ನಟ ತಬಲಾ ನಾಣಿ ಅವರ ಹೆಂಡತಿ, ಮಗಳು ಇವರೇ! ಇವರ ಪುತ್ರಿಯೂ ಸಖತ್‌ ಫೇಮಸ್!!

Tabla nani Family: ಕನ್ನಡ ಚಿತ್ರರಂಗದ ಹಾಸ್ಯ ನಟ ಹಾಗೂ ಪೋಷಕ ನಟ ತಬಲಾ ನಾಣಿ ಸಾಕಷ್ಟು ದೊಡ್ಡ ನಟರೊಂದಿಗೆ ತೆರೆ ಹಂಚಿಕೊಂಡಿದ್ದಾರೆ.. ತಮ್ಮ ಅದ್ಭುತ ನಟನೆಯ ಮೂಲಕವೇ ಅಭಿಮಾನಿಗಳ ಮನಗೆದ್ದ ಅತ್ಯುನ್ನತ ಕಲಾವಿದರಿವರು.. 

1 /5

ಕಿರುತೆರೆಯಲ್ಲಿ ನಟಿಸುವ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ತಬಲಾ ನಾಣಿ ತಮಗೆ ಸಿಕ್ಕ ಸಣ್ಣ ಪುಟ್ಟ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಬಣ್ಣದ ಲೋಕದಲ್ಲಿ ತಮಗೊಂದು ನೆಲೆಯನ್ನು ಕಂಡುಕೊಂಡರು..   

2 /5

ಸಿನಿರಂಗಕ್ಕೆ ಕಾಲಿಟ್ಟ ಮೇಲೆ ತಮ್ಮ ನಟನಾ ಕೌಶಲ್ಯವನ್ನು ತೋರಿಸಿ ಸೈ ಎನಿಸಿಕೊಂಡ ತಬಲಾ ನಾಣಿ ನೂರಾರು ಪಾತ್ರಗಳಲ್ಲಿ ಸಿನಿಪ್ರಿಯರಿಗೆ ನಗೆಯ ಔತನವನ್ನು ನೀಡಿದ್ದಾರೆ.  

3 /5

ಮಠ ಸಿನಿಮಾದ ಮೂಲಕ ಸಿನಿರಂಗಕ್ಕೆ ಕಾಲಿಟ್ಟ ತಬಲಾ ನಾಣಿ ಈ ಸಿನಿಮಾದಲ್ಲೇ ಎಲ್ಲರ ಗಮನ ಸೆಳೆಯುವಲ್ಲಿ ಯಶಸ್ವಿಯಾದರು.. ಅದಾದ ನಂತರ ಅವರು ಹಲವಾರು ಸಿನಿಮಾಗಳಲ್ಲಿ ಕುಡುಕನ ಪಾತ್ರದಲ್ಲಿ ಮಿಂಚಿದ್ದಾರೆ..   

4 /5

ಇನ್ನು ತಬಲಾ ನಾಣಿಯವರ ವೈಯಕ್ತಿಕ ವಿಚಾರಕ್ಕೆ ಬರುವುದಾದರೇ ಅವರಿಗೆ ಒಬ್ಬ ಮಗಳಿದ್ದಾಳೆ.. ಅವರ ಹೆಸರು ಚಿತ್ರಾ.. ಇವರೂ ತಂದೆಯಂತಯೇ ಅದ್ಭುತ ಪ್ರತಿಭೆ ಎಂದರೇ ತಪ್ಪಾಗುವುದಿಲ್ಲ.. ಅಪ್ಪ ನಟನೆಯಲ್ಲಿ ಗುರುತಿಸಿಕೊಂಡರೆ, ಪುತ್ರಿ ನಾಯಕಿಯಾಗಿ ಹೆಸರು ಮಾಡುತ್ತಿದ್ದಾರೆ.  

5 /5

ಅಷ್ಟೇ ಅಲ್ಲ ಚಿತ್ರ ಡಬ್ಬಿಂಗ್‌ ಆರ್ಟಿಸ್ಟ್‌ ಕೂಡ ಹೌದು.. ಅವರು ಹಾಡಿರುವ ಕೆಲವು ವಿಡಿಯೋಗಳ ಸೋಷಿಯಲ್‌ ಮಿಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿವೆ.. ಒಟ್ಟಾರೆಯಾಗಿ ತಂದೆಯಂತೆ ಮಗಳು ಕೂಡ ಪ್ರತಿಭೆಯಲ್ಲಿ ಕಡಿಮೆಯಿಲ್ಲ ಎನ್ನುವಂತಿದ್ದಾರೆ..