Shani Margi 2024: ಕುಂಭದಲ್ಲಿ ಶನಿ ಸಂಚಾರ, ಈ 3 ರಾಶಿಯವರಿಗೆ ಸಿಗಲಿದೆ ಅದೃಷ್ಟದ ಲಾಭ!

Shani Margi 2024: ನವೆಂಬರ್ ತಿಂಗಳಿನಿಂದ ಕೆಲವು ರಾಶಿಯವರು ಶನಿದೇವರ ಆಶೀರ್ವಾದದಿಂದ ಆರ್ಥಿಕ ಸ್ಥಿತಿಯಲ್ಲಿ ಪ್ರಗತಿ ಹೊಂದುತ್ತಾರೆ. ಅವರು ವ್ಯಾಪಾರ ಮತ್ತು ವ್ಯವಹಾರದಲ್ಲಿ ದೊಡ್ಡ ಯಶಸ್ಸನ್ನು ಪಡೆಯುತ್ತಾರೆ. 

Shani Margi 2024: ಶನಿದೇವರು ಪ್ರತಿಯೊಬ್ಬರ ಕರ್ಮಕ್ಕೆ ಅನುಗುಣವಾಗಿ ಆಶೀರ್ವಾದ & ಶಿಕ್ಷೆ ನೀಡುತ್ತಾನೆ. ಶನಿದೇವರು ಒಂದು ರಾಶಿಯಲ್ಲಿ ಸುಮಾರು ಎರಡೂವರೆ ವರ್ಷಗಳ ಕಾಲ ಇರುತ್ತಾರೆ. ಶನಿಯು ಪ್ರಸ್ತುತ ತನ್ನ ಮೂಲತ್ರಿಕೋನ ರಾಶಿಯಾಗಿರುವ ಕುಂಭ ರಾಶಿಯಲ್ಲಿ ಸಂಚರಿಸುತ್ತಿದ್ದಾರೆ. ಸುಮಾರು 30 ವರ್ಷಗಳ ನಂತರ ಈ ರಾಶಿಗೆ ಶನಿದೇವರು ಪ್ರವೇಶಿಸುತ್ತಿದ್ದಾರೆ. ಶನಿಯು ಪ್ರಸ್ತುತ ವಕ್ರ ಸ್ಥಾನದಲ್ಲಿ ಸಂಚರಿಸುತ್ತಿದೆ. ಶನಿಯು ವಕ್ರ ಸ್ಥಾನದಲ್ಲಿರುವುದರಿಂದ ಕೆಲವರ ಜೀವನದಲ್ಲಿ ಅಡೆತಡೆಗಳು ಎದುರಾಗುತ್ತವೆ ಮತ್ತು ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ನವೆಂಬರ್‌ನಲ್ಲಿ ಶನಿದೇವರು ವಕ್ರ ನಿವಾರ್ತಿಯನ್ನು ಪಡೆಯಲಿದ್ದಾರೆ. ಇದರಿಂದ ಕೆಲವು ರಾಶಿಯವರಿಗೆ ಅದೃಷ್ಟದ ಬೆಂಬಲ ಸಿಗಲಿದ್ದು, ಅವರು ಜೀವನವು ಮತ್ತಷ್ಟು ಉತ್ತಮವಾಗಲಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

1 /4

ನವೆಂಬರ್ ತಿಂಗಳಿನಿಂದ ಕೆಲವು ರಾಶಿಯವರು ಶನಿದೇವರ ಆಶೀರ್ವಾದದಿಂದ ಆರ್ಥಿಕ ಸ್ಥಿತಿಯಲ್ಲಿ ಪ್ರಗತಿ ಹೊಂದುತ್ತಾರೆ. ಅವರು ವ್ಯಾಪಾರ ಮತ್ತು ವ್ಯವಹಾರದಲ್ಲಿ ದೊಡ್ಡ ಯಶಸ್ಸನ್ನು ಪಡೆಯುತ್ತಾರೆ. ಉದ್ಯೋಗಿಗಳಿಗೆ ಬಡ್ತಿ, ವೇತನ ಹೆಚ್ಚಳ ಇತ್ಯಾದಿಗಳು ದೊರೆಯುವ ಸಾಧ್ಯತೆಯಿದೆ. ಶನಿದೇವರ ವಕ್ರ ನಿವಾರ್ತಿಯಿಂದ ಯಾವ ರಾಶಿಯವರಿಗೆ ಅದೃಷ್ಟದ ಬೆಂಬಲ ದೊರೆಯಲಿದೆ ಅನ್ನೋದರ ಬಗ್ಗೆ ತಿಳಿಯಿರಿ.

