ಶುಕ್ರ-ರಾಹುಗಳ ಮೈತ್ರಿಯಿಂದ ಸಮಸಪ್ತಕ ಯೋಗ ನಿರ್ಮಾಣ, ಈ ರಾಶಿಗಳ ಜನರ ಶುಕ್ರದೆಸೆ ಆರಂಭ!

Samasaptak Yog 2023: ಇಂದು ವೃದ್ಧಿ ಯೋಗ, ಧ್ರುವ ಯೋಗ ಸೇರಿದಂತೆ ಅನೇಕ ಶುಭ ಯೋಗಗಳು ರೂಪುಗೊಂಡಿವೆ, ಈ ಕಾರಣದಿಂದಾಗಿ ಇಂದು ವೃಷಭ, ಕರ್ಕ ಮತ್ತು ಇತರ ಐದು ರಾಶಿಗಳಿಗೆ ಉತ್ತಮ ದಿನವಾಗಿದೆ. ಇದಲ್ಲದೆ ಇಂದು ಶುಕ್ರ ಮತ್ತು ರಾಹುಗಳು ಪರಸ್ಪರರ ಸಪ್ತಮ ಭಾವದಲ್ಲಿದ್ದಾರೆ (Spiritual News In Kannada)
 

ಬೆಂಗಳೂರು: ಇಂದು, ಚಂದ್ರ ಶನಿಯ ರಾಶಿಯಾಗಿರುವ ಮಕರ ರಾಶಿಗೆ ಸಾಗಿದ್ದಾನೆ. ಅಲ್ಲದೆ, ಇಂದು ಶುಕ್ರ ಮತ್ತು ರಾಹು ಇಬ್ಬರೂ ಪರಸ್ಪರ ಏಳನೇ ಭಾವದಲ್ಲಿದ್ದಾರೆ, ಇದರಿಂದಾಗಿ ಶುಕ್ರ ಮತ್ತು ರಾಹುವಿನ ಸಮಸಪ್ತಕ ಯೋಗ ರೂಪುಗೊಂಡಿದೆ. ಈ ಯೋಗದ ಹೊರತಾಗಿ, ಇಂದು ವೃದ್ಧಿ ಯೋಗ, ಧ್ರುವ ಯೋಗ ಮತ್ತು ಶ್ರವಣ ನಕ್ಷತ್ರದ ಮಂಗಳಕರ ಸಂಯೋಜನೆಯೂ ನೆರವೇರಿದೆ.  ವೈದಿಕ ಜ್ಯೋತಿಷ್ಯದ ಪ್ರಕಾರ, ಇಂದು ರೂಪುಗೊಂಡ ಈ  ಮಂಗಳಕರ ಯೋಗಗಳು ಐದು ರಾಶಿಗಳ ಜನರ ಮೇಲೆ ಸಕಾರಾತ್ಮಕ ಪ್ರಭಾವ ಬೀರುತ್ತದೆ. ಈ ರಾಶಿಗಳ ಜನರ ಪ್ರತಿಷ್ಠೆಯು ಹೆಚ್ಚಾಗಲಿದೆ ಮತ್ತು ಭವಿಷ್ಯದಲ್ಲಿ ಅವರಿಗೆ ಸಾಕಷ್ಟು ಲಾಭವನ್ನು ಕರುಣಿಸಲಿದೆ.  ಆ ಅದೃಷ್ಟವಂತ ರಾಶಿಗಳು ಯಾವುವು ತಿಳಿದುಕೊಳ್ಳೋಣ ಬನ್ನಿ, (Spiritual News In Kannada)

 

ಇದನ್ನೂ ಓದಿ-ಜೂನ್ 2024 ರಲ್ಲಿ ಶನಿ ಬದಲಾಯಿಸಲಿದ್ದಾನೆ ಈ ಜನರ ಅದೃಷ್ಟ, ನೌಕರಿ-ವ್ಯಾಪಾರದಲ್ಲಿ ಉನ್ನತಿಯ ಜೊತೆಗೆ ಲಗ್ಜರಿ ಲೈಫ್ ಕರುಣಿಸಲಿದ್ದಾನೆ!

