SIIMA 2022: ಸೈಮಾ 2022ರಲ್ಲಿ ‘ಅಪ್ಪು’ಗೆ ಅತ್ಯುತ್ತಮ ನಟ ಪ್ರಶಸ್ತಿ: ಅವಾರ್ಡ್ ವಿಜೇತರ ಪಟ್ಟಿ ಇಲ್ಲಿದೆ

ಸೆಪ್ಟೆಂಬರ್ 10 ಬೆಂಗಳೂರಿನಲ್ಲಿ ಸೈಮಾ 2022 ಕಾರ್ಯಕ್ರಮ ಅದ್ಧೂರಿಯಾಗಿ ನಡೆದಿದೆ. ಚಿತ್ರರಂಗದ ಻ನೇಕ ಕಲಾವಿದರು, ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇನ್ನು 2021ರಲ್ಲಿ ತೆರೆಗೆ ಬಂದ ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಸಿನಿಮಾಗಳಿಗೆ ಅನೇಕ ವಿಭಾಗಗಳಲ್ಲಿ ನಾಮಿನೇಷನ್ ಮಾಡಿ, ಆ ಪೈಕಿ ಗೆದ್ದ ಚಿತ್ರಕ್ಕೆ ಪ್ರಶಸ್ತಿಗಳನ್ನು ನೀಡಲಾಗುತ್ತದೆ. 

1 /5

ಸೌತ್ ಇಂಡಿಯನ್ ಇಂಟರ್​ನ್ಯಾಷನಲ್​ ಮೂವಿ ಅವಾರ್ಡ್ಸ್​’ ಎಂದರೆ ಸೈಮಾದ ವಿಸ್ಕೃತ ರೂಪ. 2012ರಲ್ಲಿ ಪ್ರಾರಂಭಗೊಂಡ ಈ ಕಾರ್ಯಕ್ರಮ ಇದೀಗ 10 ವರ್ಷದ ಸಂಭ್ರಮಾಚರಣೆಯಲ್ಲಿ ಇದೆ. ಪ್ರತಿ ಭಾಷೆಯಲ್ಲಿ ಸುಮಾರು 19 ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ನೀಡಲಾಗುತ್ತದೆ.

2 /5

ಕನ್ನಡದ ಯುವರತ್ನ ಸಿನಿಮಾದ ನಟನೆಗೆ ಅತ್ಯುತ್ತಮ ನಟ ಪ್ರಶಸ್ತಿಯನ್ನು ದಿವಂಗತ ನಟ ಪುನೀತ್ ರಾಜ್​ಕುಮಾರ್ ಪಡೆದಿದ್ದಾರೆ.

3 /5

ಅತ್ಯುತ್ತಮ ಹಾಸ್ಯ ನಟ- ಚಿಕ್ಕಣ್ಣ (ಪೊಗರು) ಪಡೆದುಕೊಂಡಿದ್ದಾರೆ. ಅತ್ಯುತ್ತಮ ನಿರ್ದೇಶನ- ತರುಣ್ ಸುಧೀರ್ (ರಾಬರ್ಟ್​) ಈ ಪ್ರಶಸ್ತಿ ಬಾಚಿಕೊಂಡಿದ್ದಾರೆ

4 /5

ಇನ್ನು ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿಯನ್ನು ಆರೋಹಿ ನಾರಾಯಣ್ (ದೃಶ್ಯ 2) ಪಡೆದಿದ್ದಾರೆ. ಅತ್ಯುತ್ತಮ ಪೋಷಕ ನಟನಾಗಿ ಪ್ರಮೋದ್​ (ರತ್ನನ್​ ಪ್ರಪಂಚ) ಪ್ರಶಸ್ತಿ ಗೆದ್ದಿದ್ದಾರೆ

5 /5

ಅತ್ಯುತ್ತಮ ಹಿನ್ನೆಲೆ ಗಾಯಕಿ (ಕನ್ನಡ)- ಚೈತ್ರಾ ಆಚಾರ್ (‘ಗರುಡ ಗಮನ ವೃಷಭ ವಾಹನ’ ಚಿತ್ರದ ‘ಸೋಜುಗಾದ ಸೂಜುಮಲ್ಲಿಗೆ ಹಾಡು’) ಅತ್ಯುತ್ತಮ ಸಂಗೀತ ನಿರ್ದೇಶಕರಾಗಿ  ಅರ್ಜುನ್ ಜನ್ಯ (ರಾಬರ್ಟ್​) ಹೊರಹೊಮ್ಮಿದ್ದಾರೆ. ಇನ್ನು ಈ ಕಾರ್ಯಕ್ರಮದಲ್ಲಿ ನಟ ಯಶ್, ತೆಲುಗು ನಟ ಅಲ್ಲು ಅರ್ಜುನ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.