SEE PHOTOS- ವಲಸೆ ಕಾರ್ಮಿಕರ ನೆರವಿಗೆ ಬಂದ ಅಮಿತಾಬ್ ಬಚ್ಚನ್

ಕೊರೊನಾವೈರಸ್ ದೇಶದ ವಲಸೆ ಕಾರ್ಮಿಕರಿಗೆ ಹೆಚ್ಚಿನ ಸಮಸ್ಯೆಗಳನ್ನು ಉಂಟುಮಾಡಿದೆ.

  • May 30, 2020, 09:14 AM IST

ನವದೆಹಲಿ: ಕೊರೊನಾವೈರಸ್ ದೇಶದ ವಲಸೆ ಕಾರ್ಮಿಕರಿಗೆ ಹೆಚ್ಚಿನ ಸಮಸ್ಯೆಗಳನ್ನು ಉಂಟುಮಾಡಿದೆ. ಇರುವ ಜಾಗದಲ್ಲಿ ಕೆಲಸವೂ ಇಲ್ಲದೆ ತನ್ನ ಸ್ವಗ್ರಾಮಕ್ಕೆ ಮರಳಲೂ ಸಾಧ್ಯವಾಗದೆ ದೇಶಾದ್ಯಂತ ಹಲವು ವಲಸೆ ಕಾರ್ಮಿಕರು ಕಾಲ್ನಡಿಗೆಯಲ್ಲಿ ತಮ್ಮ ಮನೆಗಳಿಗೆ ತೆರಳುತ್ತಿದ್ದಾರೆ. ಅವರಿಗೆ ಸಹಾಯ ಮಾಡಲು ಸರ್ಕಾರ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ. ಆದಾಗ್ಯೂ ವಾಸ್ತವ ಪರಿಸ್ಥಿತಿಗಳನ್ನು ಗಮನಿಸಿದರೆ ಸರ್ಕಾರದ ಪ್ರಯತ್ನ ಸಾಲುತ್ತಿಲ್ಲ ಎಂದು ಸಾಬೀತಾಗಿದೆ. ಅದೇ ಸಮಯದಲ್ಲಿ ಬಾಲಿವುಡ್ ಕಲಾವಿದರಲ್ಲಿ ಕೆಲವರು ವಲಸೆ ಕಾರ್ಮಿಕರಿಗಾಗಿ ಸಹಾಯ ಹಸ್ತ ಚಾಚಿದ್ದಾರೆ. ಈ ಹಿಂದೆ ನಟ ಸೋನು ಸೂದ್ ಈ ಕಾರ್ಮಿಕರನ್ನು ಮನೆಗೆ ಕರೆದುಕೊಂಡು ಹೋಗಲು ಬಸ್ ಸೇವೆ ವ್ಯವಸ್ಥೆ ಮಾಡಿದ್ದರು. ಇದೀಗ ಅಮಿತಾಬ್ ಬಚ್ಚನ್ ಸಹ ಈ ಕೆಲಸವನ್ನು ಮಾಡುತ್ತಿದ್ದಾರೆ. ವಾಸ್ತವವಾಗಿ ಅಮಿತಾಬ್ ಬಚ್ಚನ್ ವಲಸೆ ಕಾರ್ಮಿಕರಿಗಾಗಿ 10 ಬಸ್ಸುಗಳನ್ನು ವ್ಯವಸ್ಥೆ ಮಾಡಿದ್ದಾರೆ. ಫೋಟೋಗಳನ್ನು ನೋಡಿ ...
 

