Aashika Ranganath Saree Photos: ಸ್ಯಾಂಡಲ್ವುಡ್’ನ ಸುಂದರಿ ಆಶಿಕಾ ರಂಗನಾಥ್ ಅವರ ಮುದ್ದಾದ ಫೋಟೋಗಳನ್ನು ನೀವಿಲ್ಲ ನೋಡಬಹುದು. ಅಪ್ಪಟ ಕನ್ನಡತಿಯಂತೆ ರೇಷ್ಮೆ ಸೀರೆಯಲ್ಲಿ ಮಿಂಚುತ್ತಿರುವ ನಟಿಗೆ ದೃಷ್ಟಿ ಬೀಳದಿರಲಪ್ಪಾ…
ಆಶಿಕಾ ರಂಗನಾಥ್ ಕನ್ನಡ ಸಿನಿರಂಗದ ಅದ್ಭುತ ಕಲಾವಿದೆ. ತಮ್ಮ ನಟನೆಯಿಂದಲೇ ಜನಮನ ಗೆದ್ದ ಅವರ ಒಂದಿಷ್ಟು ಫೋಟೋಗಳು ಜೊತೆಗೆ ನಟಿಯ ಹಿನ್ನೆಲೆ ತಿಳಿಸಿಕೊಡಲಿದ್ದೇವೆ.
ಆಶಿಕಾ ರಂಗನಾಥ್ ಅವರು ಕನ್ನಡ ಮತ್ತು ತೆಲುಗು ಭಾಷೆಯ ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. 2016 ರಲ್ಲಿ ಕ್ರೇಜಿ ಬಾಯ್ ಮತ್ತು 2018ರಲ್ಲಿ ರಾಂಬೊ 2ನಲ್ಲಿ ಅಭಿನಯಿಸಿದ ಪಾತ್ರದಿಂದ ಬಹಳ ಜನಪ್ರಿಯರಾದರು.
ಆಶಿಕಾ ಅವರು ಹಾಸನ ಮೂಲದವರು. ರಂಗನಾಥ್ ಮತ್ತು ಸುಧಾ ರಂಗನಾಥ್ ದಂಪತಿಯ ಪುತ್ರಿಯಾಗಿ ಜನಿಸಿದ ಅವರಿಗೆ ಸಹೋದರಿಯೂ ಇದ್ದಾರೆ. ಅವರ ಅನುಷಾ ರಂಗನಾಥ್. ಇವರು ಕೂಡ ನಟಿ.
ಕ್ಲೀನ್ ಮತ್ತು ಕ್ಲಿಯರ್ ಫ್ರೆಶ್ ಫೇಸ್ ಬೆಂಗಳೂರು ಸ್ಪರ್ಧೆಗಾಗಿ ಆಡಿಷನ್ ನೀಡಿದ್ದರು. ಮಿಸ್ ಫ್ರೆಶ್ ಫೇಸ್ 2014 ರ ರನ್ನರ್ ಅಪ್ ಆಗಿ ಹೊರಹೊಮ್ಮಿದರು.
ನಟನೆಯ ಜೊತೆಗೆ ಫ್ರೀಸ್ಟೈಲ್, ಬೆಲ್ಲಿ ಡ್ಯಾನ್ಸ್, ವೆಸ್ಟರ್ನ್ ಸೇರಿದಂತೆ ವಿವಿಧ ನೃತ್ಯ ಪ್ರಕಾರಗಳಲ್ಲಿ ತರಬೇತಿ ಪಡೆದಿದ್ದಾರೆ ಆಶಿಕಾ. ಇವೆಲ್ಲದರ ಜೊತೆಗೆ SIIMA ದಿಂದ ಅತ್ಯುತ್ತಮ ಚೊಚ್ಚಲ ನಟಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದರು.
ಸದ್ಯ ಪವನ್ ಒಡೆಯರ್ ನಿರ್ದೇಶನದ ಇಶಾನ್ ಹಾಗೂ ಆಶಿಕಾ ರಂಗನಾಥ್ ನಟನೆಯ ‘ರೇಮೊ’ ಸಿನಿಮಾ ಒಟಿಟಿಗೆ ಮಾರ್ಚ್ 10ರಂದು ಎಂಟ್ರಿ ಕೊಟ್ಟಿದೆ. ಈ ಸಿನಿಮಾದಲ್ಲಿ ಆಶಿಕಾ ಅಭಿನಯಿಸಿದ್ದಾರೆ.