2025 ರಲ್ಲಿ ಶನಿಯಿಂದ ಈ 3 ರಾಶಿಗಳಿಗೆ ರಾಜಯೋಗ.. ಆರೋಗ್ಯ ಸುಧಾರಿಸಿ, ಹೆಚ್ಚಾಗಲಿದೆ ಧನ ಸಂಪತ್ತು... ಸರ್ವ ಕಾರ್ಯದಲ್ಲೂ ಜಯ ಪ್ರಾಪ್ತಿ!

Saturn transit in Pisces Effects: ಮೀನ ರಾಶಿಯಲ್ಲಿ ಶನಿ ಗೋಚಾರದಿಂದ ಕೆಲವು ರಾಶಿಗಳ ಜನರಿಗೆ ಅದೃಷ್ಟ ಒಲಿಯಲಿದೆ. ಇದರಿಂದ ಜೀವನದಲ್ಲಿ ಉನ್ನತಿ ಕಾಣಲಿದ್ದಾರೆ. ಅಷ್ಟೈಶ್ವರ್ಯ ಪ್ರಾಪ್ತಿಯಾಗಲಿದೆ.

Saturn transit in Pisces 2025: ಮಾರ್ಚ್ 29, 2025 ರಂದು ಮೀನ ರಾಶಿಯನ್ನು ಪ್ರವೇಶಿಸುತ್ತಾನೆ ಮತ್ತು ಜೂನ್ 3, 2027 ರವರೆಗೆ ಈ ರಾಶಿಯಲ್ಲಿ ಇರುತ್ತಾನೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /6

Saturn transit effect: ಶನಿ ಕರ್ಮಕ್ಕೆ ತಕ್ಕ ಫಲ ನೀಡುವ ಗ್ರಹ. ಮಾರ್ಚ್ 29, 2025 ರಂದು ರಾತ್ರಿ 11:01 ಗಂಟೆಗೆ ಶನಿಯು ತನ್ನ ರಾಶಿಯನ್ನು ಬದಲಾಯಿಸುತ್ತಾನೆ. ಕುಂಭದಿಂದ ಹೊರಬಂದು ಮೀನ ರಾಶಿಯನ್ನು ಪ್ರವೇಶಿಸುತ್ತಾನೆ. 

2 /6

ಸುಮಾರು ಎರಡೂವರೆ ವರ್ಷಗಳ ಕಾಲ ಮೀನ ರಾಶಿಯಲ್ಲಿ ಶನಿ ಕುಳಿತಿರುತ್ತಾನೆ. ಗುರುವಿನ ರಾಶಿಗೆ ಶನಿಯ ಪ್ರವೇಶದಿಂದಾಗಿ ಕೆಲವು ಜನ್ಮರಾಶಿಗಳ ಅದೃಷ್ಟ ಬೆಳಗಬಹುದು. 2025 ರ ಆರಂಭದಿಂದ ಈ 3 ರಾಶಿಗಳು ಬಂಪರ್ ಪ್ರಯೋಜನಗಳನ್ನು ಪಡೆಯುತ್ತವೆ.

3 /6

ಮೀನ ರಾಶಿ: ಸಮೃದ್ಧಿ ಮತ್ತು ಪ್ರಗತಿ ಕಾಣುವಿರಿ. ಈ ರಾಶಿಯ ಜನರು ಹೆಚ್ಚಿನ ಪ್ರಯೋಜನಗಳನ್ನು ಪಡೆಯುತ್ತಾರೆ. ಬಹುಕಾಲದಿಂದ ಬಾಕಿ ಉಳಿದಿರುವ ಕೆಲಸಗಳು ಪೂರ್ಣಗೊಳ್ಳಲಿವೆ. ಕುಟುಂಬದಿಂದ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ. ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ. ವ್ಯಾಪಾರ ಮತ್ತು ಉದ್ಯೋಗ ಮಾಡುವವರು ಸಹ ಯಶಸ್ಸನ್ನು ಸಾಧಿಸುತ್ತಾರೆ. ವ್ಯಾಪಾರದಲ್ಲಿಯೂ ಹೆಚ್ಚಿನ ಲಾಭವನ್ನು ಪಡೆಯುವ ಸಾಧ್ಯತೆಗಳಿವೆ.

4 /6

ತುಲಾ ರಾಶಿ: ಬಹಳಷ್ಟು ಲಾಭವನ್ನು ಗಳಿಸಬಹುದು. ಜೀವನದಲ್ಲಿ ಅನೇಕ ಸಂತೋಷದ ಕ್ಷಣಗಳು ಬರುತ್ತವೆ. ದೀರ್ಘಕಾಲದ ಸಮಸ್ಯೆಗಳು ಈಗ ಕ್ರಮೇಣ ಕೊನೆಗೊಳ್ಳಬಹುದು. ನಿಮ್ಮ ಕಠಿಣ ಪರಿಶ್ರಮ ಮತ್ತು ಹೋರಾಟ ಉತ್ತಮ ಫಲಿತಾಂಶಗಳನ್ನು ನೀಡಲು ಪ್ರಾರಂಭಿಸುತ್ತದೆ.  ಇಷ್ಟಾರ್ಥಗಳು ಈಡೇರುತ್ತವೆ. ಎಲ್ಲಾ ಕ್ಷೇತ್ರಗಳಲ್ಲಿ ಯಶಸ್ಸನ್ನು ಸಾಧಿಸಬಹುದು. ಬುದ್ಧಿವಂತಿಕೆ ಮತ್ತು ಮಾತನಾಡುವ ಕೌಶಲ್ಯದಿಂದ ತುಂಬಾ ಯಶಸ್ವಿಯಾಗಬಹುದು. 

5 /6

ಸಿಂಹ ರಾಶಿ: ದೀರ್ಘಕಾಲದವರೆಗೆ ನಡೆಯುತ್ತಿದ್ದ ಸಮಸ್ಯೆಗಳು ಈಗ ಕೊನೆಗೊಳ್ಳಬಹುದು. ಜೀವನದಲ್ಲಿ ಹೊಸ ಭರವಸೆ ಮೂಡುತ್ತದೆ. ಮಾಡುವ ಪ್ರತಿ ಕೆಲಸದಲ್ಲೂ ಯಶಸ್ಸು ಸಿಗುತ್ತದೆ. ಆತ್ಮವಿಶ್ವಾಸ ಮತ್ತು ಧೈರ್ಯ ಹೆಚ್ಚುತ್ತದೆ. ಹೊಸ ವ್ಯಾಪಾರ ಅಥವಾ ವ್ಯವಹಾರವನ್ನು ಪ್ರಾರಂಭಿಸಲು ಬಯಸಿದರೆ ಈ ಅವಧಿ ಹೇಳಿ ಮಾಡಿಸಿದಂತಿದೆ. ಅದೃಷ್ಟವು ನಿಮ್ಮ ಕಡೆ ಇರುತ್ತದೆ.

6 /6

ಸೂಚನೆ: ಪ್ರಿಯ ಓದುಗರೇ ಈ ಲೇಖನವು ಸಾಮಾನ್ಯ ಮಾಹಿತಿ ಮತ್ತು ಧಾರ್ಮಿಕ ವಿಚಾರಗಳನ್ನು ಆಧರಿಸಿದೆ. ಅಳವಡಿಸಿಕೊಳ್ಳುವ ಮೊದಲು ತಜ್ಞರ ಸಲಹೆಯನ್ನು ಪಡೆಯಿರಿ. Zee Kannada News ಇದನ್ನು ಖಚಿತಪಡಿಸುವುದಿಲ್ಲ.