1 /7

ಅಮಿತಾಬ್ ಬಚ್ಚನ್ ವಲಸೆ ಕಾರ್ಮಿಕರಿಗಾಗಿ 10 ಬಸ್ಸುಗಳನ್ನು ವ್ಯವಸ್ಥೆ ಮಾಡಿದ್ದಾರೆ. ಈ ಬಸ್‌ಗಳ ಮೂಲಕ ಸುಮಾರು 300 ವಲಸಿಗರನ್ನು ಉತ್ತರಪ್ರದೇಶದ ಹಲವು ಭಾಗಗಳಿಗೆ ಸಾಗಿಸಲಾಗುವುದು ಎಂದು ಹೇಳಲಾಗುತ್ತಿದೆ. ಇವುಗಳಲ್ಲಿ ಲಕ್ನೋ, ಅಲಹಾಬಾದ್, ಗೋರಖ್‌ಪುರ ಮತ್ತು ಭಾದೋಹಿ ಸೇರಿವೆ.

2 /7

ಈ ವಲಸಿಗರಿಗೆ ರೇಷನ್, ಸ್ಯಾನಿಟೈಜರ್‌ಗಳು ಮತ್ತು ಚಪ್ಪಲ್‌ಗಳನ್ನು ಸಹ ಬಿಗ್ ಬಿ ಲಭ್ಯವಾಗುವಂತೆ ಮಾಡಿದ್ದಾರೆ.

3 /7

ಅಮಿತಾಬ್ ಬಚ್ಚನ್ ನಡೆಸುತ್ತಿರುವ ಈ ಬಸ್ ಸೇವೆಗಾಗಿ ಒಂದು ತಂಡವೂ ಕಾರ್ಯನಿರ್ವಹಿಸುತ್ತಿದೆ. ಈ ತಂಡವು ವಲಸೆ ಕಾರ್ಮಿಕರಿಗೆ ಆಹಾರ ಪ್ಯಾಕೆಟ್‌ಗಳು, ನೀರಿನ ಬಾಟಲಿಗಳು ಮತ್ತು ಚಪ್ಪಲಿಗಳನ್ನು ನೀಡುತ್ತಿದೆ.

4 /7

ಈ  ತಂಡದ ಮೂಲಕ 1000 ವಲಸಿಗರು ಸಹಾಯ ಪಡೆಯುತ್ತಿದ್ದಾರೆ. ಈ ಸಮಯದಲ್ಲಿ ಕರೋನಾ ವೈರಸ್ನಿಂದ ರಕ್ಷಿಸಲು ಎಲ್ಲಾ ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲಾಗುತ್ತಿದೆ.

5 /7

ಪ್ರಯಾಣದ ಸಮಯದಲ್ಲಿ ಸಾಮಾಜಿಕ ದೂರವನ್ನು ಅನುಸರಿಸಲು ಇಡೀ ತಂಡವು ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ.

6 /7

ಸಾಮಾಜಿಕ ದೂರವನ್ನು ಕಾಯ್ದುಕೊಳ್ಳುವ ದೃಷ್ಟಿಯಿಂದ ಅರ್ಧದಷ್ಟು ಪ್ರಯಾಣಿಕರನ್ನು ಮಾತ್ರ ಬಸ್‌ಗಳಲ್ಲಿ ಕರೆದೊಯ್ಯಲಾಗುತ್ತಿದೆ ಎಂದು ಹೇಳಲಾಗುತ್ತಿದೆ.  

7 /7

ವರದಿಯ ಪ್ರಕಾರ, ಈ 52 ಆಸನಗಳ ಬಸ್‌ಗಳಲ್ಲಿ ಕೇವಲ 25 ಜನರನ್ನು ಮಾತ್ರ ಕೂರಿಸಲಾಗುತ್ತಿದೆ. ಈ ಹಿಂದೆ ನಟ ಸೋನು ಸೂದ್ ಅವರು ಸಾಕಷ್ಟು ಕಾರ್ಮಿಕರಿಗೆ ಸಹಾಯ ಮಾಡಿದ್ದಾರೆ, ಇದಕ್ಕಾಗಿ ಅವರು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಪ್ರಶಂಸೆಯನ್ನು ಪಡೆದಿದ್ದಾರೆ. (ಎಲ್ಲಾ ಫೋಟೋ ಕೃಪೆ: Yogen Shah)