Shani Gochar 2023: 30 ವರ್ಷಗಳ ನಂತರ ರೂಪುಗೊಳ್ಳುತ್ತಿದೆ ಶನಿಯ ಶಶ ಪಂಚ ಮಹಾಪುರುಷ ರಾಜಯೋಗ- ಈ 5 ರಾಶಿಯವರಿಗೆ ಭಾರೀ ಅದೃಷ್ಟ

Shasha Pancha Mahapurusha Rajayoga Effect: ಶನಿಯ ಸಂಕ್ರಮಣದಿಂದ ರೂಪುಗೊಳ್ಳುತ್ತಿರುವ ಶಶ ಪಂಚ ಮಹಾಪುರುಷ ರಾಜಯೋಗವನ್ನು ಜ್ಯೋತಿಷ್ಯ ಶಾಸ್ತ್ರದಲ್ಲಿ ಅತ್ಯಂತ ಮಂಗಳಕರ ಯೋಗಗಳಲ್ಲಿ ಒಂದು ಎಂದು ಹೇಳಲಾಗುತ್ತದೆ. 

Shasha Pancha Mahapurusha Rajayoga Effect: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕರ್ಮಫಲದಾತ ಶನಿಯು 2023ರ ಆರಂಭದಲ್ಲಿಯೇ ಕುಂಭ ರಾಶಿಯಲ್ಲಿ ಸಂಕ್ರಮಿಸಲಿದ್ದಾನೆ. ಈ ಸಮಯದಲ್ಲಿ ಶನಿ ದೇವನು 30 ವರ್ಷಗಳ ನಂತರ ಶಶ ಪಂಚ ಮಹಾಪುರುಷ ರಾಜಯೋಗ ಎಂಬ ಶಕ್ತಿಯುತ ರಾಜಯೋಗವನ್ನು ರೂಪಿಸುತ್ತಿದ್ದಾನೇ. ಶನಿಯ ಸಂಕ್ರಮಣದಿಂದ ರೂಪುಗೊಳ್ಳುತ್ತಿರುವ ಶಶ ಪಂಚ ಮಹಾಪುರುಷ ರಾಜಯೋಗವನ್ನು ಜ್ಯೋತಿಷ್ಯ ಶಾಸ್ತ್ರದಲ್ಲಿ ಅತ್ಯಂತ ಮಂಗಳಕರ ಯೋಗಗಳಲ್ಲಿ ಒಂದು ಎಂದು ಹೇಳಲಾಗುತ್ತದೆ. ಈ ರಾಜಯೋಗವು ಎಲ್ಲಾ 12 ರಾಶಿಯವರ ಮೇಲೆ ಪ್ರಭಾವ ಬೀರುತ್ತದೆ ಆದರೂ ಕೆಲವು ರಾಶಿಯವರ ಜೀವನದಲ್ಲಿ ದೊಡ್ಡ ಪರಿಣಾಮ ಬೀರುತ್ತದೆ. ಅವರ ಜೀವನದ ದಿಕ್ಕೇ ಬದಲಾಗಲಿದೆ ಎಂದು ಹೇಳಲಾಗುತ್ತಿದೆ. ಆ 5 ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯೋಣ... 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ಮೇಷ ರಾಶಿ:  2023ರ ಆರಂಭದಲ್ಲಿ ಶನಿ ರಾಶಿ ಪರಿವರ್ತನೆಯಿಂದ ರೂಪುಗೊಳ್ಳುತ್ತಿರುವ ಶಶ ಪಂಚ ಮಹಾಪುರುಷ ರಾಜಯೋಗದಿಂದ ಮೇಷ ರಾಶಿಯವರು ಬಲವಾದ ಪ್ರಯೋಜನಗಳನ್ನು ಪಡೆಯುತ್ತಾರೆ. ಈ ಸಮಯದಲ್ಲಿ ಶನಿಯ ಅಪಾರ ಆಶೀರ್ವಾದಕ್ಕೆ ಪಾತ್ರರಾಗಲಿರುವ ಮೇಷ ರಾಶಿಯವರಿಗೆ ಅದೃಷ್ಟದ ಸಂಪೂರ್ಣ ಬೆಂಬಲ ದೊರೆಯಲಿದ್ದು, ಆದಾಯವೂ ಹೆಚ್ಚಾಗಲಿದೆ. ಕೆಲಸದಲ್ಲಿ ಪ್ರಗತಿಯೂ ಲಭ್ಯವಾಗಲಿದೆ.

