ಫ್ಲೋರಲ್ ಶಾರ್ಟ್ಸ್ ಧರಿಸಿ ಸುದ್ದಿ ಮಾಡಿದ ಸೈಫ್ ಅಲಿ ಖಾನ್ ಪುತ್ರಿ

  • Feb 09, 2020, 12:08 PM IST

ಖ್ಯಾತ ಬಾಲಿವುಡ್ ನಟ ಸೈಫ್ ಅಲಿ ಖಾನ್ ಅವರ ಪುತ್ರಿ ಸಾರಾ ಅಲಿ ಖಾನ್ ಪರಿಚಯ ಮಾಡಿಕೊಡುವ ಅಗತ್ಯವಿಲ್ಲ. ನಿತ್ಯ ತಮ್ಮ ಹಲವು ಫೋಟೋಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡು ಸಾರಾ ಸುದ್ದಿ ಮಾಡುತ್ತಲೇ ಇರುತ್ತಾರೆ. ಈ ಮಧ್ಯೆ ತನ್ನ ಸಾಮಾಜಿಕ ಮಾಧ್ಯಮ ಖಾತೆಗೆ ಸಾರಾ ಹಂಚಿಕೊಂಡಿರುವ ಫೋಟೋವೊಂದು ಇದೀಗ ಭಾರಿ ವೈರಲ್ ಆಗಲಾರಂಭಿಸಿದೆ. ಇತ್ತೀಚೆಗಷ್ಟೇ ಸಾರಾ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಕೆಲ ಫೋಟೋಗಳನ್ನು ಹಂಚಿಕೊಂಡಿದ್ದಾಳೆ. ಈ ಫೋಟೋಗಳಲ್ಲಿ ಸಾರಾ ಫ್ಲೋರಲ್ ಶಾರ್ಟ್ಸ್ ಗಳನ್ನು ಧರಿಸಿದ್ದಾರೆ. ಅವರು ಹಂಚಿಕೊಂಡಿರುವ ಫೋಟೋಗಳಲ್ಲಿ ಕಪ್ಪು ಬಣ್ಣದ ಟಾಪ್ ಧರಿಸಿರುವ ಫೋಟೋ ಕೂಡ ಶಾಮೀಲಾಗಿದೆ. ಇದರ ಮೇಲೆ ಗುಲಾಬಿ ಬಣ್ಣದ ಚೈನೀಸ್ ಬರಹವಿದೆ. ಅಷ್ಟೇ ಅಲ್ಲ ಈ ಫೋಟೋಗಳಲ್ಲಿ ಸಾರಾ ತುಂಬಾ ಕಡಿಮೆ ಮೇಕಪ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಇದರಿಂದ ಸಾರಾ ತುಂಬಾ ಮುಗ್ಧವಾಗಿ ಕಾಣಿಸಿಕೊಂಡಿದ್ದಾರೆ. ಈ ಫೋಟೋಗಳನ್ನು ಹಂಚಿಕೊಂಡಿರುವ ಸಾರಾ 'ಗುಲಾಬಿ ಬಾಲ್, ಟಶನ್ ವಾಲಿ ಚಾಲ್, 6 ದಿನೋ ಮೇ ಹೋ ಜಾಯೆ ಕಮಾಲ್, ತೋ ಕರೆಂಗೆ ಧಮಾಲ್ ಸವಾಲ್ ಲವ್ ಆಜ್ ಕಲ್' ಎಂಬ ಅಡಿಬರಹ ಬರೆದುಕೊಂಡಿದ್ದಾರೆ. ಸದ್ಯ ಸಾರಾ ತಮ್ಮ ಚಿತ್ರ 'ಲವ್ ಆಜ್ ಕಲ್' ಚಿತ್ರದ ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದಾರೆ. ಈ ಚಿತ್ರಕ್ಕೆ ಪ್ರಮೋಶನ್ ಗೆ ಸಂಬಂಧಿಸಿದ  ಫೋಟೋಗಳನ್ನು ತನ್ನ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡು ಸುದ್ದಿ ಮಾಡುತ್ತಲೇ ಇದ್ದಾರೆ. ಈ ಚಿತ್ರದಲ್ಲಿ ಸಾರಾ ಜೊತೆ ಕಾರ್ತಿಕ್ ಆರ್ಯನ್ ಕೂಡ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಈ ಎಲ್ಲ ಚಿತ್ರಗಳನ್ನು ಸಾರಾ ಅಲಿ ಖಾನ್ ಅವರ ಇನ್ಸ್ಟಾಗ್ರಾಮ್ ಖಾತೆಯಿಂದ ತೆಗೆದುಕೊಳ್ಳಲಾಗಿದೆ.

1 /13

2 /13

3 /13

4 /13

5 /13

6 /13

7 /13

8 /13

9 /13

10 /13

11 /13

12 /13

13 /13