Ramya Photo Viral : ಮೋಹಕತಾರೆ ರಮ್ಯಾ 18ನೇ ವಯಸ್ಸಿನ ಫೋಟೋ ಸಖತ್ ವೈರಲ್..!

ರಮ್ಯಾ ಹಳೆಯ ಫೋಟೋವೊಂದು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಬೆಂಗಳೂರು : ಮೋಹಕತಾರೆ ರಮ್ಯಾ ಮತ್ತೆ ಚಿತ್ರರಂಗಕ್ಕೆ ಮತ್ತೆ ಎಂಟ್ರಿ ನೀಡಲಿದ್ದಾರೆ ಎಂಬ ಎಂಬ ಸುದ್ದಿಯ ಬೆನ್ನಲ್ಲೇ ರಮ್ಯಾ ಹಳೆಯ ಫೋಟೋವೊಂದು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

 

1 /4

ಈ ಸಿನಿ ತಾರೆಯರು ತಮ್ಮ ಹಳೆಯ ಫೋಟೋಗಳ ಶೇರ್ ಮಾಡಿಕೊಳ್ಳುವ ಮೂಲಕ ತಮ್ಮ ಹಳೆಯ ನೆನಪುಗಳನ್ನ ಮೆಲಕು ಹಾಕುತ್ತಿರುತ್ತಾರೆ. ಈಗ ಮೋಹಕತಾರೆ ರಮ್ಯಾ ತಮ್ಮ 18ನೇ ವಯಸ್ಸಿನ ಫೋಟೋವನ್ನ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.  

2 /4

ಸಧ್ಯ ಈ ಫೋಟೋ ಸಖತ್ ವೈರಲ್ ಆಗುತ್ತಿದೆ. ರಮ್ಯಾ ತಮ್ಮ 21ನೇ ವಯಸ್ಸಿನಲ್ಲಿ 'ಅಭಿ' ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ನೀಡಿದರು. ಈ ಫೋಟೋ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಡುವ ಮುನ್ನ ಕಾಲೇಜಿನ ಐಡಿ ಕಾರ್ಡ್‌ ಶೇರ್ ಮಾಡಿದ್ದಾರೆ.

3 /4

18ನೇ ವಯಸ್ಸಿನಲ್ಲಿ ನಾನು ಎಂಬ ಕ್ಯಾಪ್ಶನ್ ನೊಂದಿಗೆ ರಮ್ಯಾ ಶೇರ್ ಮಾಡಿದ್ದಾರೆ. ರಮ್ಯಾ ಕಾಲೇಜು ದಿನದ ಫೋಟೋ ನೋಡಿ ಫ್ಯಾನ್ಸ್ ಕೂಡ ಫುಲ್ ಖುಷಿಯಾಗಿದ್ದಾರೆ.

4 /4

ಟಾಪ್ 5 ನಟಿಯರ ಲಿಸ್ಟ್​ನಲ್ಲಿ ರಮ್ಯಾ : ರಮ್ಯಾ ಯಾವುದೇ ಸಿನಿಮಾದಲ್ಲಿ ನಟಿಸದೇ ಇದ್ದರೂ ಸಹ ಟಾಪ್ 5 ನಟಿಯರ ಪಟ್ಟಿಯಲ್ಲಿ ಹೆಸರುಗಳಿಸಿದ್ದಾರೆ. ಓರಾಮ್ಯಾಕ್ಸ್​ ಸಂಸ್ಥೆಯು ಕನ್ನಡದ ಫೇಮಸ್ ಟಾಪ್​ ನಟಿಯರ ಸಮೀಕ್ಷೆ ಮಾಡಿದ್ದು, ಅದರಲ್ಲಿ ರಮ್ಯಾ ಕೂಡ ಸ್ಥಾನ ಪಡೆದಿದ್ದಾರೆ. ಈ ಸಮೀಕ್ಷೆಯನ್ನು ಟ್ವಿಟ್ಟರ್​ನಲ್ಲಿ ಶೇರ್ ಮಾಡಿಕೊಂಡಿರುವ ಅವರು ನಾನು ಕಳೆದ 8 ವರ್ಷಗಳಿಂದ ಸಿನಿಮಾ ರಂಗದಿಂದ ದೂರವಿದ್ದರೂ ಸಹ ಈ ಪಟ್ಟಿಯಲ್ಲಿ ಸ್ಥಾನ ಸಿಕ್ಕಿದ್ದು ಬಹಳ ಸಂತೋಷವಾಗಿದೆ. ರಚಿತಾ ರಾಮ್​, ಆಶಿಕಾ ರಂಗನಾಥ್, ರಾಧಿಕಾ ಪಂಡಿತ್ ಹಾಗೂ ರಶ್ಮಿಕಾ ಜೊತೆ ಸ್ಥಾನ ಪಡೆದಿರುವುದು ಖುಷಿಯಾಗುತ್ತಿದೆ ಎಂದು ಬರೆದುಕೊಂಡಿದ್ದಾರೆ.