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /6

ವೃಷಭ ರಾಶಿ: ಸಮಸಪ್ತಕ ರಾಜಯೋಗ ನಿಮ್ಮ ಪಾಲಿಗೆ ಶುಭ ಸಾಬೀತಾಗಲಿದೆ. ನೀವು ಹೊಸ ವಾಹನ ಅಥವಾ ಭೂಮಿಯನ್ನು ಖರೀದಿಸಲು ಬಯಸಿದರೆ ಈ ಸಮಯ ಉತ್ತಮವಾಗಿದೆ. ಸೂರ್ಯದೇವನ ಕೃಪೆಯಿಂದ ನಿಮ್ಮ ಆರ್ಥಿಕ ಸ್ಥಿತಿಯು ಮೊದಲಿಗಿಂತ ಬಲವಾಗಿರುತ್ತದೆ ಮತ್ತು ನಿಮ್ಮ ತಿಜೋರಿಯಲ್ಲಿ ಉತ್ತಮ ಧನವೃದ್ಧಿ ಕಾಣಬಹುದು. ಇದರಿಂದ ನಿಮ್ಮ ಜೀವನದಲ್ಲಿ ಸಂತಸದ ವಾತಾವರಣ ಇರಲಿದೆ. ಯಾವುದಾದರೊಂದು ಹೊಸ ವ್ಯವಹಾರ ಆರಂಭಿಸಲು ಈ ಸಮಯ ಉತ್ತಮವಾಗಿದೆ ಮತ್ತು ನಿಮ್ಮ ಗೌರವವೂ ಹೆಚ್ಚಾಗಲಿದೆ. ವ್ಯಾಪಾರಕ್ಕೆ ಸಂಬಂಧಿಸಿದಂತೆ ಯಾತ್ರೆ ಸಂಭವಿಸುವ ಸಾಧ್ಯತೆ ಇದ್ದು, ಇದರಿಂದ ಭವಿಷ್ಯದಲ್ಲಿ ನಿಮಗೆ ಲಾಭವಾಗುವ ಸಾಧ್ಯತೆ ಇದೆ.   

2 /6

ಕರ್ಕ ರಾಶಿ: ಕರ್ಕ ರಾಶಿಯವರಿಗೆ ಇಂದು ನಿರ್ಮಾಣಗೊಂಡ ಧ್ರುವಯೋಗ ಉತ್ತಮವಾಗಿರಲಿದೆ. ಇದರಿಂದನೀವು ಸುಲಭವಾಗಿ ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗಲಿದೆ, ಅದು ನಿಮಗೆ ಫಲಪ್ರದವಾಗುತ್ತದೆ. ವ್ಯಾಪಾರದಲ್ಲಿ ನಿರತರಾಗಿರುವವರಿಗೆ ಉತ್ತಮ ಲಾಭ ಉಂಟಾಗುವ ಸಾಧ್ಯತೆ ಇದೆ. ಹಣವನ್ನು ಉಳಿಸುವಲ್ಲಿ ಯಶಸ್ವಿಯಾಗುವಿರಿ, ಇದು ನಿಮ್ಮ ಆರ್ಥಿಕ ಸ್ಥಿತಿಯನ್ನು ಬಲಪಡಿಸುತ್ತದೆ. ಕೌಟುಂಬಿಕ ಜೀವನದ ಬಗ್ಗೆ ಹೇಳುವುದಾದರೆ, ಕೌಟುಂಬಿಕ ಜೀವನ ಸುಖಮಯವಾಗಿರಲಿದೆ. ಹೊಸದಾಗಿ ವಿವಾಹ ಮಾಡಿಕೊಂಡವರಿಗೆ ಸಂತಾನ ಭಾಗ್ಯ ಪ್ರಾಪ್ತಿಯಾಗುವ  ಸಾಧ್ಯತೆ ಇದೆ. ಇದೇ ವೇಳೆ, ಒಂಟಿ ಜನರಿಗೆ ಮದುವೆಯ ಪ್ರಸ್ತಾಪ ಬರುವ ಸಾಧ್ಯತೆ ಇದೇ. 

3 /6

ಸಿಂಹ ರಾಶಿ: ಸಿಂಹ ರಾಶಿಯವರಿಗೆ ಮಂಗಳಕರ ಯೋಗದಿಂದ ಸಾಕಷ್ಟು ಲಾಭ ಸಿಗಲಿದೆ ಯಾವುದೇ ಕೆಲಸದಲ್ಲಿ ನಿಮಗೆ ಉತ್ತಮ ಯಶಸ್ಸು ಸಿಗಲಿದೆ.  ಉತ್ತಮ ಆದಾಯದ ಹರಿವು ಇರಲಿದೆ. ವ್ಯಾಪಾರದಲ್ಲಿ ಉತ್ತಮ ಲಾಭದೊಂದಿಗೆ ನೀವು ಸಂತೋಷವಾಗಿರುತ್ತೀರಿ ಮತ್ತು ವ್ಯವಹಾರದಲ್ಲಿ ಕೆಲವು ಹೊಸ ಯೋಜನೆಗಳನ್ನು ಸಹ ಪ್ರಾರಂಭಿಸಬಹುದು. ಪ್ರೇಮ ಜೀವನದಲ್ಲಿರುವವರಲ್ಲಿ ಹೊಸ ಶಕ್ತಿಯ ಒಳಹರಿವು ಇರಲಿದೆ, ಇದು ಅವರ ಸಂಬಂಧದಲ್ಲಿ ಹೊಸತನವನ್ನು ತರುತ್ತದೆ ಮತ್ತು ಸಂಬಂಧವನ್ನು ಮತ್ತಷ್ಟು ಗಟ್ಟಿಯಾಗಿಸುತ್ತದೆ. ಧಾರ್ಮಿಕ ಕೆಲಸ ಕಾರ್ಯಗಳಲ್ಲಿ ನೀವು ಪಾಲ್ಗೊಳ್ಳುವ ಸಾಧ್ಯತೆ ಇದೆ. ನಿಮ್ಮ ಸಂಗಾತಿಯೊಂದಿಗೆ ನೀವು ಕೆಲವು ಧಾರ್ಮಿಕ ಸ್ಥಳಗಳಿಗೆ ಪ್ರವಾಸಕ್ಕೆ ಹೋಗಬಹುದು. 