2 /5

ವೃಷಭ ರಾಶಿ: ಶುಕ್ರ ಮತ್ತು ಶನಿ ಗ್ರಹಗಳು ಮಿತ್ರ ಗ್ರಹಗಳಾಗಿದ್ದು 2023ರ ಆರಂಭದಲ್ಲಿ ಶನಿಯ ಸಂಚಾರದಿಂದ ವೃಷಭ ರಾಶಿಯವರು ತುಂಬಾ ಶುಭಕರ ಫಲಗಳನ್ನು ಪಡೆಯಲಿದ್ದಾರೆ. ಈ ಸಮಯದಲ್ಲಿ ಶನಿ ದೇವನ ಆಶೀರ್ವಾದದಿಂದ ಕೆಲಸ-ಕಾರ್ಯಗಳಲ್ಲಿ ಯಶಸ್ಸು ನಿಮ್ಮದಾಗಲಿದೆ. ಉದ್ಯೋಗದಲ್ಲಿ ಪ್ರಗತಿಯ ಜೊತೆಗೆ ಅಪಾರ ಧನಲಾಭವೂ ಆಗಲಿದೆ.

3 /5

ಕನ್ಯಾ ರಾಶಿ: ಶನಿ ರಾಶಿ ಪರಿವರ್ತನೆಯಿಂದ ಮೂರು ದಶಕಗಳ ಬಳಿಕ ರೂಪುಗೊಳ್ಳುತ್ತಿರುವ ಶಶ ಪಂಚ ಮಹಾಪುರುಷ ರಾಜಯೋಗವು ಕನ್ಯಾ ರಾಶಿಯವರ ಜೀವನದ ದಿಕ್ಕನ್ನೇ ಬದಲಾಯಿಸಲಿದೆ. ಈ ಸಮಯದಲ್ಲಿ ಕನ್ಯಾ ರಾಶಿಯವರು ಅಪಾರ ಸಂಪತ್ತಿನ ಒಡೆಯರಾಗಲಿದ್ದು, ಕಾನೂನಾತ್ಮಕ ವಿಷಯಗಲ್ಲೂ ಯಶಸ್ಸನ್ನು ಗಳಿಸಲಿದ್ದಾರೆ. ದೀರ್ಘಾವಧಿಯಿಂದ ಸ್ಥಗಿತಗೊಂಡಿರುವ ಕೆಲಸಗಳು ಪೂರ್ಣಗೊಳ್ಳಲಿದ್ದು ಜೀವನದಲ್ಲಿ ಅಪಾರ ಸುಖ-ಸಂತೋಷವು ನಿಮ್ಮನ್ನು ಹರಸಿ ಬರಲಿದೆ.

4 /5

ಮಕರ ರಾಶಿ: ಶಶ ಪಂಚ ಮಹಾಪುರುಷ ರಾಜಯೋಗವು ಮಕರ ರಾಶಿಯವರಿಗೆ ವೃತ್ತಿ ರಂಗದಲ್ಲಿ ಭಾರೀ ಯಶಸ್ಸನ್ನು ನೀಡಲಿದೆ. ಹೊಸ ಉದ್ಯೋಗಕ್ಕಾಗಿ ಹುಡುಕುತ್ತಿರುವವರಿಗೆ ನಿಮ್ಮ ನೆಚ್ಚಿನ ಉದ್ಯೋಗದ ಆಫರ್ ದೊರೆಯಬಹುದು. ಇದಲ್ಲದೆ, ನೌಕರರಿಗೆ ಪ್ರಮೋಷನ್, ಇನ್‌ಕ್ರಿಮೆಂಟ್ ಪಡೆಯುವ ಸಾಧ್ಯತೆಯೂ ಇದೆ. ವ್ಯಾಪಾರಸ್ಥರಿಗೆ ದೊಡ್ಡ ಆರ್ಡರ್ ಸಿಗಬಹುದು.

5 /5

ಕುಂಭ ರಾಶಿ:  ಶನಿಯು ಮಕರ ರಾಶಿಯನ್ನು ತೊರೆದು ಕುಂಭ ರಾಶಿಯನ್ನು ಪ್ರವೇಶಿಸುವ ಮೂಲಕ ಶಶ ಪಂಚ ಮಹಾಪುರುಷ ರಾಜಯೋಗವನ್ನು ರೂಪಿಸುತ್ತಿದ್ದಾನೆ. ಹಾಗಾಗಿ, ಈ ರಾಶಿಯವರಿಗೆ ಪ್ರತಿ ಕೆಲಸದಲ್ಲಿಯೂ ಅದೃಷ್ಟದ ಪೂರ್ಣ ಬೆಂಬಲ ದೊರೆಯಲಿದೆ. ಯಾವುದೇ ಹಳೆಯ ವ್ಯಾಜ್ಯಗಳು ಈ ಸಮಯದಲ್ಲಿ ನಿಮ್ಮ ಪರವಾಗಿ ಇತ್ಯರ್ಥವಾಗಲಿದೆ. ಒಟ್ಟಾರೆಯಾಗಿ ಈ ಸಮಯವು ನಿಮಗೆ ಉತ್ತಮವಾಗಿರಲಿದೆ.  ಸೂಚನೆ: ಈ ಫೋಟೋ ಗ್ಯಾಲರಿಯಲ್ಲಿ ನೀಡಲಾದ ಮಾಹಿತಿಯು ಧಾರ್ಮಿಕ ನಂಬಿಕೆಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಮಾತ್ರ ಆಧರಿಸಿವೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.