ಹುಟ್ಟುಹಬ್ಬದಂದು ಪುತ್ರಿ ತ್ರಿಶಾಲಾ ಜೊತೆಗೆ ಸಂಜಯ್ ದತ್ ಫೋಟೋಸ್ ವೈರಲ್

ಇಂದು ಸಂಜಯ್ ದತ್ ಅವರ ಜನ್ಮದಿನವಾಗಿದ್ದು, ಈ ಸಂದರ್ಭದಲ್ಲಿ ಮಗಳು ತ್ರಿಶಲಾ ದತ್ ಅವರೊಂದಿಗಿನ ಅವರ ಫೋಟೋ ವೈರಲ್ ಆಗುತ್ತಿದೆ.
 

  • Jul 29, 2020, 14:11 PM IST

ನವದೆಹಲಿ: ನಟ ಸಂಜಯ್ ದತ್ ಹಿಂದಿ ಚಿತ್ರರಂಗದಲ್ಲಿ ಅತ್ಯುತ್ತಮ ಅಭಿನಯಕ್ಕೆ ಹೆಸರುವಾಸಿಯಾಗಿದ್ದಾರೆ. ಜನರು ಅವರನ್ನು ಪ್ರೀತಿಯಿಂದ ಸಂಜು ಬಾಬಾ, ಮುನ್ನಾ ಭಾಯ್ ಎಂದು ಕರೆಯುತ್ತಾರೆ. ಸಂಜಯ್ ದತ್ ಇಂದು ತಮ್ಮ 61 ನೇ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದಾರೆ. ಸಂಜಯ್ ದತ್ ಅವರ ಪತ್ನಿ ಮಾನ್ಯತಾ ದತ್ ಮತ್ತು ಇಬ್ಬರು ಮಕ್ಕಳೊಂದಿಗೆ ಮುಂಬೈನಲ್ಲಿ ವಾಸಿಸುತ್ತಿದ್ದರೆ, ಅವರ ಹಿರಿಯ ಮಗಳು ತ್ರಿಶಾಲ ದತ್ ತನ್ನ ತಾಯಿಯ ಪೋಷಕರೊಂದಿಗೆ ಯುಎಸ್ನಲ್ಲಿ ನೆಲೆಸಿದ್ದಾರೆ. ತ್ರಿಶಲಾ ದತ್ ಮತ್ತು ಸಂಜಯ್ ದತ್ ಒಬ್ಬರನ್ನೊಬ್ಬರು ಪ್ರತಿದಿನ ಭೇಟಿಯಾಗದೇ ಇರಬಹುದು, ಆದರೆ ತ್ರಿಶಾಲಾ ಸಂಜಯ್ ದತ್ ಅವರ ಮನಸ್ಸಿನಲ್ಲಿ ಸದಾ ಇರುತ್ತಾರೆ. ಅಪ್ಪ-ಮಗಳ ಹಳೆಯ ಫೋಟೋಗಳು ಇಂದು ವೈರಲ್ ಆಗಿವೆ.

1 /6

ಸಂಜಯ್ ದತ್ ತನ್ನ ಮಗಳು ತ್ರಿಶಾಲಾಳನ್ನು ಪ್ರತಿದಿನ ಭೇಟಿಯಾಗಲು ಸಾಧ್ಯವಾಗುತ್ತಿಲ್ಲ ಆದರೆ ಅವರ ಹೃದಯಕ್ಕೆ ತುಂಬಾ ಹತ್ತಿರವಾಗಿದ್ದಾರೆ.

2 /6

ಸಂಜಯ್ ದತ್ ಮಾನ್ಯತಾ ದತ್ ಅವರನ್ನು ಮದುವೆಯಾಗಿದ್ದಾರೆ ಮತ್ತು ಅವರಿಬ್ಬರಿಗೆ ಇಬ್ಬರು ಮಕ್ಕಳಿದ್ದಾರೆ. ಆದರೆ ಅವರ ಹಿರಿಯ ಮಗಳು ತ್ರಿಶಾಲಾ ಅವರ ಮೇಲಿನ ಪ್ರೀತಿ ಕೊಂಚವೂ ಕಡಿಮೆಯಿಲ್ಲ.

3 /6

ಸಂಜಯ್ ದತ್ ಅವರ ಹಿರಿಯ ಮಗಳು ತ್ರಿಶಾಲ ದತ್ ತನ್ನ ಅಜ್ಜಿ-ತಾತನೊಂದಿಗೆ ಯುಎಸ್ನಲ್ಲಿ ವಾಸಿಸುತ್ತಿದ್ದಾರೆ.

4 /6

ಈ ಹಳೆಯ ಫೋಟೋಗಳನ್ನು ನೋಡಿದಾಗ, ಸಂಜಯ್ ದತ್ ತನ್ನ ಮಗಳು ತ್ರಿಶಾಲಾಳ ಮೇಲೆ ಎಷ್ಟು ಪ್ರೀತಿಯಿದೆ ಎಂಬುದನ್ನು ತಿಳಿಯಬಹುದು.

5 /6

ತ್ರಿಶಲಾ ದತ್ ಸಂಜಯ್ ದತ್ ಅವರ ಮೊದಲ ಪತ್ನಿ ರಿಚಾ ಶರ್ಮಾ ಅವರ ಪುತ್ರಿ, ಅವರು ಬ್ರೈನ್ ಟ್ಯೂಮರ್ ನಿಂದಾಗಿ ವರ್ಷಗಳ ಹಿಂದೆ ನಿಧನರಾದರು.

6 /6

ತ್ರಿಶಲಾ ದತ್ ಅವರ ತಾಯಿ 1996 ರಲ್ಲಿ ಬ್ರೈನ್ ಟ್ಯೂಮರ್ ನಿಂದಾಗಿ ನಿಧನರಾದರು.