ದೆಹಲಿಯಲ್ಲಿ ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರವು ದೆಹಲಿಯಲ್ಲಿ ದೇಶದ ಅತಿದೊಡ್ಡ ಕೋವಿಡ್ ಆಸ್ಪತ್ರೆಯನ್ನು ತೆರೆದಿದೆ. ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಅವರು ಇಂದು ಈ ಆಸ್ಪತ್ರೆಯನ್ನು ಉದ್ಘಾಟಿಸಿದ್ದಾರೆ.
ಸರ್ದಾರ್ ವಲ್ಲಭಭಾಯಿ ಪಟೇಲ್ COVID ಆಸ್ಪತ್ರೆ ಹೆಸರಿನ ಈ ಕೋವಿಡ್ ಆರೈಕೆ ಕೇಂದ್ರವನ್ನು ಕೇಂದ್ರ ಗೃಹ ಸಚಿವಾಲಯ, DRDO ಹಾಗೂ ಟಾಟಾ ಸನ್ಸ್ ಜಂಟಿಯಾಗಿ ನಿರ್ಮಿಸಿವೆ.
ಇದೊಂದು ತಾತ್ಕಾಲಿಕ ಆಸ್ಪತ್ರೆಯಾಗಿದ್ದು, ಇದರ ವಿಶೇಷ ವಿಷಯ ಎಂದರೆ ಇದು ಕೇವಲ 11 ದಿನಗಳಲ್ಲಿ ನಿರ್ಮಾಣಗೊಂಡಿದೆ. ಈ ಕೋವಿಡ್ ಆರೈಕೆ ಕೇಂದ್ರದಲ್ಲಿ 250 ಐಸಿಯು ವಾರ್ಡ್ಗಳಿವೆ.
ಗಲ್ವಾನ್ ಕಣಿವೆಯಲ್ಲಿ ಇತ್ತೀಚಿಗೆ ಹುತಾತ್ಮರಾಗಿರುವ ಸೈನಿಕರ ಹೆಸರಿನ ಹೆಸರಿನಲ್ಲಿ DRDO ಈ ಆರೈಕೆ ಕೇಂದ್ರದ ವಾರ್ಡ್ ಗಳನ್ನು ಹೆಸರಿಸಿದೆ.ಆಸ್ಪತ್ರೆಯ ಐಸಿಯು ಹಾಗೂ ವೆಂಟಿಲೇಟರ್ ವಾರ್ಡ್ ಗೆ ಕರ್ನಲ್ ಬಿ. ಸಂತೋಷ್ ಬಾಬು ಅವರ ಹೆಸರನ್ನಿಡಲಾಗಿದೆ.
ವರದಿಗಳ ಪ್ರಕಾರ ಇದು ವಿಶ್ವದ ಅತಿ ದೊಡ್ಡ ಆರೈಕೆ ಕೇಂದ್ರವಾಗಿದೆ ಎಂದು ಹೇಳಲಾಗುತ್ತಿದೆ. ಇದರ ವಿಸ್ತೀರ್ಣ ಸುಮಾರು 20 ಫುಟ್ ಬಾಲ್ ಗಳ ಮೈದಾನಗಳಿಗೆ ಸಮ ಎನ್ನಲಾಗಿದೆ. ಇದರ ಒಟ್ಟು ವಿಸ್ತೀರ್ಣ 1,700 ಅಡಿ ಉದ್ದ ಮತ್ತು 700 ಅಡಿಗಳಷ್ಟಾಗಿದೆ ಎನ್ನಲಾಗಿದೆ
ದೆಹಲಿಯ ಛತರ್ಪುರ್ ನಲ್ಲಿ ಸ್ಥಾಪಿಸಲಾದ ರಾಧಾ ಸ್ವಾಮಿ ಸತ್ಸಂಗ್ ಬಿಯಾಸ್ನಲ್ಲಿ ಈ 10,000 ಹಾಸಿಗೆಗಳ ಸಾಮರ್ಥ್ಯವಿರುವ ಸರ್ದಾರ್ ಪಟೇಲ್ ಕೋವಿಡ್ ಆರೈಕೆ ಕೇಂದ್ರವನ್ನು ತೆರೆಯಲಾಗಿದೆ. ಇದನ್ನು ವಿಮಾನ ನಿಲ್ದಾಣದ ಬಳಿ ನಿರ್ಮಿಸಲಾಗಿದೆ.
ಈ ಕೇಂದ್ರವು ಸೌಮ್ಯ ಅಥವಾ ಯಾವುದೇ ರೋಗಲಕ್ಷಣಗಳಿಲ್ಲದ ಕರೋನವೈರಸ್ ರೋಗಿಗಲಿಗೊಸ್ಕರ ಇರಲಿದೆ. ರೋಗದ ಗಂಭೀರ ಲಕ್ಷಣಗಳಿಲ್ಲದ ಹಾಗೂ ಮನೆಯಲ್ಲಿ ಪ್ರತ್ಯೇಕವಾಗಿ ಇರಲು ವ್ಯವಸ್ಥೆ ಇರದ ರೋಗಿಗಳಿಗೋಸ್ಕರ ಇದನ್ನು ನಿರ್ಮಿಸಲಾಗಿದೆ.
ಕೇಂದ್ರವನ್ನು ನಿರ್ವಹಿಸುವ ಜವಾಬ್ದಾರಿಯನ್ನು ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸರಿಗೆ (ಐಟಿಬಿಪಿ) ನೀಡಲಾಗಿದೆ. ಈ ಕೇಂದ್ರದ ನಿಗಾ ವ್ಹಹಿಸುವ ನೋಡಲ್ ಏಜೆನ್ಸಿ ಐಟಿಬಿಪಿ ಆಗಿದ್ದರೆ, ದೆಹಲಿ ಸರ್ಕಾರವು ಆಡಳಿತಾತ್ಮಕ ಬೆಂಬಲ ನೀಡಲಿದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಆರೋಗ್ಯ ಸಚಿವ ಡಾ.ಹರ್ಷ್ ವರ್ಧನ್ ಅವರು ಆಸ್ಪತ್ರೆಗೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಗಳ ಬಗ್ಗೆ ಮಾಹಿತಿ ಪಡೆದಿದ್ದಾರೆ. ಇದು ಒಟ್ಟು 200 ಕ್ಯಾಂಪಸ್ ಗಳನ್ನು ಹೊಂದಿದ್ದು, ಪ್ರತಿಯೊಂದು ಕ್ಯಾಂಪಸ್ 50 ಹಾಸಿಗೆಗಳನ್ನು ಹೊಂದಿದೆ.