Aqsa Afridi: ಶಾಹಿದ್ ಅಫ್ರಿದಿ ಪುತ್ರಿಯೊಂದಿಗೆ ಮದುವೆಯಾಗಲಿರುವ ಶಾಹೀನ್ ಆಫ್ರೀದಿ..!

21 ವರ್ಷದ ಶಾಹೀನ್ ಜೊತೆ ಶಾಹಿದ್ ಆಫ್ರಿದಿ ಪುತ್ರಿ 20ರ ಹರೆಯದ ಅಕ್ಸಾ ಆಫ್ರಿದಿ ನಿಶ್ಚಿತಾರ್ಥವು ಶೀಘ್ರದಲ್ಲೇ ನಡೆಯಲಿದೆ ಎಂದು ವರದಿಯಾಗಿದೆ.

ನವದೆಹಲಿ: ಪಾಕಿಸ್ತಾನ ತಂಡದ ಮಾಜಿ ಆಲ್‌ರೌಂಡರ್ ಶಾಹಿದ್‌ ಅಫ್ರಿದಿ ತಮ್ಮ ಹಿರಿಯ ಪುತ್ರಿಯನ್ನು ಪಾಕ್‌ ತಂಡದ ಯುವ ಎಡಗೈ ವೇಗದ ಬೌಲರ್‌ ಶಹೀನ್‌ ಶಾ ಅಫ್ರಿದಿ ಜೊತೆಗೆ ವಿವಾಹ ಮಾಡುವುದಾಗಿ ಘೋಷಿಸಿದ್ದರು. ಸದ್ಯ ಎಲ್ಲಾ ಮಾದರಿಯ ಕ್ರಿಕೆಟ್‌ನಲ್ಲಿ ಪಾಕ್ ತಂಡದ ಪ್ರಮುಖ ವೇಗದ ಬೌಲರ್‌ ಆಗಿರುವ ಶಾಹೀನ್‌ ಶಾ ಅಫ್ರಿದಿ ಟಿ-20 ವಿಶ್ವಕಪ್ ನಲ್ಲಿ ಅತ್ಯುತ್ತಮ ಪ್ರದರ್ಶನ ತೋರುವ ಮೂಲಕ ಮಿಂಚುತ್ತಿದ್ದಾರೆ. 21 ವರ್ಷದ ಶಾಹೀನ್ ಜೊತೆ ಶಾಹಿದ್ ಆಫ್ರಿದಿ ಪುತ್ರಿ 20ರ ಹರೆಯದ ಅಕ್ಸಾ ಆಫ್ರಿದಿ ನಿಶ್ಚಿತಾರ್ಥವು ಶೀಘ್ರದಲ್ಲೇ ನಡೆಯಲಿದೆ ಎಂದು ವರದಿಯಾಗಿದೆ. ತಮ್ಮ ಪುತ್ರಿಯ ಮದುವೆ ಬಗ್ಗೆ ಕೆಲವು ತಿಂಗಳ ಹಿಂದೆ ಸ್ವತಃ ಶಾಹಿದ್ ಆಫ್ರಿಯೇ ತಿಳಿಸಿದ್ದರು. ಅಕ್ಸಾ ಆಫ್ರಿದಿ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ ನೋಡಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

1 /5

ಅಕ್ಸಾ ಅಫ್ರಿದಿ ಶಾಹಿದ್ ಪಾಕಿಸ್ತಾನ ತಂಡದ ಮಾಜಿ ಆಲ್‌ರೌಂಡರ್ ಶಾಹಿದ್‌ ಅಫ್ರಿದಿ ಅವರ ಹಿರಿಯ ಮಗಳು. ಇವರಿಗೆ ಈಗ 20 ವರ್ಷಗಳಾಗಿವೆ.

2 /5

ಶಾಹಿದ್ ಅಫ್ರಿದಿ ನಾಡಿಯಾ(Nadia Afridi)ರನ್ನು ಮದುವೆಯಾಗಿದ್ದು, ಈ ದಂಪತಿ 5 ಮಕ್ಕಳ ಪೋಷಕರಾಗಿದ್ದಾರೆ.

3 /5

ಅಕ್ಸಾ, ಅನ್ಶಾ, ಅಜ್ವಾ, ಅಸ್ಮಾರಾ ಮತ್ತು ಅರ್ವಾ ಈ ಐವರು ಶಾಹಿದ್ ಅಫ್ರಿದಿ ಅವರ ಪುತ್ರಿಯರಾಗಿದ್ದಾರೆ. ಅಕ್ಸಾ ಶಾಹಿದ್ ಅಫ್ರಿದಿಯವರ ಹಿರಿಯ ಮಗಳು.

4 /5

ವರದಿಗಳ ಪ್ರಕಾರ ಅಕ್ಸಾ ತಮ್ಮ ಅಧ್ಯಯನವನ್ನು ಪೂರ್ಣಗೊಳಿಸಿದ ನಂತರ ಶಾಹೀನ್ ಅಫ್ರಿದಿಯೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರಂತೆ.     

5 /5

ಶಾಹಿದ್ ಆಫ್ರಿದಿಯವರ ಪುತ್ರಿ ಅಕ್ಸಾ ಕ್ರಿಕೆಟ್ ಅಭಿಮಾನಿಯಾಗಿದ್ದಾರೆ. ಆಗಾಗ ಕ್ರಿಕೆಟ್ ಸ್ಟೇಡಿಯಂನಲ್ಲಿ ಕಾಣಿಸಿಕೊಳ್ಳುವ ಅವತು ತಮ್ಮ ದೇಶದ ಆಟಗಾರರನ್ನು ಹುರುದುಂಬಿಸಲು ಪ್ರಯತ್ನಿಸುತ್ತಾರೆ. ತನ್ನ ತಂದೆ ಪಾಕ್ ತಂಡದ ನಾಯಕರಾಗಿದ್ದಾಗ ಅಕ್ಸಾ ಹೆಚ್ಚು ಕ್ರಿಕೆಟ್ ವೀಕ್ಷಿಸುತ್ತಿದ್ದರಂತೆ.