4 /6

ಕನ್ಯಾ ರಾಶಿ: ಕನ್ಯಾ ರಾಶಿಯ ಜನರ ಪಾಲಿಗೂ ಕೂಡ ಈ ಮಂಗಳಕರ ಯೋಗಗಳು ಶುಭ ಸಾಬೀತಾಗಲಿವೆ. ಇದರಿಂದ ಎಲ್ಲಾ ಕೆಲಸ ಕಾರ್ಯಗಳಲ್ಲಿ ನಿಮಗೆ ಸಾಕಷ್ಟು ಉತ್ಸಾಹ ಇರಲಿದ್ದು, ಸ್ವಂತ ವ್ಯಾಪಾರ ಮಾಡುತ್ತಿರುವ ಕನ್ಯಾ ರಾಶಿಯ ಜನರು ಪ್ರತಿಸ್ಪರ್ಥಿಗಳಿಗೆ ಕಠಿಣ ಸ್ಪರ್ಧೆ ಒಡ್ಡಲಿದ್ದಾರೆ. ಬುದ್ಧಿವಂತಿಕೆಯಿಂದ ಉತ್ತಮ ಲಾಭವನ್ನು ಗಳಿಸುವಲ್ಲಿ ನೀವು ಯಶಸ್ವಿಯಾಗುವಿರಿ. ವೈವಾಹಿಕ ಜೀವನದ ಬಗ್ಗೆ ಹೇಳುವುದಾದರೆ, ನಿಮ್ಮ ಸಂಗಾತಿಯೊಂದಿಗಿನ ನಿಮ್ಮ ಸಂಬಂಧವು ಉತ್ತಮವಾಗಿರುತ್ತದೆ ಮತ್ತು ನಿಮ್ಮ ಮಕ್ಕಳ ಭವಿಷ್ಯಕ್ಕಾಗಿ ನೀವು ಹೂಡಿಕೆ ಯೋಜನೆಗಳನ್ನು ಮಾಡುವಲ್ಲಿ ಯಶಸ್ವಿಯಾಗುವಿರಿ.

5 /6

ವೃಶ್ಚಿಕ ರಾಶಿ: ನಿಮ್ಮ ಪಾಲಿಗೆ ಸಮಸಪ್ತಕ ಯೋಗದಿಂದ ಲಾಭ ಉಂಟಾಗಲಿದೆ. ಈ ಅವಧಿಯಲ್ಲಿ ನೀವು ಧಾರ್ಮಿಕ ಮತ್ತು ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ನಿಮ್ಮ ಗೌರವ ಹೆಚ್ಚಾಗಲಿದೆ. ನೆನೆಗುದಿಗೆ ಬಿದ್ದ ಕೆಲಸ ಕಾರ್ಯಗಳಲ್ಲಿ ಯಶಸ್ಸು ನಿಮ್ಮದಾಗಲಿದೆ.  ಕುಟುಂಬದ ಸದಸ್ಯರೊಂದಿಗೆ ನಿಮ್ಮ ಸಂಬಂಧವು ಉತ್ತಮವಾಗಿರುತ್ತದೆ ಮತ್ತು ಪ್ರತಿಯೊಬ್ಬ ಸದಸ್ಯರ ಆಸೆಗಳನ್ನು ಪೂರೈಸುವಲ್ಲಿ ನೀವು ಯಶಸ್ವಿಯಾಗುತ್ತೀರಿ. ನಿಮ್ಮ ಮತ್ತು ನಿಮ್ಮ ಕುಟುಂಬದ ಅಗತ್ಯಗಳನ್ನು ಪೂರೈಸುವಲ್ಲಿ ನೀವು ಯಶಸ್ವಿಯಾಗುತ್ತೀರಿ, ಇದು ಕುಟುಂಬದಲ್ಲಿ ನಿಮಗಾಗಿ ಹೊಸ ಗುರುತನ್ನು ಸೃಷ್ಟಿಸಲಿದೆ. ಮನೆಯಲ್ಲಿ ಓರ್ವ ಸದಸ್ಯನ ಮದುವೆಯ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆ ಇದೆ, ಅದರಲ್ಲಿ ಕುಟುಂಬದವರೆಲ್ಲ ಭಾಗಿಯಾಗಲಿದ್ದಾರೆ. ಧಾರ್ಮಿಕ ಕ್ಷೇತ್ರಕ್ಕೆ ಯಾತ್ರೆ ಸಂಭವಿಸುವ ಸಾಧ್ಯತೆ ಇದೆ. 

6 /6

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)