2 /4

ಶನಿದೇವರ ವಕ್ರ ನಿವಾರ್ತಿಯು ವೃಷಭ ರಾಶಿಯ 10ನೇ ಮನೆಯಲ್ಲಿರುತ್ತದೆ. ಈ ರಾಶಿಯವರು ಕೆಲಸ & ವ್ಯವಹಾರದಲ್ಲಿ ಉತ್ತಮ ಪ್ರಗತಿ ಕಾಣುವರು. ಬುದ್ಧಿವಂತಿಕೆಯಿಂದ ನಿಮ್ಮ ಗುರಿಗಳನ್ನು ಸಾಧಿಸುತ್ತೀರಿ. ನವೆಂಬರ್‌ ತಿಂಗಳಿನಿಂದ ನಿಮ್ಮ ವೃತ್ತಿಜೀವನವು ಉತ್ತಮವಾಗಿರುತ್ತದೆ. ವ್ಯಾಪಾರಿಗಳಿಗೆ ಉತ್ತಮ ಲಾಭ ದೊರೆಯಲಿದ್ದು, ಆದಾಯದಲ್ಲಿ ಭರ್ಜರಿ ಲಾಭ ಸಿಗಲಿದೆ. ಉದ್ಯೋಗಿಗಳಿಗೆ ಬಡ್ತಿ ದೊರೆಯುವ ಸಾಧ್ಯತೆ ಇದೆ. ನೀವು ಬಹಳ ದಿನಗಳಿಂದ ಉದ್ಯೋಗ ಹುಡುಕುತ್ತಿದ್ದರೆ, ನವೆಂಬರ್‌ನಲ್ಲಿ ಅದು ಸಹ ದೊರೆಯುತ್ತದೆ.   

3 /4

ಶನಿದೇವರ ವಕ್ರ ನಿವರ್ತಿಯು ಮಿಥುನ ರಾಶಿಯ 9ನೇ ಮನೆಯಲ್ಲಿರುತ್ತದೆ. ನವೆಂಬರ್ ತಿಂಗಳಿನಿಂದ ಮಿಥುನ ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆಯಲಿದೆ. ಕೆಲಸ ಮತ್ತು ವ್ಯಾಪಾರಕ್ಕಾಗಿ ನೀವು ಸಾಕಷ್ಟು ಪ್ರಯಾಣ ಮಾಡಬೇಕಾಗುತ್ತದೆ. ಈ ಪ್ರವಾಸವು ನಿಮಗೆ ಆರ್ಥಿಕ ಲಾಭ ತರುತ್ತದೆ. ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗುತ್ತದೆ. ಅದೃಷ್ಟ ಅನುಕೂಲಕರವಾಗಿದ್ದು, ನೀವು ಎಲ್ಲಾ ಕೆಲಸಗಳನ್ನು ಸುಲಭವಾಗಿ ಪೂರ್ಣಗೊಳಿಸುತ್ತೀರಿ. ನಿಮ್ಮ ಜೀವನವು ತುಂಬಾ ಸಂತೋಷ ಮತ್ತು ತೃಪ್ತಿಕರವಾಗಿರುತ್ತದೆ. ವಿದೇಶಕ್ಕೆ ಹೋಗುವ ಆಸೆಯಿದ್ದರೆ ಅದು ಈ ಅವಧಿಯಲ್ಲಿ ನೆರವೇರಲಿದೆ. ವಿದ್ಯಾರ್ಥಿಗಳಿಗೆ ವಿದೇಶದಲ್ಲಿ ವ್ಯಾಸಂಗ ಮಾಡುವ ಅವಕಾಶ ದೊರೆಯಲಿದೆ.

4 /4

ಶನಿದೇವರು ಕುಂಭ ರಾಶಿಯ ಮೊದಲ ಮನೆಯಲ್ಲಿ ವಕ್ರ ನಿವಾರ್ತಿಯನ್ನು ಪಡೆಯುತ್ತದೆ. ಇದರಿಂದ ಈ ರಾಶಿಯವರಿಗೆ ಆತ್ಮವಿಶ್ವಾಸ ಹೆಚ್ಚುತ್ತದೆ. ಸಾಕಷ್ಟು ಹಣ ಗಳಿಸುವ ಅವಕಾಶ ದೊರೆಯಲಿದೆ. ಈ ಸಮಯದಲ್ಲಿ ನೀವು ಸಾಕಷ್ಟು ಹಣ ಉಳಿಸಬಹುದು. ಸಮಾಜದಲ್ಲಿ ನೀವು ಜನಪ್ರಿಯರಾಗುತ್ತೀರಿ. ನಿಮ್ಮ ಮೌಲ್ಯ ಮತ್ತು ಗೌರವ ಹೆಚ್ಚಾಗುತ್ತದೆ. ಪ್ರಭಾವಿ ವ್ಯಕ್ತಿಗಳ ಸ್ನೇಹದಿಂದ ಉತ್ತಮ ಪ್ರಗತಿ ಸಾಧಿಸುತ್ತೀರಿ. ಇದರಿಂದ ಭವಿಷ್ಯದಲ್ಲಿ ನಿಮಗೆ ಉತ್ತಮ ಫಲಿತಾಂಶ ನೀಡುತ್ತದೆ. ವಿವಾಹಿತರ ಜೀವನವು ಸುಖಮಯವಾಗಿರುತ್ತದೆ. ಅವಿವಾಹಿತರಿಗೆ ಒಳ್ಳೆಯ ಸಂಗಾತಿ ಸಿಗುತ್ತಾರೆ.