ನೆನಪಿದ್ದಾರಾ ದರ್ಶನ್‌ ಅಭಿನಯದ ಲಾಲಿಹಾಡು ನಟಿ ಅಭಿರಾಮಿ.. ಈಕೆ ಮದುವೆಯಾಗಿದ್ದು ಯಾರನ್ನ ಗೊತ್ತಾ? ಅವರೂ ಸಖತ್‌ ಫೇಮಸ್!!

Laalihaadu Movie Actress Abhirami: ಕೆಲ ವರ್ಷಗಳಿಂದ ಸಿನಿಮಾದಿಂದ ದೂರ ಉಳಿದಿದ್ದ ಅಭಿರಾಮಿ ಇತ್ತೀಚೆಗೆ ಮಧ್ಯೆ ಮಧ್ಯೆ ಸಿನಿಮಾ ಮಾಡುತ್ತಿದ್ದಾರೆ. ಇತ್ತೀಚೆಗೆ ನಟಿಯ ವೈಯಕ್ತಿಕ ಜೀವನದ ಬಗ್ಗೆ ಕೆಲವು ಇಂಟ್ರೆಸ್ಟಿಂಗ್‌ ಮಾಹಿತಿಗಳು ಹೊರಬಿದ್ದಿವೆ.. 
 

1 /5

ನಟಿ ಅಭಿರಾಮಿ ಮಲಯಾಳಂ, ತೆಲುಗು, ಕನ್ನಡ ಮತ್ತು ತಮಿಳು ಭಾಷೆಗಳಲ್ಲಿ ನಾಯಕಿಯಾಗಿ ಹಲವು ಚಿತ್ರಗಳನ್ನು ಮಾಡಿದ್ದಾರೆ. ಆದರೆ ಮದುವೆಯ ನಂತರ ಕೆಲ ವರ್ಷಗಳ ಕಾಲ ಸಿನಿಮಾದಿಂದ ದೂರ ಉಳಿದಿದ್ದ ಅಭಿರಾಮಿ ಇತ್ತೀಚೆಗೆ ಒಂದಿಲ್ಲೊಂದು ಸಿನಿಮಾ ಮಾಡುತ್ತಿದ್ದಾರೆ.   

2 /5

ಪ್ರತಿಯೊಬ್ಬರೂ ಜೀವನದಲ್ಲಿ ಸಾಕಷ್ಟು ಏರುಪೇರುಗಳನ್ನು ಅನುಭವಿಸುತ್ತಾರೆ.. ಅದರಲ್ಲೂ ಹೆಣ್ಣು ಮಕ್ಕಳಿಗೆ ಯೌವನ, ಮದುವೆ.. ತಾಯಿಯಾಗುವುದು ಒಂದು ಸುಂದರ ಕ್ಷಣ.. ಆದರೆ ಎಷ್ಟೋ ಜನರಿಗೆ ಈ ಭಾಗ್ಯವೇ ಇರುವುದಿಲ್ಲ.. ಜೀವನದಲ್ಲಿ ಎಲ್ಲ ಇದ್ದರೂ ಮಕ್ಕಳಿಲ್ಲ ಅನ್ನೋ ಕೊರತೆ ಮಾತ್ರ ಇದ್ದೆ ಇರುತ್ತದೆ..   

3 /5

ಹೌದು ಲಾಲಿ ಹಾಡು ಸಿನಿಮಾದಲ್ಲಿ ನಟ ದರ್ಶನ್‌ ಜೊತೆ ಅದ್ಭುತವಾಗಿ ನಟಿಸಿ ಕನ್ನಡಾಭಿಮಾನಿಗಳ ಮನಗೆದ್ದ ಚೆಲುವೆ ಸಿನಿಜೀವನದಲ್ಲಿ ಕಂಡಂತ ಯಶಸ್ಸನ್ನು ವೈಯಕ್ತಿಕ ಜೀವನದಲ್ಲಿ ಕಾಣಲಿಲ್ಲ..   

4 /5

ನಟಿ ಅಭಿರಾಮಿ 2009ರಲ್ಲಿ ಮಲಯಾಳಂ ಖ್ಯಾತ ಸಾಹಿತಿ ಪುತನ್‌ ವೆಟೆಲ್‌ ನಾರಾಯಣನ್‌ ನಾಯರ್‌ ಅವರ ಮೊಮ್ಮಗ ರಾಹುಲ್‌ ಪವನ್‌ ಎಂಬುವರರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು..   

5 /5

ಬಹುಭಾಷಾ ನಟಿಯಾಗಿ ಗುರುತಿಸಿಕೊಂಡಿರುವ ನಟಿ ಅಭಿರಾಮಿ ಅವರಿಗೆ ಮಕ್ಕಳಾಗಿಲ್ಲ.. ಹೀಗಾಗಿ ನಟಿ ಹೆಣ್ಣು ಮಗುವನ್ನು ದತ್ತು ಪಡೆದಿದ್ದಾರೆ.. ಈ ವಿಚಾರವನ್ನು ಅಭಿರಾಮಿಯವರು ಸೋಷಿಯಲ್‌ ಮಿಡಿಯಾದ ಮೂಲಕ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದರು..