕರ್ಮ ಸ್ಥಾನದಲ್ಲಿ ವಿರಾಜಮಾನನಾಗಲಿದ್ದಾನೆ. ಹೀಗಾಗಿ  ಈ ಸಮಯದಲ್ಲಿ ನಿಮ್ಮ ಆದಾಯದಲ್ಲಿ ಭಾರಿ ಹೆಚ್ಚಳವಾಗಬಹುದು. ಇದರೊಂದಿಗೆ ಕೆಲಸ-ವ್ಯವಹಾರದಲ್ಲೂ ಯಶಸ್ಸಿನ ಅವಕಾಶಗಳು ಸೃಷ್ಟಿಯಾಗುತ್ತಿವೆ. ಮತ್ತೊಂದೆಡೆ, ಉದ್ಯೋಗ ಬದಲಾಯಿಸುವ ಬಯಕೆಯಲ್ಲಿರುವ ಈ ರಾಶಿಗಳ ಉದ್ಯೋಗಿಗಳು ತಮ್ಮ ಆಸೆಯನ್ನು ಪೂರೈಸಬಹುದು. ಅಲ್ಲದೆ, ಈ ಸಮಯದಲ್ಲಿ ಹೊಸ ಆದಾಯದ ಮೂಲಗಳನ್ನು ರೂಪುಗೊಳ್ಳಲಿವೆ. ಮತ್ತೊಂದೆಡೆ, ಉದ್ಯಮಿಗಳು ಈ ಸಮಯದಲ್ಲಿ ಉತ್ತಮ ಲಾಭವನ್ನು ಪಡೆಯಬಹುದು. ಅಲ್ಲದೆ, ಈ ಅವಧಿಯಲ್ಲಿ  ರಾಜಕೀಯದ ಜೊತೆಗೆ  ಸಂಬಂಧ ಹೊಂದಿರುವವರು ಉತ್ತಮ ಯಶಸ್ಸನ್ನು ಪಡೆಯಬಹುದು. ಗೌರವವನ್ನು ಪಡೆಯಬಹುದು.  

2 /3

ಮಿಥುನ ರಾಶಿ: ಶನಿದೇವನ ಶತಭಿಷಾ ನಕ್ಷತ್ರವು ವೃತ್ತಿ ಮತ್ತು ವ್ಯವಹಾರದ ವಿಷಯದಲ್ಲಿ ನಿಮಗೆ ಮಂಗಳಕರವಾಗಿರುತ್ತದೆ. ಏಕೆಂದರೆ ಶನಿದೇವನು ನಿಮ್ಮ ಜಾತಕದ ಅಷ್ಟಮ ಮತ್ತು ನವಮ ಭಾವದಲ್ಲಿ ವಿರಾಜಮಾನನಾಗಲಿದ್ದಾನೆ. ಇದರೊಂದಿಗೆ, ಶನಿ ತನ್ನ  ಮೂಲ ತ್ರಿಕೋನ ರಾಶಿಯ ನವಮ ಭಾವದಲ್ಲಿ ಸಂಚರಿಸಲಿದ್ದಾನೆ. ಹೀಗಾಗಿ ನೀವು ಈ ಸಮಯದಲ್ಲಿ ಭಾರಿ ಅದೃಷ್ಟವನ್ನು ಪಡೆಯಬಹುದು. ಇದರೊಂದಿಗೆ ವಿದೇಶ ಪ್ರವಾಸದ ಅವಕಾಶಗಳೂ ಸೃಷ್ಟಿಯಾಗುತ್ತಿವೆ. ನೀವು ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು. ಈ ಅವಧಿಯಲ್ಲಿ ನೀವು ಸರ್ಕಾರಿ ಕೆಲಸದಲ್ಲಿ ಯಶಸ್ಸನ್ನು ಪಡೆಯುತ್ತೀರಿ. ಕೆಲಸದ ಸ್ಥಳದಲ್ಲಿ ಸಮಯವು ನಿಮಗೆ ತುಂಬಾ ಧನಾತ್ಮಕವಾಗಿರುತ್ತದೆ.  

3 /3

ಮಕರ ರಾಶಿ: ಶನಿದೇವನ ಶತಭಿಷಾ ನಕ್ಷತ್ರ ಬದಲಾವಣೆಯು ಮಕರ ರಾಶಿಯವರಿಗೆ ಮಂಗಳಕರವಾಗಿದೆ. ಈ ಅವಧಿಯಲ್ಲಿ, ವೇತನ ವರ್ಗದ  ಜನರಿಗೆ ಹೊಸ ಉದ್ಯೋಗ ಅವಕಾಶಗಳು ಬರಬಹುದು. ಬಡ್ತಿ ಮತ್ತು ಇನ್‌ಕ್ರಿಮೆಂಟ್‌ನ ಅವಕಾಶಗಳನ್ನು ಸಹ ನಿರ್ಮಾಣಗೊಳ್ಳುತ್ತಿವೆ. ವ್ಯಕ್ತಿತ್ವದಲ್ಲಿ ಧನಾತ್ಮಕ ಬದಲಾವಣೆಗಳಾಗುತ್ತವೆ. ಇದರೊಂದಿಗೆ ಕುಟುಂಬದ ಬೆಂಬಲವೂ ಸಿಗಲಿದೆ. ಅವಿವಾಹಿತರು ಮದುವೆಯ ಪ್ರಸ್ತಾಪವನ್ನು ಪಡೆಯಬಹುದು. ಅಲ್ಲದೆ, ಈ ಅವಧಿಯು ವಿದ್ಯಾರ್ಥಿಗಳಿಗೆ ತುಂಬಾ ಉತ್ತಮವಾಗಿದೆ. ಅವರು ಯಶಸ್ಸನ್ನು ಪಡೆಯುವ ಬಲವಾದ ಅವಕಾಶಗಳನ್ನು ಹೊಂದಿದ್ದಾರೆ. ಮತ್ತೊಂದೆಡೆ, ಶನಿದೇವನು ನಿಮ್ಮ ರಾಶಿಗೂ ಕೂಡ ಅಧಿಪತಿ. ಹೀಗಾಗಿ  ಶನಿದೇವನ ರಾಶಿಯ ಬದಲಾವಣೆಯು ನಿಮಗೆ ಮಂಗಳಕರವಾಗಿರುತ್ತದೆ. (ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಮಾಹಿತಿ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಃತಿಯನ್ನು ಖಚಿತಪಡಿಸುವುದಿಲ್ಲ)